"ಆಚಾರ್ಯ ಶ್ರೀ ಶಂಕರ" ಚಲನಚಿತ್ರ ಜಗತ್ತಿನ ಸಂಪರ್ಕವೇ ಇಲ್ಲದಿದ್ದರೂ ಸಹ ಕೆಲವೊಮ್ಮೆ ಅಪರೂಪದ ಚಿತ್ರವೊಂದನ್ನು ಮಾಡುವ ಮಹತ್ವಾಕಾಂಕ್ಷೆ ಕೆಲವರಲ್ಲಿ ಮೂಡಿಬಿಡುತ್ತದೆ. ಮೂಲತಃ ಲೆಕ್ಕಪರಿಶೋಧಕರಾಗಿರುವ ವೈ.ಎನ್.ಶರ್ಮಾ ತಮ್ಮ ಶ್ರೀಮತಿ ವಿಜಯಲಕ್ಷ್ಮಿ ಅವರೊಂದಿಗೆ "ಆಚಾರ್ಯ ಶ್ರೀ ಶಂಕರ" ಹೆಸರಿನ ಚಿತ್ರವೊಂದನ್ನು ಎಮ್ಮನೂರು ಕ್ರಿಯೇಷನ್ಸ(ಪ್ರೈ)ಲಿ... ಲಾಂಛನದಲ್ಲಿ ಸಿದ್ದಪಡಿಸಿ ಬಿಡುಗಡೆಗೆ ಉತ್ಸುಕರಾಗಿದ್ದಾರೆ.
ಸುಪರ್ ಸ್ಟಾರ್ ಉಪೇಂದ್ರರವರ ಶ್ರೀಮತಿ ಹಾಗೂ ಆಧ್ಯಾತ್ಮಿಕ ಚಿತ್ರಗಳಾದ ಅಷ್ಟವಕ್ರ, ಭಗವದ್ ಶ್ರೀ ರಾಮಾನುಜ ಚಿತ್ರದ ನಿರ್ದೇಶಕರು ರಾಜಾ ರವಿಶಂಕರ ರವರ ನಾಲ್ಕನೇಯ ನಿರ್ದೇಶನದ ಚಿತ್ರವಾಗಿ ಭಗವತ್ಪಾದರ ಕಥೆಯನ್ನು ಆಯ್ದುಕೊಂಡಿದ್ದು ಚಿತ್ರಕಥೆ ಸಂಭಾಷಣೆಯನ್ನೂ ಸಹ ರಚಿಸಿದ್ದಾರೆ.
ನಿರ್ದೇಶಕರು ರಾಜಾ ರವಿಶಂಕರ
ಶಂಗೇರಿಯ ಜಗದ್ಗುರುಗಳ ಮಾರ್ಗದರ್ಶನ ಚಿತ್ರದ ಬೆಂಗಾವಲಿಗಿದೆ.ರವೀಂದ್ರ ಭಾಗವತ, ರಾಮಕೃಷ್ಣ, ಮಾಸ್ಟರ ಲಿಖಿತ ಶರ್ಮಾ, ಮಾಸ್ಟರ್ ಬಿ. ಪಿ. ರೋಹಿತ್ ಶರ್ಮಾ, ಡಾ. ಆರೂಢಭಾರತಿ ಸ್ವಾಮಿಜಿ, ಮೈಕೋ ಮಂಜು , ರಮೇಶಭಟ್, ಮೂಗೂ ಸುರೇಶ, ಜಿ.ರಾಮರಾವ್,ಆದಿತ್ಯ ಶೆಟ್ಟಿ, ಸಾಯಿಪ್ರಕಾಶ,ನಾಗೇಂದ್ರ ಪ್ರಸಾದ,ಸತ್ಯ ಪ್ರಸಾದ, ಶಶಿ ಕೋಟೆ, ವಿನಯಾ ಪ್ರಸಾದ,ಪ್ರಥಮಾ ಪ್ರಸಾದ,ತೇಜಸ್ವೀನಿ,ಸುರೇಖಾ ಸುಕುಮಾರ,ಸುಧಾ,ಉಷಾ ಮೊದಲಾದವರು ಬೆಳ್ಳಿತೆರೆಯನ್ನು ಹಂಚಿಕೊಂಡಿದ್ದಾರೆ.

Social Plugin