ರೈತರ ಕಬ್ಬಿನ ಬಿಲ್ ಬಾಕಿಗಾಗಿ ಒತ್ತಾಯಸಿ ಬೆಂಗಳೂರಿಗೆ ನಿಯೋಗ
ರಬಕವಿ-ಬನಹಟ್ಟಿ,ಸೆ12: ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಯ ಹಾನಿಯಿಂದ ಬೆಳಗಾವಿ, ವಿಜಯಪುರ ಹಾಗು ಬಾಗಲಕೊಟೆ ಜಿಲ್ಲೆಗಳ ಸುಮಾರು 1500 ಕ್ಕೂ ಅಧಿಕ ರೈತರ ಪರಿಸ್ಥಿತಿ ಬೀದಿಗೆ ಬೀಳುವಲ್ಲಿ ಕಾರಣವಾಗುತ್ತಿದೆ.
ಕಳೆದ 2017-18 ರಲ್ಲಿ ಈ ಭಾಗದ ರೈತರು ಬೆಳೆದ ಕಬ್ಬನ್ನು ಸಾವರಿನ್ ಸಕ್ಕರೆ ಕಾರ್ಖಾನೆಗೆ ಒದಗಿಸಿತ್ತು. ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ಕಾರ್ಖಾನೆಗೆ ಸಾಧ್ಯವಾಗದ ಕಾರಣ ರೈತರು ಪರದಾಡುವಂತಾಗಿದ್ದು, ಮತ್ತೊಂದೆಡೆ ಅಪೆಕ್ಸ್ ಬ್ಯಾಂಕಿನಿಂದ ಪಡೆದಿರುವ ಕಾರ್ಖಾನೆಯು ಮರುಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರದ ಮಧ್ಯಸ್ಥಿಕೆಯಿಂದ ಸದ್ಯ ಜಿಲ್ಲಾಧಿಕಾರಿಯವರ ಸುಪರ್ದಿಯಲ್ಲಿ ಕಾರ್ಖಾನೆಯಿದೆ. ಒಟ್ಟು 1500 ರೈತರಿಗೆ 21.8 ಕೋಟಿ ರೂ.ಗಳಷ್ಟು ಹಣ ಪಾವತಿಸಬೇಕಿದೆ. ರೈತರಿಗೆ ಪೂರಕವಾಗಿ ಕಾರ್ಖಾನೆಯನ್ನು ಸಂಪೂರ್ಣ ಹರಾಜು ಮಾಡುವಲ್ಲಿ ಸರ್ಕಾರ ಬಹಿರಂಗ ಹರಾಜನ್ನೂ ಕರೆದಿತ್ತು. ಆದರೆ ಅಪೆಕ್ಸ್ ಬ್ಯಾಂಕ್ ಸೇರಿದಂತೆ ಸುಮಾರು 400 ಕೋಟಿ ರೂ.ಗಳಷ್ಟು ಸಾಲ ಮಾಡಿರುವ ಕಾರ್ಖಾನೆಯು ಇದರ ಹಣ ಭರಿಸುವವರೆಗೆ ಹರಾಜು ಮಾಡಬಾರದೆಂದು ನ್ಯಾಯಾಲಯ ಮೊರೆ ಹೋಗಿದೆ. ಇದೀಗ ರೈತರ ಬಾಳು ಅಡಕತ್ತರಿಯಲ್ಲಿ ಸಿಲುಕಿದ್ದು, ನ್ಯಾಯಾಲಯ ಶೀಘ್ರ ತೀರ್ಪು ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಬೇಕಿದೆ. ನಿಯೋಗ: ಬರುವ ದಿ.21 ರಂದು ಸಂಜೆ ಕೊರೊನಾ ಸಂದಿಗ್ಧ ಸ್ಥಿತಿ ಕಾರಣ 500 ರೈತರೊಂದಿಗೆ ತೆರಳುವದಾಗಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ ತಿಳಿಸಿದರು. ದಿ.22 ಮಂಗಳವಾರದಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಕ್ಕರೆ ಸಚಿವ ಸಿ.ಟಿ. ರವಿ, ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಭೆಟ್ಟಿ ನೀಡುವ ಮೂಲಕ ಸಕ್ಕರೆ ಆಯುಕ್ತ ಕಚೇರಿಗೆ ಮುತ್ತಿಗೆ ಹಾಕಲಾವುದೆಂದು ಮೇಟಿ ತಿಳಿಸಿದರು.
Social Plugin