ಬನಹಟ್ಟಿಯಲ್ಲಿರುವ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೋಳ್ಳಲಾದ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೆರಿಸಿದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹಲಗಬಾಳಿ.
ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಬಂದಲ್ಲಿ ಅಭಿವೃದ್ದಿ ಸಾಧ್ಯವಿಲ್ಲ
ರಬಕವಿ-ಬನಹಟ್ಟಿ,ಅ15: ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಬಂದಲ್ಲಿ ಅಭಿವೃದ್ದಿ ಸಾಧ್ಯವಾಗುವದಿಲ್ಲ. ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿದರು.
ಅವರು ನಗರದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೋಳ್ಳಲಾದ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು. ಪಾರತಂತ್ರ್ಯದ ವಿರುದ್ಧ ಅಂದು ಹೋರಾಡಿದ್ದ ಭಾರತೀಯರು ಈಗ ಜಾತೀಯತೆ, ಕೋಮುಭಾವನೆ ಹಾಗು ಭ್ರಷ್ಟಾಚಾರದಂತ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ, ಡಾ. ಎ. ಆರ್. ಬೆಳಗಲಿ, ಎಂ. ಜಿ. ಕೆರೂರ ಮಾತನಾಡಿದರು. ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ನಗರಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ಬಸವರಾಜ ಗುಡೋಡಗಿ, ಶಂಕರ ಜಾಲಿಗಿಡದ, ರಾಹುಲ ಕಲಾಲ, ದಾನಪ್ಪ ಹುಲಜತ್ತಿ, ರಾಜಶೇಖರ ಮಟ್ಟಿಕಲ್ಲಿ, ಸಂಗಪ್ಪ ಕುಂದಗೋಳ, ಕಿರಣ ಕರಲಟ್ಟಿ, ಈಶ್ವರ ಚಮಕೇರಿ, ರಮೇಶ ಸವದಿ, ವಿಠ್ಠಲ ಹೊಸಮನಿ ಸೇರಿದಂತೆ ಅನೇಕರು ಇದ್ದರು.
ಜಾಹೀರಾತು...
Social Plugin