ಬನಹಟ್ಟಿಯ ಕಿಸಾನ್‍ಮಿತ್ರ ಮಲ್ಟಿಸ್ಟೇಟ್ ಸೊಸೈಟಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಹಾಯ ಧನದೊಂದಿಗೆ ಸನ್ಮಾನಿಸಲಾಯಿತು.


ಭವಿಷ್ಯ ರೂಪಿಸುವ ವಿದ್ಯಾರ್ಥಿಗಳು ಉಪಕಾರದ ಕೊಡುಗೆ ನೀಡಬೇಕು

ರಬಕವಿ-ಬನಹಟ್ಟಿ,ಸೆ14: ಭವಿಷ್ಯದಲ್ಲಿ ಉತ್ತಮ ಸಮಾಜ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಉತ್ತಮ ಸಾಧನೆಗೈದು ಸಮಾಜಕ್ಕೆ ಉಪಕಾರವಾಗುವಂತಹ ಕೊಡುಗೆಯನ್ನು ನೀಡಬೇಕೆಂದು ಪ್ರಕಾಶ ಬಂದಿ ಹೇಳಿದರು.

ಇಂದು ನಗರದ ಕಿಸಾನ್‍ಮಿತ್ರ ಮಲ್ಟಿಸ್ಟೇಟ್ ಸೊಸೈಟಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಿ ಅವರು ಮಾತನಾಡಿದರು. ಬಡತನದಲ್ಲಿ ಪ್ರತಿಭೆ ಸಾಧಿಸುತ್ತಿರುವ ಮಕ್ಕಳನ್ನು ಗುರ್ತಿಸಿ ಪ್ರತಿ ವರ್ಷ ಸಹಾಯ ಧನ ನೀಡುವ ಮೂಲಕ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದರು. ಕಲಿಕೆಯಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಿಕ್ಷಣಕ್ಕಾಗಿ ಸಾಲ ಸೌಲಭ್ಯವಿದೆ. ಅದನ್ನೂ ಸಹಿತ ಪಡೆಯಲು ನಿಸ್ಸಾಹಕವಾಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳೊಂದಿಗೆ ದೇಶ ಕಟ್ಟುವ ಮಕ್ಕಳಿಗೆ ಪ್ರೋತ್ಸಾಹಿಸುವದು ಸಮಾಜದ ಕರ್ತವ್ಯವೆಂದು ಬಂದಿ ಹೇಳಿದರು.

ಇದೇ ಸಂದರ್ಭ ಸುರೇಶ ಕಾಡದೇವರ, ದೇವೇಂದ್ರ ಹಳ್ಯಾಳ, ರಾಜು ಗುಂಡಿ, ಗಂಗಾಧರ ಉಳ್ಳಾಗಡ್ಡಿ, ಮಲ್ಲಪ್ಪ ರಾಮದುರ್ಗ, ಚಿದಾನಂದ ಸಜ್ಜಿ, ಬಾಬಾಗೌಡ ಪಾಟೀಲ, ಜಿ.ಎಸ್. ಮಠಪತಿ, ಅರುಣ ಕದಮ, ಗಂಪತಿ ಗಲಗಲಿ, ಚಿದಾನಂದ ನಾಶಿ, ಅಶೋಕ ಕಲ್ಪಡಿ, ಸಂಗಮೇಶ ಕವಟಗಿ, ವಿದ್ಯಾವಂತ ಜವಳಗಿ, ದಾನಮ್ಮಾ ಜಿಗಜಿನ್ನಿ, ತನುಜಾ ತೇಲಿ, ಹೇಮಾ ವಾಲಿಮರದ ಸೇರಿದಂತೆ ಅನೇಕರಿದ್ದರು.