ರಬಕವಿ-ಬನಹಟ್ಟಿ ಪಟಾಕಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಬನಹಟ್ಟಿಯ ಕಾಡಸಿದ್ಧೇಶ್ವರ ರಥೋತ್ಸವ ಸೇರಿದಂತೆ ಯಾವದೇ ಕಾರ್ಯಕ್ರಮಗಳು ಜರುಗುವದಿಲ್ಲವೆಂದು ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀಶೈಲ ದಭಾಡಿ ತಿಳಿಸಿದರು.
ಕೊರೊನಾ ಹಿನ್ನಲೆ ಸರ್ಕಾರದ ನಿಯಮದಂತೆ ಅನ್ನ ಸಂತರ್ಪಣೆ, ಉಚ್ಚಾಯ, ರಥೋತ್ಸವ, ಕುಸ್ತಿ, ದೀಡ ನಮಸ್ಕಾರ ಸೇರಿದಂತೆ ಯಾವದೇ ಕಾರ್ಯಕ್ರಮಗಳು ಜರುಗುವದಿಲ್ಲ ಹಾಗು ಭಕ್ತಾಧಿಕಾರಿಗಳು ಪರಸ್ಥಳದಿಂದ ಬರಬಾರದೆಂದು ಸ್ಪಷ್ಟಪಡಿಸಿದರು. ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಮಾತನಾಡಿ, ಜಾತ್ರೆ ದಿನದಂದು ಯಾರೂ ದೇವಸ್ಥಾನ ಹತ್ತಿರ ಪಟಾಕಿ ಸಿಡಿಸುವಂತಿಲ್ಲ. ಪೊಲೀಸ್ ಚೆಕ್‍ಪೋಸ್ಟ್‍ದೊಂದಿಗೆ ಭದ್ರತೆ ನಡೆಸಲಾಗುವದು. ಗುಂಪು ಗೂಡುವದು ಅಥವಾ ದೇವರ ದರ್ಶನಕ್ಕೆಂದು ಆಗಮಿಸುವದು ನಿಷೇಧ. ದಿ.6 ರಿಂದ 10 ನೇ ತಾರೀಖೀನವರೆಗೆ ಪಟಾಕಿ ಮಾರಾಟ ಮಾಡಬಾರದೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಇವೆಲ್ಲದಕ್ಕೂ ಜಾತ್ರಾ ಕಮಿಟಿ ಸಹಕಾರ ನೀಡಿದ್ದಕ್ಕೆ ಧನ್ಯತೆ ತಿಳಿಸಿದರು.
Social Plugin