ಆಸಂಗಿಯ ಯಲ್ಲಿ ಬಾಗಲಕೋಟ ಜಿಲ್ಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ಬಹುಉಪಯೋಗಿ ತಂತ್ರಾಂಶದ ಉದ್ಘಾಟನೆಯನ್ನು ಶಾಸಕ ಸಿದ್ದು ಸವದಿ ನೆರವೆರಿಸಿದರು.
ವಿದ್ಯೆಯ ಜೊತೆ ತಂತ್ರಜ್ಞಾನದ ತಿಳುವಳಿಕೆ ಅವಶ್ಯ
ರಬಕವಿ-ಬನಹಟ್ಟಿ,ಅ23: ಇಂದಿನ ದಿನಮಾನಗಳಲ್ಲಿ ವಿದ್ಯೆಯ ಜೊತೆ ತಂತ್ರಜ್ಞಾನದ ತಿಳುವಳಿಕೆ ಅವಶ್ಯಕವಾಗಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಸಮೀಪದ ಆಸಂಗಿಯ ದರೂರ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಾಗಲಕೋಟ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ಬಹುಉಪಯೋಗಿ ತಂತ್ರಾಂಶದ ಉದ್ಘಾಟನೆಯನ್ನು ನೆರವೆರಿಸಿ ಮಾತನಾಡಿದರು. ಜಾಗತೀಕವಾಗಿ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದುವುದು ಪ್ರತಿಯೊಬ್ಬರಿಗೂ ಈಗ ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಅದನ್ನು ಪ್ರತಿಯೊಬ್ಬರ ಶಿಕ್ಷಕರು ಕೂಡಾ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಬಾಗಲಕೋಟೆ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಬಾಗೇನವರ, ಇಂದಿನ ಮಕ್ಕಳು ಕೂಡಾ ಈ ತಂತ್ರಜ್ಞಾನದ ಕಡೆ ಹೆಚ್ಚಿನ ಒಲವು ತೋರುತ್ತಿದ್ದು, ಕಾಲಕ್ಕೆ ತಕ್ಕಂತೆ ಶಿಕ್ಷಕರು ಕೂಡಾ ಬದಲಾವಣೆ ಹೊಂದಿ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ಶಿಕ್ಷಣವನ್ನು ನೀಡುವಂತಾಗಬೇಕು ಅಂದಾಗ ಮಾತ್ರ ಶಿಕ್ಷಣದ ಪ್ರಗತಿ ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಾಸಕ ಸಿದ್ದು ಸವದಿಯವರನ್ನು ಜಿಲ್ಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿ. ಪಂ ಸದಸ್ಯ ಪುಂಡಲಿಕ ಪಾಲಬಾವಿ, ಬಿಜೆಪಿ ನಗರಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ಕೋಟ್ಯಾಳ, ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಜೀವ ಹಿಪ್ಪರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನ್ಯಾಮಗೌಡ, ಬಸವರಾಜ ಹನಗಂಡಿ, ಬಾಬಾಗೌಡ ಪಾಟೀಲ, ಶ್ರೀಶೈಲ ಬುರ್ಲಿ, ಸಿ. ಜಿ. ಕಡಕೋಳ ವೇದಿಕೆ ಮೇಲಿದ್ದರು.
ಸಮಾರಂಭದಲ್ಲಿ ಅನಿಲ ಕಡ್ಲಿ, ಎಂ. ಎಸ್. ಗಡೆನ್ನವರ, ಪ್ರಶಾಂತ ಹೊಸಮನಿ, ಬಿ. ಡಿ. ನೇಮಗೌಡ, ಅರುಣ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.
ಜಾಹಿರಾತುದಾರರು....
Social Plugin