ಕಡಪಟ್ಟಿ : ಪವಾಡ ಬಸವೇಶ್ವರನಿಗೆ ಆಕರ್ಷಕ ಬುತ್ತಿಪೂಜೆ 

 

(ಸ್ವರೂಪ ಸಂದರ್ಶನ ವರದಿ: ಮ.ಕೃ.ಮೇಗಾಡಿ,) 


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ಕಡಪಟ್ಟಿ : ಪವಾಡ ಬಸವೇಶ್ವರನಿಗೆ ಆಕರ್ಷಕ ಬುತ್ತಿಪೂಜೆ 

ಕಡಪಟ್ಟಿ : ಜಗತ್ತಿನಾದ್ಯಂತ ಕೋವಿಡ್-19 ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಒಂದೆಡೆ ಪ್ರವಾಹದ ಭೀತಿ ಜನರನ್ನು ಕಾಡುತ್ತಿದೆ. ಹಬ್ಬ ಹರಿದಿನಗಳು ತಮ್ಮ ಹಿಂದಿನ ಸಂಭ್ರಮವನ್ನು ಕಾಣದಂತಾಗಿ ಸರಳವಾಗಿ ಆಚರಿಸುವಂತಾಗಿದೆ. ಶ್ರಾವಣ ಮಾಸದಲ್ಲಿ ನಡೆಯುತಿದ್ದ ಜಾತ್ರೆ, ಉತ್ಸವ, ಪ್ರವಚನಗಳು ನಡೆಯದೇ ಇರುವುದಕ್ಕೆ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಕಾರಣವಾಗಿದೆ. ಆದರೂ ಶ್ರಾವಣ ಮಾಸದ ವಿಶೇಷ ಪೂಜಾಭಿಷೇಕಗಳು ಅರ್ಚಕರಿಂದ ನಡೆದಿವೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವಸ್ಥಾನಕ್ಕೆ ಬರುತಿದ್ದಾರೆ. ಇಲ್ಲಿಗೆ ಸಮೀಪದ ಕಡಪಟ್ಟಿ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರಾವಣ ಮಾಸ ಹಾಗೂ ಶ್ರೀಕೃಷ್ಣಜನ್ಮಾಷ್ಟಮಿ ನಿಮಿತ್ಯ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಬಸವಣ್ಣ ಹಾಗೂ ಶ್ರೀಕೃಷ್ಣನ ಆಕರ್ಷಕ ಬುತ್ತಿಪೂಜೆÉ ಎಲ್ಲರ ಗಮನ ಸೆಳೆಯುವಂತಿತ್ತು. ಆ ಬುತ್ತಿಪೂಜೆ ನೋಡಿದವರು ಮೊಬೈಲ್‍ನಲ್ಲಿ ಸೆರೆಹಿಡಿದು ನಮಿಸುತ್ತಿರುವುದು ಕಂಡುಬಂತು. ಈ ಬುತ್ತಿಪೂಜೆಯನ್ನು ಬಸಯ್ಯಾ ಗುರುಪಾದಯ್ಯಾ ಪೂಜಾರಿಯವರು ಮಾಡಿದ್ದಾರೆಂದು ದೇವಸ್ಥಾನದ ಅರ್ಚಕ ಸಂಜು ಹರಗಣಿಮಠ ಹೇಳಿದರು. ಜಾತ್ರೆ ರದ್ದು : ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಬಾಗಲಕೋಟೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ವರ್ಷ ಕಡಪಟ್ಟಿ ಬಸವಣ್ಣ ದೇವರ ಜಾತ್ರೆ ರದ್ದುಪಡಿಸಲಾಗಿದೆ ಎಂದು ಶ್ರೀಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.