ರಬಕವಿ-ಬನಹಟ್ಟಿ,ಸೆ17: `ಅಕ್ರಮ ಮದ್ಯ-ಮಟ್ಕಾ ಹಾವಳಿ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿಗೆ ಎಚ್ಛೆತ್ತ ಪೊಲೀಸ್ ಹಾಗು ಅಬಕಾರಿ ಅಧಿಕಾರಿಗಳು ಒಂದೇ ದಿನದಲ್ಲಿ ನಾಲ್ವರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮೀಪದ ಕುಲಹಳ್ಳಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಅದೇ ಪ್ರದೇಶದ ಸಂತೋಷ ಸಂಗಪ್ಪ ಪಾನಶೆಟ್ಟಿ ಎಲ್ಲಿಂದಲೋ ಟೆಟ್ರಾ ಪೌಚ್‍ಗಳನ್ನು ತಂದಿದ್ದ ಈತ ಪರವಾನಗಿ ಇಲ್ಲದೇ ಮಾರಾಟ ಮಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿ ಬಳಿ ಇದ್ದ 2000 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಅದರಂತೆ ಚಿಮ್ಮಡ ಗ್ರಾಮದ ಬಳಗಾರ ಕ್ರಾಸ್ ಬಳಿಯಲ್ಲಿ ಯಲ್ಲಪ್ಪ ಮಹಾನಿಂಗ ಗೋವಿಂದಗೋಳ ಎಂಬಾತ ಅಕ್ರಮವಾಗಿ ಟೆಟ್ರಾ ಪೌಚ್‍ಗಳನ್ನು ಮಾರುವ ಸಂದರ್ಭ ಆರೋಪಿತನ ಬಳಿಯಿದ್ದ ಸುಮಾರು 3000 ರೂ. ಮೂಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಟ್ಕಾ ಬುಕ್ಕಿಗಳ ಬಂಧನ: ನಗರದ ಅಶೋಕ ಕಾಲನಿಯ ನಿವಾಸಿ ವಸಂತ ಗಣಪತಿ ಚವ್ಹಾನ ಎಂಬಾತ ಕೆಎಚ್‍ಡಿಸಿ ಕಾಲನಿಯ ಬಾಂಗಿ ವೃತ್ತದ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಪಾಯ್ದೆಗೋಸ್ಕರ 1 ರೂ.ಗೆ 80 ರೂ. ಕೊಡುವ ಕರಾರಿನ ಮೇಲೆ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಸಾರ್ವಜನಿರಿಂದ ಹಣ ಪಡೆದು ಮಟ್ಕಾ ಜೂಜಾಟ ಬರೆದುಕೊಳ್ಳುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ನೂತನ ವಿದ್ಯಾಲಯ ಹತ್ತಿರದ ನಿವಾಸಿ ಅನೀಲ ಬೀಳಗಿ ಎಂಬಾತ ನಗರದ ನೀರಿನ ಟಾಕಿ ಹತ್ತಿರದ ಚೌಡಯ್ಯಾ ವೃತ್ತದ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ ಸಂದರ್ಭ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Social Plugin