ನೇಕಾರರ ಒತ್ತಾಯಕ್ಕೆ ಮಣಿದ ಅಧ್ಯಕ್ಷ ಸ್ಥಾನ ಸ್ವೀಕಾರಕ್ಕೆ ಮುಂದಾದ ಶಾಸಕ ರಬಕವಿ-ಬನಹಟ್ಟಿ,ಅ16: ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದನ್ವಯ ಕೆಎಚ್‍ಡಿಸಿ ನಿಗಮದ ಅಧ್ಯಕ್ಷರನ್ನಾಗಿ ತೇರದಾಳ ಶಾಸಕ ಸಿದ್ದು ಸವದಿಯವರನ್ನು ನೇಮಕ ಮಾಡಿದ್ದನ್ನು ತಿರಸ್ಕರಿಸಿ ನೇಕಾರ ಸಮುದಾಯದ ಓರ್ವರಿಗೆ ನೀಡಬೇಕೆಂದು ಹೇಳಿಕೆ ನೀಡಿದ್ದರು. ರವಿವಾರ ನೇಕಾರ ಮುಖಂಡರ ಸಭೆಯಲ್ಲಿ ಸಮುದಾಯದ ಒತ್ತಾಯಕ್ಕೆ ಮಣಿದ ಶಾಸಕರು ಅಧ್ಯಕ್ಷ ಸ್ಥಾನ ಸ್ವೀಕರಿಸುವಲ್ಲಿ ಮುಂದಾಗಿ, ಬುಧವಾರ ಅಧಿಕಾರ ಸ್ವೀಕರಿಸುವಲ್ಲಿ ಮುಂದಾಗಿದ್ದಾರೆ. 

 
ಬನಹಟ್ಟಿಯಲ್ಲಿ ನಡೆದ ನೇಕಾರ ಮುಖಂಡರ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.


ಜಾಹಿರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : 9482919983...9535719053 ... ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515..ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175...ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

    ನೇಕಾರರ ಒತ್ತಾಯಕ್ಕೆ ಮಣಿದ ಅಧ್ಯಕ್ಷ ಸ್ಥಾನ ಸ್ವೀಕಾರಕ್ಕೆ ಮುಂದಾದ ಶಾಸಕ ರಬಕವಿ-ಬನಹಟ್ಟಿ,ಅ16: ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದನ್ವಯ ಕೆಎಚ್‍ಡಿಸಿ ನಿಗಮದ ಅಧ್ಯಕ್ಷರನ್ನಾಗಿ ತೇರದಾಳ ಶಾಸಕ ಸಿದ್ದು ಸವದಿಯವರನ್ನು ನೇಮಕ ಮಾಡಿದ್ದನ್ನು ತಿರಸ್ಕರಿಸಿ ನೇಕಾರ ಸಮುದಾಯದ ಓರ್ವರಿಗೆ ನೀಡಬೇಕೆಂದು ಹೇಳಿಕೆ ನೀಡಿದ್ದರು. ರವಿವಾರ ನೇಕಾರ ಮುಖಂಡರ ಸಭೆಯಲ್ಲಿ ಸಮುದಾಯದ ಒತ್ತಾಯಕ್ಕೆ ಮಣಿದ ಶಾಸಕರು ಅಧ್ಯಕ್ಷ ಸ್ಥಾನ ಸ್ವೀಕರಿಸುವಲ್ಲಿ ಮುಂದಾಗಿ, ಬುಧವಾರ ಅಧಿಕಾರ ಸ್ವೀಕರಿಸುವಲ್ಲಿ ಮುಂದಾಗಿದ್ದಾರೆ. ಇಂದು ಶಾಸಕರ ಕಾರ್ಯಾಲಯದಲ್ಲಿ ನಡೆದ ನೇಕಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ಅಸಮಾಧಾನವೆಂಬುದಿಲ್ಲ. ಕೆಎಚ್‍ಡಿಸಿ ನಿಗಮಕ್ಕೆ ಸಂಬಂಧ ನೇಕಾರ ಹಿರಿಯರೋರ್ವರಿಗೆ ನೀಡಿ ಎಂಬ ಬಯಕೆ ಮಾತ್ರವಿದೆ. ಇಷ್ಟೊಂದು ಪ್ರಮಾಣದಲ್ಲಿ ಮನವಿ ಮಾಡುತ್ತಿರುವ ನೇಕಾರರಿಗಾಗಿ ಹಾಗು ಮುಖ್ಯಮಂತ್ರಿಗಳ ಆದೇಶ ಹಾಗು ಒತ್ತಡಕ್ಕೆ ಮಣಿದು ಅಧಿಕಾರ ಸ್ವೀಕರಿಸುವೆ ಎಂದು ಒಪ್ಪಿಕೊಂಡರು. ಸದ್ಯದ ಪರಿಸ್ಥಿತಿಯಲ್ಲಿ ನಿಗಮ ಅಧೋಗತಿಯತ್ತ ಸಾಗಿದೆ. ಇದರ ಪುನಶ್ಚೇತನ ಒಂದು ಸವಾಲದ ಮಾತು. ಪ್ರಾಮಾಣಿಕ ಪ್ರಯತ್ನದಿಂದ ಪೂರ್ತಿಯಲ್ಲದಿದ್ದರೂ ಗರಿಷ್ಠದ ಅಭಿವೃದ್ಧಿಗಾದರೂ ಶ್ರಮಿಸುವದಾಗಿ ಭರವಸೆ ನೀಡಿದರು. ಒಟ್ಟಾರೆ ಕೆಎಚ್‍ಡಿಸಿ ನಿಗಮ ಗೊಂದಲದ ಗೂಡಿನಲ್ಲಿದ್ದು, ನೇಕಾರರ ನಿರೀಕ್ಷೆಯನ್ನು ಎಷ್ಟರಮಟ್ಟಿಗೆ ತಲುಪುತ್ತೇನೆಂಬುದು ಅರಿಕೆಯಾಗುತ್ತಿಲ್ಲವೆಂದರು. ಇದೇ ಸಂದರ್ಭ ಧರೆಪ್ಪ ಉಳ್ಳಾಗಡ್ಡಿ, ಜಿ.ಎಸ್. ಗೊಂಬಿ, ರಾಜು ಅಂಬಲಿ, ಆನಂದ ಕಂಪು, ಸಿದ್ದಪ್ಪ ಗಂವಾರ, ಹೂಗಾರ, ಗುರುದೇವ ಅಂಬಿ, ಮಲ್ಲಿಕಾರ್ಜುನ ಬಾಣಕಾರ, ಬಿ.ಎಸ್. ಪಾಟೀಲ, ಹಟ್ಟಿ, ಸುರೇಶ ಅಕ್ಕಿವಾಟ ಸೇರಿದಂತೆ ಅನೇಕರು ಮಾತನಾಡಿದರು. ಜಿಪಂ ಸದಸ್ಯರಾದ ಪುಂಡಲೀಕ ಪಾಲಭಾಂವಿ, ಪರಶುರಾಮ ಬಸವ್ವಗೋಳ, ಪರಪ್ಪ ಬಿಳ್ಳೂರ, ಪರಪ್ಪ ಉರಭಿನವರ, ಗೋವಿಂದ ಡಾಗಾ, ಕುಮಾರ ಕದಮ, ಈರಣ್ಣ ಚಿಂಚಖಂಡಿ, ಬೀಳಗಿ ಸೇರಿದಂತೆ ಅನೇಕರಿದ್ದರು. `ಎಂದಿಗೂ ಸಚಿವ ಸ್ಥಾನ ಬೇಡಿಲ್ಲ. ಬೇಕೆಂದೂ ಆಸೆ ಪಟ್ಟವನಲ್ಲ. ಪಕ್ಷದ ಅನಿವಾರ್ಯಕ್ಕೆ ಎಂಥಹ ತ್ಯಾಗಕ್ಕೂ ಸಿದ್ಧ. ಮುಖ್ಯಮಂತ್ರಿಗಳ ಆದೇಶ ಹಾಗು ನೇಕಾರರ ಒಲವಿನೊಂದಿಗೆ ಕೆಎಚ್‍ಡಿಸಿ ಅಧ್ಯಕ್ಷನಾಗುವೆ’.----ಸಿದ್ದು ಸವದಿ, ಶಾಸಕರು. 


ಜಾಹಿರಾತು...