ತೇರದಾಳ :ತೇರದಾಳ ಪಟ್ಟಣದ ಚೌಡಯ್ಯ ಭವನದಲ್ಲಿ ಮಾಜಿ ಯೋಧ ಸುರೇಂದ್ರ ತಳವಾರ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

 
ವರದಿ : ಕೆ . ಎಸ್ . ರಂಗಸ್ವಾಮಿ 

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕøಷ್ಟವಾದ ಗಾರ್ಡನ್ ತಯಾರಕರು. ಸಂಪರ್ಕಿಸಿ : 9482919983.... 9535719053... ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411... ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

ತೇರದಾಳ : ಸುರೇಂದ್ರ ತಳವಾರ ಅವರು ಕೇವಲ ಗಡಿಯನ್ನಷ್ಟೇ ರಕ್ಷಣೆ ಮಾಡಲಿಲ್ಲ. ತಮ್ಮ ನಿವೃತ್ತಿ ನಂತರವು ನಮ್ಮ ತೇರದಾಳ ಪಟ್ಟಣದ ರಕ್ಷಣೆ ಮಾಡಿದರು. ಅವರು ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮ ಪಟ್ಟರು. ಪಟ್ಟಣದಲ್ಲಿ ಯಾವುದೇ ಸಾಮಾಜಿಕ ಕಳಕಳಿಯ ಕಾರ್ಯಗಳಿದ್ದಲ್ಲಿ ಓಡೋಡಿ ಬರುತ್ತಿದ್ದರು. ಅವರು ಹಿಡಿದ ಪ್ರತಿ ಕೆಲಸವನ್ನು ತುಂಬಾ ಜಾಗೃತಿಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅದರಲ್ಲೂ ರಾಷ್ಟ್ರೀಯ ಕಾರ್ಯಕ್ರಮ ಇದ್ದರಂತೂ ಒಂದಿಷ್ಟು ಅವ್ಯವಸ್ಥೆ ಆಗದಂತೆ ತುಂಬಾ ಜಾಗೃತಿಯಿಂದ ಕೆಲಸ ಮಾಡುತ್ತಿದ್ದರೂ ಅವರ ದೇಶ ಪ್ರೇಮ ಇತರರಿಗೆ ಮಾದರಿಯಾಗುವಂತಹುದು. ಇಂತ ಒಬ್ಬ ವೀರ ಮಾಜಿ ಯೋಧ ನಮ್ಮೇಲ್ಲರ ಅಗಲಿ ಹೋಗಿದ್ದು ನಮಗೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕಾ ಹೋರಾಟ ಸಮೀತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಹೇಳಿದರು. ಪಟ್ಟಣದ ಚೌಡಯ್ಯ ಭವನದಲ್ಲಿ ತಾಲೂಕಾ ಹೋರಾಟ ಸಮೀತಿಯ ಸದಸ್ಯರು ಹಮ್ಮಿಕೊಂಡ ಅಗಲಿದ ಮಾಜಿ ಯೋಧ ಸುರೇಂದ್ರ ತಳವಾರ ಇವರಿಗೆ ಸಲ್ಲಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಊರಿನ ಬಗ್ಗೆ ತುಂಬಾ ಅಭಿಮಾನ ಹೊಂದಿದ ಇವರು ಊರಿನ ಅಭಿವೃದ್ಧಿ ಹಾಗೂ ಸ್ವಚ್ಚತೆಯ ಬಗ್ಗೆ ಕಾಳಜಿ ಉಳ್ಳವರಾಗಿದ್ದರು. ಯಾವಾಗಲೂ ಒಳ್ಳೆಯ ಚಿಂತನೆ, ಸಮಾಜ ಮುಖಿ ಕಾರ್ಯದಲ್ಲಿ ತೊಡಗುತ್ತಿದ್ದ ಇವರು ಎಲ್ಲರ ಹೃದಯ ಗೆದ್ದಿದ್ದರು. ಗ್ರಾಮ ದೇವತೆ ಶ್ರೀಅಲ್ಲಮಪ್ರಭು ದೇವರು ಎಂದರೆ ಇವರಿಗೆ ಪಂಚ ಪ್ರಾಣ ಅಲ್ಲಿಯೂ ಅವರ ಅಪಾರ ಭಕ್ತಿ ಸೇವೆ ಸಲ್ಲಿಸಿದ್ದರು ಎಂದರು. ರೇವಣೇಶ ಹಿರೇಮಠ ಮಾತನಾಡಿ ಸುರೇಂದ್ರ ಅವರು ಒಬ್ಬ ಯೋಧರಾದದ್ದರಿಂದ ಪ್ರತಿ ಕೆಲಸದಲ್ಲೂ ಶಿಸ್ತು ಪಾಲಿಸುತ್ತಿದ್ದರು. ಅವರು ಶಿಸ್ತು ಸಮಯ ಪಾಲನೆ ಕರ್ತವ್ಯ ನಿಷ್ಟ್ಯೆಯಿಂದ ಎಲ್ಲರ ಮನ ಗೆದ್ದಿದ್ದರು. ಪಟ್ಟಣದಲ್ಲಿ ಯಾರಾದರೂ ಯುವಕರು ಕಂಡರೆ ನೀವು ದೇಶದ ಗಡಿ ಕಾಯುವ ಯೋಧರಾಗಿ ದೇಶ ಸೇವೆ ಮಾಡಿ. ದೇಶ ಎಲ್ಲಕ್ಕಿಂತಲೂ ದೊಡ್ಡದು ಎಂದು ಅವರಲ್ಲಿ ದೇಶ ಪ್ರೇಮ ತುಂಬುತ್ತಿದ್ದರು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ರಜೆಯ ಮೇಲೆ ಬಂದ ಯೋಧರನ್ನು ಹಾಗೂ ಮಾಜಿ ಯೋಧರನ್ನು ಕೂಡಿಸಿ ರಾಷ್ಟ್ರೀಯ ಹಬ್ಬಗಳ ದಿನ ಬರುತ್ತಿದ್ದಂತೆ ವಾರಗಟ್ಟಲೇ ಕವಾಯತ್ ಮಾಡಿಸುವುದರ ಮೂಲಕ ಗೌರವ ಸಲ್ಲಿಸುತ್ತಿದ್ದರು. ಇಂತಹ ಎಂದು ಮರೆಯಲಾಗದ ಮಾಣಿಕ್ಯ ನಮ್ಮೆಲ್ಲರ ಅಗಲಿ ಹೋಗಿದ್ದು ನಮ್ಮೂರಿಗೆ ತುಂಬಲಾರದ ನಷ್ಟವಾಗಿದೆ. ನಮ್ಮೊಡನೆ ಇಂದು ನಮಗೆ ಗೊತ್ತಿಲ್ಲದಂತೆ ಮರೆಯಾಗಿ ಮೌನವಾದರು. ನಮ್ಮದೆಂತಹ ದುರದುಷ್ಟವೆಂದರೆ ಒಂದು ಹಿಡಿ ಮಣ್ಣು ಹಾಕುವ ಭಾಗ್ಯವು ನಮಗೆ ಸಿಗಲಿಲ್ಲ. ಸುರೇಂದ್ರ ತಳವಾರ ಅವರೆ ನಿಮ್ಮ ಅಗಲಿಕೆಯ ನೋವು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಕಾರಣ ದಯವಿಟ್ಟು ಇನ್ನೊಮ್ಮೆ ಹುಟ್ಟಿ ಬನ್ನಿ ಎಂದು ತುಂಬಾ ಭಾವುಕರಾಗಿ ಭಾರವಾದ ಮನಸ್ಸಿನಿಂದ ತಮ್ಮ ಗೆಳೆಯನ ಅಗಲಿಕೆಯನ್ನು ನೆನೆಸಿ ನೊಂದು ಹೇಳಿದರಲ್ಲದೆ ಅವರ ಕುಟುಂಬಕ್ಕೆ ಆ ದೇವರು ರಕ್ಷಣೆ ಮಾಡಲಿ. ವೀರ ಯೋಧನ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ, ಅಲ್ಲದೆ ನಾವು ಆ ಕುಟುಂಬದ ರಕ್ಷಣೆಗಾಗಿ ಸದಾ ಹಿಂದೆ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಗೆಪ್ಪ ತಾರದಾಳ, ಸಿದ್ದಪ್ಪ ಕದ್ದಿಮನಿ, ಮುರಿಗೆಪ್ಪ ಹನಗಂಡಿ, ಗಿರಿಮಲ್ಲಪ್ಪ ಕೊಕಟನೂರ, ಬಸಪ್ಪ ಗೋಲಭಾವಿ, ರಾಘು ಗಸ್ತಿ, ಬಸಪ್ಪ ನಿಂಬಿಕಾಯಿ, ಸಿದ್ದಪ್ಪ ಹುದ್ದಾರ, ಯಾಶೀನ ಸಾತಬಚ್ಚೆ ಹಾಗೂ ಮೃತ ಮಾಜಿ ಯೋಧನ ಪತ್ನಿ ಸೇರಿದಂತೆ ತಳವಾರ ಗಲ್ಲಿಯ ಹಿರಿಯರು ಇದ್ದರು. 

ಜಾಹಿರಾತು...