ಪ್ರೀತಿಯ ವೀಕ್ಷಕರಿಗೆಲ್ಲ ನಿಮ್ಮ ಮಾಧವಾನಂದ ಮಾಡುವ ನಮಸ್ಕಾರಗಳು, ಏನೋ ಗೊತ್ತಿಲ್ಲ ಈ ಎರಡು ಮಾತುಗಳನ್ನು ತಮ್ಮಮುಂದೆ ಹಂಚಿಕೊಳ್ಳುವಾಸೆ, ಶ್ರಾವಣ ಮಾಸದಲ್ಲಿ ಶ್ರೀ ಅಲ್ಲಮಪ್ರಭು ದೇವರ ಪೂಜಾ ವಿಧಿ ವಿಧಾನಗಳ ನೇರ ಪ್ರಸಾರ ಎಲ್ಲ ಭಕ್ತರಿಗೆ ತೋರಿಸುವ ಒಂದು ಸೌಭಾಗ್ಯ ಈ ವ್ಯಕ್ತಿಗೆ ಸಿಕ್ಕಿದ್ದು ಒಂದು ಪವಾಡದ ಹಾಗೆ ನಮಗಾಗಿದೇ, ಕಾರಣ ಬಹಳ ಇವೆ ಮುಂದೊಮ್ಮೆ ಅದೆಲ್ಲ ನಾನು ಮತ್ತೊಮ್ಮೆ ತಮ್ಮ ಮುಂದೆ ಹಂಚಿಕೊಳ್ಳುವೆ. ಈಗ ವಿಷಯವೇನೆಂದರೆ ಈ ಸೇವೆಗಾಗಿ ದೇವಸ್ಥಾನದ ಅರ್ಚಕರು ಹಾಗೂ ನಾಡಗೌಡರು, ಹಿರಿಯರು ಸನ್ಮಾನಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದಾಗ ನಾವು ಹೇಳಿದೆವು ಇದು ನಾವು ಮಾಡಿರುವುದು ಸೇವೆಯಲ್ಲ ಶ್ರೀ ಅಲ್ಲಮಪ್ರಭುವಿನ ಆಳಾಗಿ ದೂರದಲ್ಲಿರುವ ಭಕ್ತರಿಗೆ ನೇರಪ್ರಸಾರದ ಮೂಲಕ ದರ್ಶನ ತೋರಿಸುವ ಒಂದು ಸೌಭಾಗ್ಯ. ಆದರೆ ಅವರು ನಮಗೆ ಸನ್ಮಾನಕ್ಕಾಗಿ ಬರಲು ಹೇಳಿದರು ವಿಶೇಷವಾಗಿ ನಾನು ಸನ್ಮಾನಗಳಿಂದ ಕೊಂಚ ದೂರ, ನಾನು ಇಲ್ಲಾ ಹೊರಗಡೆ ಇದ್ದೇನೆ ಎಂದು ಸುಳ್ಳು ಹೇಳಿ ಯಥಾ ಪ್ರಕಾರ ಎಡಿಟಿಂಗ್ ಕೆಲಸ ಮಾಡ್ತಾ ಇದ್ರೆ ಸೀದಾ ಶ್ರೀ ರೇವಣೇಶ ಹಿರೇಮಠ ಸ್ವಾಮಿಗಳು ಬಂದು ದೇವಸ್ಥಾನ ಕ್ಕೆ ನನ್ನನ್ನು ಹಾಗೂ ಹಿರೇಮೈತ್ರಿ ಸರ್ ನ್ನು ಕರೆದುಕೊಂಡು ಹೋಗಿ ಸನ್ಮಾನಿಸಿಯೇ ಬಿಟ್ಟರು. ನಾವು ಇದೆಲ್ಲ ಶ್ರೀ ಅಲ್ಲಮಪ್ರಭುವಿನ ಆಶೀರ್ವಾದವೆಂದು ಕೊಂಡೆವು ಆದರೆ ಇದನ್ನು ನಾವು ಹೇಳಿಕೊಳ್ಳಲು ಬಯಸುವುದಿಲ್ಲ ಈಗ ಈ ವಿಷಯ ಹೇಳಲು ಕಾರಣ ಇಂದು ಇದ್ದಕ್ಕಿದ್ದ ಹಾಗೆ ಶ್ರೀ ಬಸವರಾಜ ಬಾಳಿಕಾಯಿಯವರು ಸನ್ಮಾನದ ಫೋಟೋ ಕಳುಹಿಸಿದರು ಸಾಮಾನ್ಯವಾಗಿ ಸನ್ಮಾನದ ಫೋಟೋ ಸಹ ನಮಗೆ ಬೇಡ ಎಂದು . ವಿಷಯವಿಷ್ಟೆ ಸ್ನೇಹಿತರೆ ನಿಜವಾಗಿಯು ಮುಂದೆ ನಾವು ಮಾಡುವ ಕೆಲಸಗಳು ತುಂಬಾ ಇವೆ ಈ ಸನ್ಮಾನಗಳು ನನ್ನನ್ನು ಹಿಂದಕ್ಕೆ ಒಯ್ಯಬಹುದೇನ್ನುವ ಭಯವಿರಬಹುದು.ಹಿಂದಿನ ನನ್ನ ಅವಮಾನಗಳು ಇಂದು ನನಗೆ ಪಾಠ ಕಲಿಸಿ ಇಲ್ಲಿಗೆ ತಂದಿದೆ ☺️ಆದರೆ ಸನ್ಮಾನ ಎಂದರೆ ಯಾಕೋ ಭಯ ಅಷ್ಟೇ. ಶ್ರೀಘ್ರವೆ ಮತ್ತೊಂದು ನಮ್ಮ ಊರು ಹೆಮ್ಮೆ ಪಡುವಂತಹ ಕೆಲಸಕ್ಕೆ ಕೈ ಹಾಕಲು ಅಥವಾ ಒಂದು ಸಾಹಸಕ್ಕೆ ಕೈ ಹಾಕಲು ರೆಡಿಯಾಗಿದ್ದೆನೇ ( ಆದಷ್ಟು ಬೇಗ ಆ ವಿಷಯ ತಿಳಿಸುವೆ ) ಎಂದಿನಂತೆ ಎಲ್ಲರ ಸಹಕಾರ ಇರುತ್ತೆ ಎಂದು ಕೊಂಡಿರುತ್ತೇನೆ. ಮತ್ತೆ ಹಲವು ಹಿತಶತ್ರುಗಳ ಕ್ರಪೆ ಕೂಡ ನಮ್ಮ ಮೇಲಿರುವುದು ಸಂತೋಷವೆ. ಮತ್ತೊಮ್ಮೆ ಸನ್ಮಾನಿಸಿದ ಎಲ್ಲ ಅರ್ಚಕರು, ನಾಡಗೌಡರು, ಹಿರಿಯರು ಹಾಗೂ ಸಮಸ್ತ ಭಕ್ತರಿಗೆ ನನ್ನ ಕೃತಜ್ಞತೆಗಳು 🌼👏🌼
Social Plugin