ಬನಹಟ್ಟಿಯ ಅಂಭಾಭವಾನಿ ದೇವಸ್ಥಾನದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.

           ಧರ್ಮ, ಸಂಸ್ಕ್ರತಿ ಬದುಕಿನಲ್ಲಿ ಅಳವಡಿಸಿಕೊಳ್ಳಿ

          *ಸಮುದಾಯ ಭವನಕ್ಕೆ 10 ಲಕ್ಷ ರೂ.ಗಳ ಭರವಸೆ

ರಬಕವಿ-ಬನಹಟ್ಟಿ,ಸೆ14: ಪ್ರತಿಯೊಬ್ಬರೂ ಧರ್ಮ, ಸಂಸ್ಕ್ರತಿಯ ಪ್ರತೀಕವಾದಿ ಭಾರತೀಯ ಪರಂಪರೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಬೇಕು. ಇದರಿಂದ ನೆಮ್ಮದಿ ಹಾಗು ಶಾಂತ ಮನಸ್ಸಿನಿಂದ ಬದುಕು ಸಾಗಿಸಲು ಸಾಧ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ನಗರದ ಅಂಭಾಭವಾನಿ ದೇವಸ್ಥಾನದಲ್ಲಿ ಕೆಎಚ್‍ಡಿಸಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಕ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶಕ್ಕಾಗಿ ಮುಡಿಪಾಗಿಟ್ಟ ಇತಿಹಾಸಕಾರರ ಸ್ಮರಣೆ ಮುಖ್ಯ. `ಭಾವ ಶುದ್ಧವಿದ್ದರೆ ಭಾಗ್ಯಕ್ಕೇನು ಬರ’ವೆಂಬಂತೆ ಪ್ರತಿಯೊಬ್ಬರ ಭಾವ ಮನಸ್ಸು ಶುದ್ಧವಾಗಿರಬೇಕೆಂದರು. ಇದರಿಂದ ಎಲ್ಲವನ್ನೂ ಯಾವ ಸಂದರ್ಭದಲ್ಲಿಯೂ ಗೆಲ್ಲಲು ಸಾಧ್ಯವೆಂದರು.

ಸಮುದಾಯ ಭವನದ ಅಭಿವೃದ್ಧಿಗಾಗಿ 10 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ಶೀಘ್ರವೇ ಒದಗಿಸುವದಾಗಿ ಶಾಸಕ ಸವದಿ ಭರವಸೆ ನೀಡಿದರು.

ರಾಜು ಅಂಬಲಿ, ಲಕ್ಕಪ್ಪ ಪಾಟೀಲ, ಹರ್ಷವರ್ಧನ ಪಟವರ್ಧನ, ಈಶ್ವರ ನಾಗರಾಳ, ಜ್ಯೋತಿಬಾ ಸಾಲ್ಗುಡಿ, ಪಾಂಡುರಂಗ ಸಾಲ್ಗುಡಿ, ನಾಮದೇವ ಶಿರಗೂರ, ಸವಿತಾ ಹೊಸೂರ, ವಿದ್ಯಾಧರ ಸವದಿ, ನಂದು ಗಾಯಕವಾಡರನ್ನು ಸನ್ಮಾನಿಸಲಾಯಿತು.

ಕುಮಾರ ಕದಂ, ಜಯಶ್ರೀ ಜಗತಾಪ, ಕಾಂತು ಗಾಯಕವಾಡ, ಬಾಳು ಕದಂ, ವಿಜಯ ಮಾನೆ, ರಮೇಶ ಮಂಡಿ, ಪ್ರವೀಣ ಕೋಲಾರ, ಚಿದಾನಂದ ಚಿಂಚಖಂಡಿ, ಗೋವಿಂದ ಗಾಯಕವಾಡ, ಬಾಬು ಪುಂಡೆ, ಶಿವಾಜಿ ಮಾಳಿ, ಮಿಲನ್ ಚುನಮರಿ, ಸಾಳುಂಕೆ ಸೇರಿದಂತೆ ಅನೇಕರಿದ್ದರು.