ಚಿಮ್ಮಡದಲ್ಲಿ ಮಾದರಿ “ಕಿಚಡಿ ಜಾತ್ರೆ”ಗೆ ನಿರ್ಧಾರ ಚಿಮ್ಮಡ : ಕೋವಿಡ್-19, ಕೊರೋನಾ ಮಹಾಮಾರಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಚಿಮ್ಮಡ ಗ್ರಾಮದ ಓಂ ಶ್ರೀಪ್ರಭುಲಿಂಗೇಶ್ವರ (ಕಿಚಡಿ) ಜಾತ್ರಾ ಮಹೋತ್ಸವವನ್ನು ಈ ವರ್ಷ ರದ್ದುಗೊಳಿಸಲಾಗಿದ್ದು, ಜನಸಂಧಣಿ ಇಲ್ಲದೆ ಮಾದರಿಯಾಗಿ ಈ ಜಾತ್ರೆಯನ್ನು ಶೃದ್ಧಾಭಕ್ತಿಯಿಂದ ಆಚರಿಸಲು ಗುರುವಾರ ನಡೆದ ಪೂಜ್ಯರ ಸಾನಿಧ್ಯದ, ಹಿರಿಯರ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು. 

 
(ಸ್ವರೂಪ ಸಂದರ್ಶನ ವರದಿ : ಮ.ಕೃ.ಮೇಗಾಡಿ)

ಜಾಹೀರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : ೯೪೮೨೯೧೯೯೮೩... ೯೫೩೫೭೧೯೦೫೩...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515 ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175 ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಚಿಮ್ಮಡ : ಕೋವಿಡ್-19, ಕೊರೋನಾ ಮಹಾಮಾರಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಚಿಮ್ಮಡ ಗ್ರಾಮದ ಓಂ ಶ್ರೀಪ್ರಭುಲಿಂಗೇಶ್ವರ (ಕಿಚಡಿ) ಜಾತ್ರಾ ಮಹೋತ್ಸವವನ್ನು ಈ ವರ್ಷ ರದ್ದುಗೊಳಿಸಲಾಗಿದ್ದು, ಜನಸಂಧಣಿ ಇಲ್ಲದೆ ಮಾದರಿಯಾಗಿ ಈ ಜಾತ್ರೆಯನ್ನು ಶೃದ್ಧಾಭಕ್ತಿಯಿಂದ ಆಚರಿಸಲು ಗುರುವಾರ ನಡೆದ ಪೂಜ್ಯರ ಸಾನಿಧ್ಯದ, ಹಿರಿಯರ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾಮದ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದಲ್ಲಿ ಚನ್ನಬಸವೇಶ್ವರ ಸಭಾ ವೇದಿಕೆಯಲ್ಲಿ ಕರೆಯಲಾಗಿದ್ದ ಸರ್ವ ಸಮಾಜಬಾಂಧವರ ಸಭೆಯಲ್ಲಿ ಟ್ರಸ್ಟ್ ಸಮಿತಿ ಅಧ್ಯಕ್ಷ ಶಿವಲಿಂಗಪ್ಪಾ ಪಾಟೀಲ ಮಾತನಾಡಿ, ಆಗಸ್ಟ್ 31 ಸೋಮವಾರ ನಡೆಸಲು ಉದ್ದೇಶಿಸಲಾಗಿದ್ದ ಜಾತ್ರೆಯಲ್ಲಿ ಭಕ್ತಾಧಿಗಳಾರೂ ದೇವಸ್ಥಾನಕ್ಕೆ ಹೋಗದೆ ಶ್ರೀ ಪ್ರಭುಲಿಂಗೇಶ್ವರ ಸೇವಾ ಸಮಿತಿಯಲ್ಲಿ ಇಂದಿನಿಂದಲೇ ದೊರೆಯುವ ಕಿಚಡಿ ಪ್ರಸಾದದ ಹಿಟ್ಟಕ್ಕಿ ಪಡೆದು ಆ ದಿವಸದಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯೇ ಕಿಚಡಿ ಪ್ರಸಾದ ತಯಾರಿಸಿ ಮನೆಯಿಂದಲೇ ನೈವೇದ್ಯ ಮಾಡುವ ಮೂಲಕ ಶ್ರೀ ಪ್ರಭುವಿನ ಕ್ರಪೆಗೆ ಪಾತ್ರರಾಗಬೇಕು ಎಂದರು. ಸದರಿ ಜಾತ್ರೆ (ಕಿಚಡಿ ಪ್ರಸಾದ ವಿತರಣೆ) ರದ್ದುಪಡಿಸಲಾಗಿದ್ದರಿಂದ ಜಾತ್ರೆಗಾಗಿ ಸಂಗ್ರಹಿಸಲಾಗುತಿದ್ದ ನಗದು ಸಂಗ್ರಹಣೆಯೂ ರದ್ದು ಪಡಿಸಲಾಗಿದ್ದು ಯಾರೂ ಚಂದಾ ನೀಡುವ ಅವಶ್ಯಕತೆ ಇರುವುದಿಲ್ಲ. ಆದರೆ ಹರಕೆ, ದೇಣಿಗೆ ರೂಪದಲ್ಲಿ ನೀಡಬಯಸುವವರು ಕಛೇರಿಗೆ ಬಂದು ಪಾವತಿಸಬಹುದು. ಪ್ರಸಾದದ ಹಿಟ್ಟಕ್ಕಿಯನ್ನು ದಿನದ ಯಾವ ಸಮಯದಲ್ಲೂ ಯಾರು ಬೇಕಾದರೂ ಶುಲ್ಕ ಪಾವತಿಸಿ ಪಡೆಯಬಹುದೆಂದು ಅವರು ವಿವರಿಸಿದರು. ಗ್ರಾಂ.ಪಂ. ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ, ಗುರಲಿಂಗಪ್ಪಾ ಪೂಜಾರಿ, ಪೋಲಿಸ ಸಿಬ್ಬಂದಿ ಪಿ.ಸಿ. ಬಾಡಗಿ ಮಾತನಾಡಿದರು. ಪಿಕೆಪಿಎಸ್ ಬ್ಯಾಂಕ ಅಧ್ಯಕ್ಷ ರಾಮಣ್ಣಾ ಮುಗಳಖೋಡ, ಗ್ರಾ.ಪಂ. ಉಪಾಧ್ಯಕ್ಷ ಗಿರಮಲ್ಲಪ್ಪಾ ಹಟ್ಟಿ, ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ರಾಮಣ್ಣ ಬಗನಾಳ, ಪುಂಡಲಿಕಪ್ಪಾ ಪೂಜಾರಿ, ಬೀರಪ್ಪಾ ಹಳೆಮನಿ, ಗುರಪ್ಪಾ ಬಳಗಾರ, ಪ್ರಭು ನೇಸೂರ, ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಅಊIಒಒಂಆಂ 15-2 ಫೋಟೊ ವಿವರ : ಚಿಮ್ಮಡ ಗ್ರಾಮದಲ್ಲಿ ನಡೆದ ಹಿರಿಯರ, ಪ್ರಮುಖರ ಸಭೆಯಲ್ಲಿ ಕಿಚಡಿ ಪ್ರಸಾದದ ಹಿಟ್ಟಕ್ಕಿಯನ್ನು ಶ್ರೀ ಪ್ರಭು ಮಹಾಸ್ವಾಮಿಗಳು ಭಕ್ತಾಧಿಗಳಿಗೆ ವಿತರಿಸಿದರು.

ಜಾಹೀರಾತು...