ಬನಹಟ್ಟಿಯಲ್ಲಿ ವಿಶ್ವಕರ್ಮ ದಿನಾಚರಣೆಯ ನಿಮಿತ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಪಂಚದ ನಿರ್ಮಾಣಕಾರರು ವಿಶ್ವಕರ್ಮರು
ರಬಕವಿ-ಬನಹಟ್ಟಿ,ಸೆ21: ಪ್ರಪಂಚದ ನಿರ್ಮಾಣಕಾರರು ವಿಶ್ವಕರ್ಮರು. ವಿಶ್ವಕರ್ಮ ಸಮಾಜ ಶ್ರೇಷ್ಠವಾದುದು. ಅವರ ಕಲಾ ಪ್ರೇಮಿಗಳಾಗಿದ್ದು, ದೇವಸ್ಥಾನಗಳಲ್ಲಿರುವ ಮೂರ್ತಿಗಳಿಗೆ ಜೀವಂತಿಕೆಯನ್ನು ತುಂಬುವವರು ವಿಶ್ವಕರ್ಮರು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಸ್ಥಳೀಯ ಲಕ್ಷ್ಮಿ ನಗರದಲ್ಲಿ ವಿಶ್ವಕರ್ಮ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮಾಜದವರು ತಮ್ಮ ಸಮಾಜದ ಸಭೆ ಸಮಾರಂಭಗಳನ್ನು ಕೈಗೊಳ್ಳಲು ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಶಾಸಕ ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯರಾದ ಪೆÇ್ರ.ಪಿ.ಬಿ.ಬಡಿಗೇರ ಮಾತನಾಡಿ, ವಿಶ್ವಕರ್ಮ ಸಮುದಾಯದವರು ಸಮಾಜದ ಪ್ರತಿಯೊಂದು ರಂಗದಲ್ಲಿಯೂ ಕಾರ್ಯ ಮಾಡುತ್ತಿದ್ದಾರೆ. ದೈವಿಕ ನಂಬಿಕೆಯವರು. ಪರಮಾತ್ಮನಿಗೆ ಸಾಕಾರಾತ್ಮಕ ರೂಪವನ್ನು ಕೊಟ್ಟವರು ವಿಶ್ವಕರ್ಮರು. ಅದರೂ ವಿಶ್ವಕರ್ಮ ಸಮುದಾಯಕ್ಕೆ ಇದುವರೆಗೆ ಯಾವುದೆ ರೀತಿಯ ಸೌಲಭ್ಯಗಳು ದೊರೆತಿಲ್ಲ.
ವಿಶ್ವಕರ್ಮ ಸಮುದಾಯದವರು ಸುಶಿಕ್ಷಿತರಾಗುವುದರ ಜೊತೆಗೆ ರಾಜಕೀಯವಾಗಿ ಪ್ರಾಬಲ್ಯ ಹೊಂದಿದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ಸಮಾಜ ಬಾಂಧವರು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದು ಪೆÇ್ರ.ಬಡಿಗೇರ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ರಾಜು ಅಂಬಲಿ, ಗೌರಿ ಮಿಳ್ಳಿ, ಲಕ್ಕಪ್ಪ ಪಾಟೀಲ, ಸುರೇಶ ಅಕ್ಕಿವಾಟ, ಮೋಹನ ಪತ್ತಾರ, ಚಿದಾನಂದ ಪತ್ತಾರ, ಮೌನೇಶ ಬಡಿಗೇರ ಮತ್ತು ಅರವಿಂದ ಪತ್ತಾರ ಇದ್ದರು.
ಕಾರ್ಯಕ್ರಮದಲ್ಲಿ ಕಲ್ಲಪ್ಪ ಪತ್ತಾರ, ರಾಜು ಬಡಿಗೇರ, ರಮೇಶ ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಬಸವರಾಜ ಬಡಿಗೇರ, ರವಿಂದ್ರ ಪತ್ತಾರ, ಮಂಜುನಾಥ ಪತ್ತಾರ, ಕುಮಾರ ಪತ್ತಾರ, ಗಜಾನನ ಬಡಿಗೇರ, ವಂದನಾ ಪತ್ತಾರ, ಲಲಿತಾ ಪತ್ತಾರ, ಸರಸ್ವತಿ ಪತ್ತಾರ, ಕಲಾ ಪತ್ತಾರ, ಇಂದುಮತಿ ಬಡಿಗೇರ ಸೇರಿದಂತೆ ಅನೇಕರು ಇದ್ದರು.
ಸಚಿನ್ ಪತ್ತಾರ ಪ್ರಾರ್ಥಿಸಿದರು. ಮೋಹನ ಪತ್ತಾರ ಸ್ವಾಗತಿಸಿದರು. ಅಚ್ಯುತ ಪತ್ತಾರ ವಂದಿಸಿದರು. ಅಶೋಕ ಬಡಿಗೇರ ನಿರೂಪಿಸಿದರು.
Social Plugin