ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ ಒಂದೇ ಗೇಟ್ ಮೂಲಕ ನೀರು ಹೊರಹೋಗುತ್ತಿರುವದು.
ಹಿಪ್ಪರಗಿ ಜಲಾಶಯದಿಂದ ಒಂದೇ ಗೇಟ್ ಮೂಲಕ ನೀರು ಹೊರಕ್ಕೆ
*18 ಸಾವಿರ ಕ್ಯುಸೆಕ್ ಒಳಹರಿವು, 14 ಸಾವಿರ ಕ್ಯುಸೆಕ್ ಹೊರಹರಿವು
ರಬಕವಿ-ಬನಹಟ್ಟಿ,ಸೆ17: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಂದ, ಅಲ್ಲಿನ ಕೃಷ್ಣಾ ನದಿಯ ಎಲ್ಲ ಜಲಾಶಯಗಳ ನೀರಿನ ಮಟ್ಟ ಒಂದು ಹಂತಕ್ಕೆ ತಲುಪಿದ್ದರ ಹಿನ್ನಲೆ ಸದ್ಯದ ಸ್ಥಿತಿಯಲ್ಲಿ ಮಹಾರಾಷ್ಟ್ರದಿಂದ ಬರುವ ನೀರಿನ ಒಂದು ತಿಂಗಳಿಂದ ಕ್ರಮೇಣ ಕಡಿಮೆಯಾಗುತ್ತಿದೆ. ಆಣೆಕಟ್ಟೆಯ 22 ಗೇಟ್‍ಗಳ ಪೈಕಿ ಒಂದು ಗೇಟ್ ಮೂಲಕ ನೀರನ್ನು ಹೊರಹಾಕಲಗುತ್ತಿದ್ದು, ಇನ್ನುಳಿದ ಎಲ್ಲ ಗೇಟ್‍ಗಳನ್ನು ಮುಚ್ಚಲಾಗಿದೆ.
ಜಲಾಶಯದಲ್ಲಿ ರವಿವಾರದಂದು ನೀರಿನ ಮಟ್ಟ 524.25 ಮೀ.ನಷ್ಟಿದ್ದು, 18 ಸಾವಿರ ಕ್ಯುಸೆಕ್‍ನಷ್ಟು ನೀರಿನ ಒಳಹರಿವಿದ್ದು, 14 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಿಪ್ಪರಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ 524.87 ರಷ್ಟಿದೆ. 5.5 ಟಿಎಂಸಿ ನೀರಿನ ಸಂಗ್ರಹ ಪ್ರಮಾಣವಿದ್ದು, 6 ಟಿಎಂಸಿಯಷ್ಟು ನೀರಿನ ಜಲಾಶಯ ಸಾಮಥ್ರ್ಯ ಹೊಂದಿದೆ.
Social Plugin