ರಬಕವಿ-ಬನಹಟ್ಟಿ,ಅ11: ಇಡೀ ನಗರದಲ್ಲಿ ಸಾವಿರಾರು ಕುಟುಂಬಗಳು ಮಗ್ಗಗಳಿಂದ ಸೀರೆ ತಯಾರು ಮಾಡುವವರೇ ಇದ್ದಾರೆ. ಮಗ್ಗಗಳ ಶಬ್ದವೇ ಇವರ ಬಾಳಿನ ಸಂಗಾತಿಯೆಂದರೆ ತಪ್ಪಾಗಲಾರದು. ಇಂತಹ ಕರ್ಕಶ ಶಬ್ದದ ಮಧ್ಯದಲ್ಲಿಯೇ ಊಟ, ನಿದ್ರೆ ಎಲ್ಲವೂ ಇರುತ್ತದೆ. ಇಂತಹ ಶಬ್ದದ ಮಧ್ಯದಲ್ಲಿಯೂ ವಿದ್ಯಾಭ್ಯಾಸವನ್ನು ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ ದೊಡ್ಡದೇ ಇದೆ.
ರಾಮಪೂರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮದಲ್ಲಿ 585 ಅಂಕ ಗಳಿಸಿ ಶೇ.94 ರಷ್ಟು ಅಂಕ ಗಳಿಸುವ ಮೂಲಕ ತೃತಿಯ ಸ್ಥಾನ ಪಡೆದಿರುವ ಸಂಜನಾ ಬಡ್ಡಿಯವರ ತಂದೆ ಮಹಾದೇವ ಕೂಲಿ ನೇಯ್ಗೆಯೊಂದಿಗೆ ಇವತ್ತು ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಇಲ್ಲವಾದಲ್ಲಿ ಉಪವಾಸ. ಹೀಗಿರುವಾಗ ಈತಳ ತಾಯಿ ಸವಿತಾ ಮನೆ-ಮನೆಗೆ ತೆರಳಿ ಅಡುಗೆ ಕೆಲಸ ಮಾಡುತ್ತ ಬಂದಷ್ಟು ದುಡ್ಡಿನಲ್ಲಿ ಮಕ್ಕಳ ವಿದ್ಯಾಭ್ಯಾಸದೊಂದಿಗೆ ಬದುಕಿನ ಬಂಡಿ ಕಟ್ಟಿಕೊಂಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿ ಸಂಜನಾಗೆ ವಿಜ್ಞಾನ ವಿಭಾಗದಲ್ಲಿ ಮುಂದುವರೆಯಬೇಕೆಂಬ ಬಯಕೆಯಾಗಿದ್ದರೆ, ಕುಟುಂಬಕ್ಕೆ ಶಿಕ್ಷಣ ಒಂದು ಸವಾಲಾಗಿದೆ. ಸಹಾಯ ಮಾಡಲಿಚ್ಛಿಸುವವರು 89041-94950 ನಂಬರನ್ನು ಸಂಪರ್ಕಿಸಬಹುದು.
Social Plugin