ಬನಹಟ್ಟಿಯಲ್ಲಿ ರೈತ ಸಂಘದ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಯನ್ನು ಪ್ರತಿಭಟನೆ ನಡೆಸಿ ಮೆರವಣಿಗೆಯನ್ನು ಕೈಗೊಂಡರು.
ರಬಕವಿ ಬನಹಟ್ಟಿ: ಒಂದಾಗದ ರೈತ ಸಂಘಗಳು
* ಪ್ರತ್ಯೇಕ ಮೆರವಣಿಗೆಗಳು
ರಬಕವಿ-ಬನಹಟ್ಟಿ,ಸೆ28: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇವಲ ಸುಳ್ಳು ಭರವಸೆಗಳನ್ನು ನೀಡುವುದರ ಜೊತೆಗೆ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರ ಕೊಲೆಯನ್ನು ಮಾಡುತ್ತಿವೆ ಎಂದು ಸ್ಥಳೀಯ ರೈತ ಸಂಘದ ಮುಖಂಡ ಸಿದ್ದು ಉಳ್ಳಾಗಡ್ಡಿ ಆರೋಪಿಸಿದರು.
ಅವರು ಸೋಮವಾರ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಪೆರ್Çೀರೆಟ್ ಕಂಪನಿಗಳಿಗೆ ಕೊಡುವ ಸೌಲಭ್ಯಗಳನ್ನು ರೈತರಿಗೆ ನೀಡಿದರೆ ದೇಶ ಅಭಿವೃದ್ಧಿಯಾಗುತ್ತದೆ. ಎರಡು ಸರ್ಕಾರಗಳು ಕಾಪೆರ್Çೀರೆಟ್ ಕಂಪನಿಗಳ ಎಜೆಂಟ್ರಂತೆ ವರ್ತಿಸುತ್ತಿವೆ. ರೈತರಿಗೆ ಮತ್ತ ಕಾರ್ಮಿಕರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಜಾರಿಗೆ ತೆಗೆದುಕೊಂಡು ಬನ್ನಿ. ಸರ್ಕಾರಗಳು ತಮ್ಮ ಧೋರಣೆಗಳನ್ನು ಹಿಂದಕ್ಕೆ ಪಡೆಯದೆ ಇದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ರೀತಿಯಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಉಳ್ಳಾಗಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರು ಸ್ಥಳೀಯ ಈಶ್ವರಲಿಂಗ ಮೈದಾನದಿಂದ ರಬಕವಿಯ ಮಹಾಲಿಂಗಪುರ ನಾಕಾದವರೆಗೆ ಮೆರವಣಿಗೆಯನ್ನು ಕೈಗೊಂಡರು.
ರಬಕವಿ ಬನಹಟ್ಟಿಯಲ್ಲಿ ರೈತ ಸಂಘಗಳು ಒಂದಾಗದೆ ಎರಡು ಪ್ರತ್ಯೇಕ ಮೆರವಣಿಗೆಗಳನ್ನು ಕೈಗೊಂಡವು. ಮೆರವಣಿಗೆಯ ಸಂದರ್ಭದಲ್ಲಿ ಕೆಲವು ಮುಖಂಡರು ಒಂದಾಗಿ ಪ್ರತಿಭಟನೆ ನಡೆಸಲು ಮಾತುಕತೆ ನಡೆಸಿದರು. ಆದರೆ ಬನಹಟ್ಟಿ ರೈತರು ಇದಕ್ಕೆ ಸಮ್ಮತಿಯನ್ನು ಸೂಚಿಸದೆ ಪ್ರತ್ಯೇಕ ಮೆರವಣಿಗೆಯನ್ನು ಕೈಗೊಂಡರು.
ಈ ಸಂದರ್ಭದಲ್ಲಿ ದುಂಡಪ್ಪ ಕುಡಚಿ, ಬಸವರಾಜ ಮಲೋಡಿ, ಮಾಯಪ್ಪ ತುರಾದಿ, ಅವಧೂತ ಒಡೆಯರ, ಕಲ್ಲಪ್ಪ ಬಳಗಾರ, ರಾಮಣ್ಣ ಮಲೋಡಿ, ದೇವೇಂದ್ರ ತಳವಾರ, ದಶರಥ ಕಾರಜೋಳ, ಕಾಡಪ್ಪ ಪಾಟೀಲ, ಶಿವಪ್ಪ ತೇಲಿ, ರೇವಣ್ಣ ನಾಗನೂರ, ಅಜೀಜ್ ಅತರಾವುತ್, ಅಲ್ಲಾಭಕ್ಷ ತೇಲಗಿ, ಸುನಂದಾ ತೇಲಿ ಸೇರಿದಂತೆ ಅನೇಕರು ಇದ್ದರು.
Social Plugin