ತೇರದಾಳ ಪಟ್ಟಣದ ಕನ್ನಡ ಶಾಲೆಯ ಹತ್ತಿರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಎಸ್.ಪಿ.ಬಾಲಸುಬ್ರಣ್ಯ ಹಾಗೂ ಶಾಸಕ ಬಿ.ನಾರಾಯಣರಾವ್ ಇವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು.
ತೇರದಾಳ : ಎಸ್.ಪಿ.ಬಾಲಸುಬ್ರಮಣ್ಯ ಅವÀರು ಕಲಾ ಜಗತ್ತಿನ ದೇಶ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಪಡೆದಂತಹ ಮಹಾನ ಕಲಾ ಸಾಮ್ರಾಟರಾಗಿದ್ದರು. ಅವರು ಜಗತ್ತಿನ ಅನೇಕ ಭಾಷೆಗಳಲ್ಲಿ ಹಾಡುವುದರ ಮೂಲಕ ಪ್ರತಿಯೊಬ್ಬರ ಜನಮಾನಸದಲ್ಲಿ ಇತಿಹಾಸ ಸೃಷ್ಟಿ ಮಾಡಿ ಹೋಗಿದ್ದಾರೆ ಎಂದು ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಹೇಳಿದರು.
ಪಟ್ಟಣದ ಕನ್ನಡ ಶಾಲೆಯ ಹತ್ತಿರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗಾನಕೋಗಿಲೆ ಎಸ್.ಪಿ.ಬಾಲಸುಬ್ರಣ್ಯ ಹಾಗೂ ಕರ್ನಾಟಕ ಪ್ರಬುದ್ಧ ರಾಜಕಾರಣಿ ಶಾಸಕ ಬಿ.ನಾರಾಯಣರಾವ್ ಇವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಎಸ್.ಪಿ. ಬಾಲಸುಬ್ರಮಣ್ಯ ಇವರು ಅತ್ಯಂತ ಮಾನವೀಯ ಗುಣವುಳ್ಳವರು, ಅತ್ಯಂತ ಹಾಸ್ಯಭರಿತವಾಗಿ ಎಲ್ಲರನ್ನು ನಗಿಸುತ್ತಾ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಂತೋಷ ಭರಿತವಾಗಿಟ್ಟಿದ್ದರು. ಈ ಮಹಾನ್ ಜೀವಿ ನಮ್ಮ ಜೊತೆ ಇಲ್ಲ ಇದು ನಮ್ಮ ಕಲಾ ಜಗತ್ತಿಗೆ ಬಹು ದೊಡ್ಡ ನಷ್ಟವಾಗಿದೆ, ಇದು ನಮ್ಮ ದುರ್ದೈವ. ಇವರಿಬ್ಬರ ಅಗಲಿಕೆಯಿಂದ ಕನ್ನಡ ನಾಡು ಶೋಕ ಸೋಕ ಸಾಗರದಲ್ಲಿ ಮುಳುಗಿದೆ. ದಿವಂಗತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕೊಡಲಿ ಎಂದರು.
ಅವರ ಭಾವ ಚಿತ್ರಗಳಿಗೆ ಮೆಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಅಶೋಕ ಅಳಗೊಂಡ, ಪ್ರವಿಣ ನಾಡಗೌಡ, ಪಿ.ಎಸ್.ಮಾಸ್ತಿ, ವಿಶ್ವನಾಥ ಹಿರೇಮಠ, ಉದಯ ಮುತ್ತೂರ, ಮಾಶೂಮ ಇನಾಮದಾರ, ಆಧಿನಾಥ ಸಪ್ತಸಾಗರ, ಮಲ್ಲಿನಾಥ ಬೋಳಗೊಂಡ, ಮುಸ್ತಫಾ ಮೋಮಿನ್, ಪೈಜುಲ್ಲಾ ಇನಾಮದಾರ, ರಾಜೇಸಾಬ ನಗಾರ್ಜಿ, ವಸಂತ ಧರೆನ್ನವರÀ ಸೇರಿದಂತೆ ಇನ್ನಿತರ ಕಾರ್ಯಕರ್ತರು ಇದ್ದರು.
Social Plugin