ತೇರದಾಳ ಪಟ್ಟಣದ ವಾರ್ಡ ನಂ 18ರಲ್ಲಿ ಮಾಜಿ ಸಚಿವೆ ಉಮಾಶ್ರೀಯವರಿಂದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ
ತೇರದಾಳ : ಕೊರೊನಾ ಪರೀಕ್ಷೆಯನ್ನು ನಾವು ಮಾಡುತ್ತಿಲ್ಲ ಅದು ವೈಜ್ಞಾನಿಕವಾದದು. ಗಂಟಲು ಹಾಗೂ ಮೂಗಿನಿಂದ ತಗೆದುಕೊಂಡ ದ್ರವವನ್ನು ಲ್ಯಾಬ್‍ನಲ್ಲಿ ಪರೀಕ್ಷಿಸಿಸಿದ ನಂತರ ಅದು ನೆಗಟೀವ್ ಪಾಸೀಟೀವ್ ಎಂದು ಹೇಳತ್ತಾರೆ. ಆದರೆ ನಾವು ಥರ್ಮಾ ಮೀಟರ್‍ದಿಂದ ಮಾಡುತ್ತಿರುವ ಈ ಪರೀಕ್ಷೆಯು ಅದು ಅಲ್ಲ ಇದನ್ನು ಸಾರ್ವಜನಿಕರು ತಪ್ಪು ತಿಳಿದುಕೊಳ್ಳಬಾರದು ಇದು ತಮ್ಮ ಆರೋಗ್ಯವನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವೆ ಉಮಾಶ್ರೀಯವರು ಹೇಳಿದರು.
ಪಟ್ಟಣದ ವಾರ್ಡ ನಂ 18, 23 ರಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದಕ್ಕೆ ಜನರು ಹೆದರುವ ಅವಶ್ಯಕತೆಯಿರುವುದಿಲ್ಲ. ನಿಮ್ಮ ಮನೆಯ ಮುಂದೆ ಬಂದು ನಿಮ್ಮ ಕುಟುಂಬದ ಜನರ ಆರೋಗ್ಯವನ್ನು ಪರೀಕ್ಷಿಸಲಾಗುತ್ತಿದೆ. ಥರ್ಮಾ ಮೀಟರ್ ಸಹಾಯದಿಂದ ನಿಮಗೆ ಜ್ವರ ಇವೆ ಅಥವಾ ಇಲ್ಲ, ನಿಮ್ಮ ದೇಹದ ಉಷ್ಣತೆ ಎಷ್ಟು ಇದೆ ಎಂಬುವುದನ್ನು ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಹೆಚ್ಚು ಕಡಿಮೆಯಾಗಿರುವುದರ ಬಗ್ಗೆ ನಿಮಗೆ ಹೇಳುತ್ತೇವೆ ಮುಂದೆ ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬಹುದು. ಮತ್ತು ಆಕ್ಸಿ ಮೀಟರ್ ಸಹಾಯದಿಂದ ನಿಮ್ಮ ದೇಹದಲ್ಲಿ ಉಸಿರಾಟಕ್ಕೆ ಗಾಳಿ ಎಷ್ಟಿರಬೇಕು ಎಂಬುವುದನ್ನು ಪರೀಕ್ಷಸಲಾಗುವುದು. ನಿಮ್ಮ ದೇಹದೊಳಗೆ ಶೇ.95ಕ್ಕಿಂತ ಹೆಚ್ಚು ಗಾಳಿ ದೇಹದಲ್ಲಿದ್ದರೆ ಶ್ವಾಸಕೋಶ ಚನ್ನಾಗಿ ಇರುತ್ತೆದೆ. ರೋಗ ನಿರೋಧಕ ಶಕ್ತಿ ದೇಹದಲ್ಲಿ ಉತ್ಪತ್ತಿಯಾಗಲು ಬಿಸಿ ನೀರು ಕುಡಿಯುವುದು, ನಿಂಬೆ ಹಣ್ಣಿನ ರಸ, ಕಷಾಯಿ ಕುಡಿಯುವುದು. ಇವುಗಳನ್ನು ಮನೆಯಲ್ಲಿಯೇ ಇದ್ದು ಮಾಡುವುದರಿಂದ ರೋಗಗಳು ಬರದಂತೆ ಮುನ್ನೇಚ್ಚರಿಕೆಯನ್ನು ವಹಿಸಬಹುದು. ಸಾಮಾನ್ಯವಾಗಿ ಈಗಿನ ವಾತವರಣದಲ್ಲಿ ಶೀತ,ಕೆಮ್ಮು, ನೆಗಡಿ ಬರುತ್ತದೆ ಆದರೆ ಕೊರೊನಾ ಬಂದಿದೆ ಎಂದು ಹೆದರುವ ಅವಶ್ಯಕತೆ ಇಲ್ಲ. ನಮ್ಮ ಆರೋಗ್ಯ ಕಾರ್ಯಕರ್ತರು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಿಮ್ಮ ಆರೋಗ್ಯವನ್ನು ಪರೀಕ್ಷಿಸಿಕೋಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರವೀಣ ನಾಡಗೌಡ, ಲಕ್ಷ್ಮಣ ದೇಸಾರಟ್ಟಿ, ಅಶೋಕ ಅಳಗೊಂಡ, ಪುರಸಭೆ ಸದಸ್ಯರಾದ ಸುರೇಶ ಕಬಾಡಗಿ, ಫೈಯಾಜ ಇನಾಮದಾರ, ಪ್ರಭು ಗಸ್ತಿ, ಗುರುರಾಜ ಕುಲಕರ್ಣಿ, ಪರಶುರಾಮ ಮಾಸ್ತಿ, ವಿಶ್ವನಾಥ ಹಿರೇಮಠ, ನೇಮಣ್ಣ ಸಾವಂತನವರ, ಮಾಶೂಂ ಇನಾಮದಾರ, ಮುಸ್ತಾಫ ಮೋಮಿನ್, ರಾಜೇಸಾಬ ನಗಾರ್ಜಿ, ಶಿವಾನಂದ ನಡುವಿನಕೇರಿ, ದಸ್ಕೀರ ತಾಂಬೋಳಿ, ಆದಿನಾಥ ಸಪ್ತಸಾಗರ ಸೇರಿದಂತೆ ಇನ್ನಿತರರು ಇದ್ದರು.
Social Plugin