ನೇಕಾರರ 11.31 ಕೋಟಿ ರೂ. ಸಾಲಮನ್ನಾ ಹಣ ಜಮೆ *ನಿರಾಳತೆ ಕಂಡ ನೇಕಾರ ಹಾಗು ಸಹಕಾರಿ ಸಂಘಗಳು ರಬಕವಿ-ಬನಹಟ್ಟಿ,ಸೆ2: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಕ್ಷಣಾರ್ಧದಲ್ಲಿಯೇ ರಾಜ್ಯದ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಘೋಷಣೆ ಮಾಡಿದ್ದರು. ಇದಕ್ಕನುಗುಣವಾಗಿ 2019-20 ನೇ ಸಾಲಿನಲ್ಲಿ ಸರ್ಕಾರದ ಆದೇಶದಲ್ಲಿ ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರು ವಿವಿಧ ಸಹಕಾರಿ ಸಂಘಗಳಿಂದ ಮತ್ತು ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ 31.03.2019 ಕ್ಕೆ ಹೊಂದಿದ ಹೊರಬಾಕಿಯಲ್ಲಿ ರೂ. 1 ಲಕ್ಷಗಳವರೆಗಿನ ನೇಕಾರರಿಗೆ ಸಾಲಮನ್ನಾ ಆದೇಶವನ್ನು ಕಳೆದ ದಿ.28/07/2020 ರಂದು ಜವಳಿ ಅಭಿವೃದ್ಧಿ ಆಯುಕ್ತರು ಅಧಿಕೃತ ಕಛೇರಿ ಆದೇಶವನ್ನೂ ಹೊರಡಿಸಿತ್ತು. ಸೆ.2 ಬುಧವಾರದಂದು ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ 48 ಸಹಕಾರಿ ಸಂಘಗಳ ಪೈಕಿ 3250 ಫಲಾನುಭವಿಗಳಿಗೆ ಒಟ್ಟು 11.31 ಕೋಟಿ ರೂ.ಗಳಷ್ಟು ಸಾಲ ಮನ್ನಾ ಆಯಾ ಬ್ಯಾಂಕ್ ಹಾಗು ಸಂಘಗಳಿಗೆ ಜಮೆಯಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ಬೆಂಗಳೂರಿನ ಜವಳಿ ಇಲಾಖೆ ಆಯುಕ್ತರ ಕಚೇರಿಗೆ ತೆರಳಿ ತಕ್ಷಣವೇ ಹಣ ಬಿಡುಗಡೆಗೆ ಒತ್ತಾಯಿಸುತ್ತಿದ್ದಂತೆ ಇಂದು ಎಲ್ಲ 48 ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳಿಗೆ 11.31 ಕೋಟಿ ರೂ. ಜಮಾವಣೆಗೊಂಡಿದೆ ಎಂದು ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದರು. ಪರಿಶೀಲನೆ ಸಂದರ್ಭ ಗೊಂದಲಗಳ ನಿವಾರಣೆಗಾಗಿ ತಿಂಗಳ ಕಾಲ ವಿಳಂಬವಾಗುವಲ್ಲಿ ಕಾರಣವಾಗಿದೆ ಎಂದು ಸವದಿ ಸ್ಪಷ್ಟಪಡಿಸಿದರು. `ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳು ಪ್ರಾಮಾಣಿಕತೆಯಿಂದ ಸಾಲಮನ್ನಾ ಯೋಜನೆ ಸದುಪಯೋಗಪಡಿಸಿಕೊಂಡರೆ ನಿಜವಾದ ನೇಕಾರ ಫಲಾನುಭವಿಗಳಿಗೆ ಯೋಜನೆ ತಲುಪುವಲ್ಲಿ ಸುಗಮವಾಗುವದು. ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ.’----ಸಿದ್ದು ಸವದಿ, ಶಾಸಕರು ತೇರದಾಳ ಕ್ಷೇತ್ರ. `ಇದರಿಂದ ನೇಕಾರರು ಹಾಗು ಸಹಕಾರಿ ಸಂಘಗಳು ನೆಮ್ಮದಿ ಕಾಣವಂತಾಗಿದೆ. ಶಾಸಕ ಸಿದ್ದು ಸವದಿಯವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವೆ’.----ಶಂಕರ ಜಾಲಿಗಿಡದ, ಅಧ್ಯಕ್ಷರು, ಪಾವರ್‍ಲೂಮ್ ಅಶೋಶಿಯೇಷನ್, ಬನಹಟ್ಟಿ. 

 ನೇಕಾರರ 11.31 ಕೋಟಿ ರೂ. ಸಾಲಮನ್ನಾ ಹಣ ಜಮೆ
*ನಿರಾಳತೆ ಕಂಡ ನೇಕಾರ ಹಾಗು ಸಹಕಾರಿ ಸಂಘಗಳು 
ರಬಕವಿ-ಬನಹಟ್ಟಿ,ಸೆ2: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಕ್ಷಣಾರ್ಧದಲ್ಲಿಯೇ ರಾಜ್ಯದ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಘೋಷಣೆ ಮಾಡಿದ್ದರು. ಇದಕ್ಕನುಗುಣವಾಗಿ 2019-20 ನೇ ಸಾಲಿನಲ್ಲಿ ಸರ್ಕಾರದ ಆದೇಶದಲ್ಲಿ ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರು ವಿವಿಧ ಸಹಕಾರಿ ಸಂಘಗಳಿಂದ ಮತ್ತು ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲ 31.03.2019 ಕ್ಕೆ ಹೊಂದಿದ ಹೊರಬಾಕಿಯಲ್ಲಿ ರೂ. 1 ಲಕ್ಷಗಳವರೆಗಿನ ನೇಕಾರರಿಗೆ ಸಾಲಮನ್ನಾ ಆದೇಶವನ್ನು ಕಳೆದ ದಿ.28/07/2020 ರಂದು ಜವಳಿ ಅಭಿವೃದ್ಧಿ ಆಯುಕ್ತರು ಅಧಿಕೃತ ಕಛೇರಿ ಆದೇಶವನ್ನೂ ಹೊರಡಿಸಿತ್ತು. 

ಸೆ.2 ಬುಧವಾರದಂದು ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ 48 ಸಹಕಾರಿ ಸಂಘಗಳ ಪೈಕಿ 3250 ಫಲಾನುಭವಿಗಳಿಗೆ ಒಟ್ಟು 11.31 ಕೋಟಿ ರೂ.ಗಳಷ್ಟು ಸಾಲ ಮನ್ನಾ ಆಯಾ ಬ್ಯಾಂಕ್ ಹಾಗು ಸಂಘಗಳಿಗೆ ಜಮೆಯಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ಬೆಂಗಳೂರಿನ ಜವಳಿ ಇಲಾಖೆ ಆಯುಕ್ತರ ಕಚೇರಿಗೆ ತೆರಳಿ ತಕ್ಷಣವೇ ಹಣ ಬಿಡುಗಡೆಗೆ ಒತ್ತಾಯಿಸುತ್ತಿದ್ದಂತೆ ಇಂದು ಎಲ್ಲ 48 ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳಿಗೆ 11.31 ಕೋಟಿ ರೂ. ಜಮಾವಣೆಗೊಂಡಿದೆ ಎಂದು ದೂರವಾಣಿ ಮೂಲಕ ಪತ್ರಿಕೆಗೆ ತಿಳಿಸಿದರು. ಪರಿಶೀಲನೆ ಸಂದರ್ಭ ಗೊಂದಲಗಳ ನಿವಾರಣೆಗಾಗಿ ತಿಂಗಳ ಕಾಲ ವಿಳಂಬವಾಗುವಲ್ಲಿ ಕಾರಣವಾಗಿದೆ ಎಂದು ಸವದಿ ಸ್ಪಷ್ಟಪಡಿಸಿದರು.
`ಸಹಕಾರಿ ಸಂಘ ಹಾಗು ಬ್ಯಾಂಕ್‍ಗಳು ಪ್ರಾಮಾಣಿಕತೆಯಿಂದ ಸಾಲಮನ್ನಾ ಯೋಜನೆ ಸದುಪಯೋಗಪಡಿಸಿಕೊಂಡರೆ ನಿಜವಾದ ನೇಕಾರ ಫಲಾನುಭವಿಗಳಿಗೆ ಯೋಜನೆ ತಲುಪುವಲ್ಲಿ ಸುಗಮವಾಗುವದು. ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ.’----ಸಿದ್ದು ಸವದಿ, ಶಾಸಕರು ತೇರದಾಳ ಕ್ಷೇತ್ರ.
`ಇದರಿಂದ ನೇಕಾರರು ಹಾಗು ಸಹಕಾರಿ ಸಂಘಗಳು ನೆಮ್ಮದಿ ಕಾಣವಂತಾಗಿದೆ. ಶಾಸಕ ಸಿದ್ದು ಸವದಿಯವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವೆ’.----ಶಂಕರ ಜಾಲಿಗಿಡದ, ಅಧ್ಯಕ್ಷರು, ಪಾವರ್‍ಲೂಮ್ ಅಶೋಶಿಯೇಷನ್, ಬನಹಟ್ಟಿ.