ಬನಹಟ್ಟಿಯ ಸದಾಶಿವ ನಗರದ ಸರ್ಕಾರಿ ಶಾಲೆಯಲ್ಲಿ 3 ಹೆಚ್ಚುವರಿ ಕೊಠಡಿಗಳಿಗೆ ಶಾಸಕ ಸಿದ್ದು ಸವದಿ ಶಂಕು ಸ್ಥಾಪನೆ ನೆರವೇರಿಸಿದರು.
ಶಾಸಕರಿಂದ 3 ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ
ರಬಕವಿ-ಬನಹಟ್ಟಿ,ಸೆ29: ತಾಲೂಕಿನ ಬನಹಟ್ಟಿಯ ಸದಾಶಿವ ನಗರದಲ್ಲಿ 32 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಣವಾಗಲಿರುವ ಸರ್ಕಾರಿ ಶಾಲೆಯ ಹೆಚ್ಚುವರಿ 3 ಕೊಠಡಿ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಶಂಕು ಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಗುಡ್ಡದ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ ಕೊಠಡಿಗಳ ಅಭಾವ ನೀಗಿಸಲು ಹೆಚ್ಚುವರಿ ಕೊಠಡಿ ಅನಿವಾರ್ಯವಾಗಿತ್ತು. ಮುಂದಿನ ವರ್ಷದಿಂದಲೇ ಕೊಠಡಿಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಕ್ತವಾಗುವಂತೆ ಅತಿ ಬೇಗನೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.
ಇದೇ ಸಂದರ್ಭ ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ಕುಮಾರ ಕದಂ, ನಗರಸಭಾ ಸದಸ್ಯ ಜಯಶ್ರೀ ಬಾಗೇವಾಡಿ, ಎಸ್‍ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಕೋಪರ್ಡೆ, ಅಪ್ಪು ರಾವಳ, ಮಲ್ಲು ಬೀಳಗಿ, ಜಿ.ಆಯ್. ಹೆದ್ದಾಳೆ, ಮಹಾಬಳ ಕಾತ್ರಾಳ ಸೇರಿದಂತೆ ಅನೇಕರಿದ್ದರು.

Social Plugin