ಕಡಪಟ್ಟಿ :ಪವಾಡ ಬಸವಣ್ಣನ ಗರ್ಭಗುಡಿ ತುಂಬಿದ ರಾಷ್ಟ್ರಧ್ವಜದ ರೂಪ 

(ಸ್ವರೂಪ ಸಂದರ್ಶನ : ಮ.ಕೃ.ಮೇಗಾಡಿ)

ಜಾಹೀರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : ೯೪೮೨೯೧೯೯೮೩... ೯೫೩೫೭೧೯೦೫೩...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಕಡಪಟ್ಟಿ : ಭಾರತೀಯರಿಗೆಲ್ಲಾ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಬಂತೆಂದರೆ ಎಲ್ಲಿಲ್ಲದ ಉತ್ಸಾಹ, ಹುಮ್ಮಸ್ಸು, ದೇಶಪ್ರೇಮ, ದೇಶಾಭಿಮಾನ ತುಂಬಿ ಸಂಭ್ರಮಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇಶದೆಲ್ಲೆಡೆ ತ್ರಿವರ್ಣ ಧ್ವಜ ಬಾನೆತ್ತರ ಹಾರಿ, ನಮ್ಮ ಭಾರತದ ಶ್ರೇಷ್ಠ ಸಂಸ್ಕøತಿ, ಶಾಂತಿ, ಸೌಹಾರ್ಧತೆ, ಭಾವೈಕ್ಯತೆ, ಹಸಿರು ಸಿರಿ ಸಮೃದ್ಧಿ, ನಿರಂತರ ಪ್ರಗತಿಯತ್ತ ಚಲನೆಯ ಸಂಕೇತವಾಗಿ, ರಾಷ್ಟ್ರಾಭಿಮಾನ ಹೊಂದಿ ಕೇಸರಿ, ಬಿಳಿ, ಹಸಿರು ಭಾರತೀಯರು ಸಂಭ್ರಮಿಸುತ್ತೇವೆ. ಕಳೆದ 2 ವರ್ಷಗಳಿಂದ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ದಿನಗಳಂದು ಕಡಪಟ್ಟಿ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಗರ್ಭಗುಡಿ ಕೇಸರಿ ಬಿಳಿ ಹಸಿರು ಬಣ್ಣದ ಹಾಳೆಗಳಿಂದ ನಿರ್ಮಿಸಿದ ರಾಷ್ಟ್ರಧ್ವಜದ ರೂಪತಾಳಿ ಭಕ್ತರನ್ನು ಕಣ್ತುಂಬಿಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಚನ್ನಯ್ಯ ಶಂಕ್ರಯ್ಯ ಹರಗಣಿಮಠ ಅವರು ಆಕರ್ಷಕವಾಗಿ ಬಸವೇಶ್ವರ ಕಾಣುವಂತೆ ಗರ್ಭಗುಡಿ ತುಂಬ ಕೇಸರಿ ಬಿಳಿ ಹಸಿರು ಬಲೂನ್ ಕಟ್ಟಿ, ಬಣ್ಣದ ಹಾಳೆಗಳಿಂದ ರಾಷ್ಟ್ರಧ್ವಜದ ರೂಪದಂತೆ ಬಸವಣ್ಣನನ್ನು ಶೃಂಗರಿಸಿದ್ದಾರೆಂದು ಅರ್ಚಕ ಸಂಜು ಹರಗಣಿಮಠ ತಿಳಿಸಿದ್ದಾರೆ. ಇದು ಈ ದಿನದ ವಿಶೇಷವಾಗಿ ಗಮನ ಸೆಳೆದಿದೆ. ಕೋವಿಡ್-19 ಕೊರೋನಾ ಭಯದ ಭೀತಿ ಒಂದೆಡೆ ಆವರಿಸಿ ಜನರನ್ನು ತಲ್ಲಣವನ್ನುಂಟು ಮಾಡಿದ್ದರೆ, ಈ ಸಂದರ್ಭದಲಿ ನಮ್ಮ ದೇಶಬಾಂಧವರೆಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸಿ, ಸೆನಿಟೈಸರ್ ಬಳಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು ಎಲ್ಲೆಡೆ ಕಂಡುಬಂದಿದೆ. ಫೋಟೊ ವಿವರ : ಕಡಪಟ್ಟಿ ಪವಾಡ ಬಸವೇಶ್ವರ ಗರ್ಭಗುಡಿ ರಾಷ್ಟ್ರಧ್ವಜದ ರೂಪದೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿರುವ ದೃಶ್ಯ. 


 ಜಾಹೀರಾತು...