ರಬಕವಿ-ಬನಹಟ್ಟಿಯ ಆಸಂಗಿ ಡೆಂಪೋಡೇರಿ ಆವರಣದಲ್ಲಿ ನವೀಕೃತ ನಂದಿನಿ ಪಾರ್ಲರ್ ಉದ್ಘಾಟಿಸಲಾಯಿತು.
ನವೀಕೃತ ನಂದಿನಿ ಪಾರ್ಲರ್ ...
ರಬಕವಿ-ಬನಹಟ್ಟಿ,ಅ23: ರೈತರು ನೀಡುವ ಹಾಲನ್ನು ಶೀತಲೀಕರಿಸಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ನಂದಿನಿ ಪಾರ್ಲರ್ ಮೂಲಕ ನೀಡಲು ಸಾಧ್ಯವಾಗುತ್ತಿದೆ. ಈ ಮೂಲಕ ನಂದಿನಿ ಪಾರ್ಲರ್ ಜನತೆಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಡೆಂಪೋ ಡೇರಿ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಕಮಕೇರಿ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿಯ ಡೆಂಪೋ ಡೇರಿ ಆವರಣದಲ್ಲಿ ನವೀಕರಣಗೊಂಡ ನಂದಿನಿ ಪಾರ್ಲರ್‍ನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗ್ರಾಹಕರ ಬೇಡಿಕೆಗಳಿಗೆ ತಕ್ಕ ಉತ್ಪನ್ನಗಳನ್ನು ನಂದಿನಿ ಬ್ರಾಂಡ್ ಮೂಲಕ ಪೂರೈಸುತ್ತಿದೆ ಎಂದರು. ರೈತರ ಒಕ್ಕೂಡದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಸಂಸ್ಥೆ ಇದ್ದರೆ ಅದು ಹಾಲು ಒಕ್ಕೂಟ ಮಾತ್ರ. ಕೊರೊನಾ ಮಹಾಮಾರಿಯ ಆತಂಕ, ನಷ್ಟದ ಭೀತಿಯ ನಡುವೆಯೂ ನಮಗೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭ ಕೆಎಂಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ವಿಜಯಪುರ ಹಾಲು ಒಕ್ಕೂಟದ ಅಧ್ಯಕ್ಷ ಮಿಸಾಳೆ, ಧಾರವಾಡ ಡೇರಿಯ ವ್ಯವಸ್ಥಾಪಕ ಕೊಡೈಮಠ, ವಿಜಯಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ದಿಕ್ಷೀತ ಸೇರಿದಂತೆ ಅನೇಕರಿದ್ದರು.
ಜಾಹಿರಾತುದಾರರು...
Social Plugin