ರಬಕವಿಯ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಪರಪ್ಪ ಚ. ಸೊಲ್ಲಾಪುರ ಅವರಿಗೆ ಹಮ್ಮಿಕೊಂಡಿದ್ದ ಶೃದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ ಶಿವಶಂಕರ ಶಿವಾಚಾರ್ಯರು ಮಾತನಾಡಿದರು.
ಹಿರಿಯರ ಸ್ಮರಣೆ ಸದಾಕಾಲ ಅವಶ್ಯ-ಶಿವಶಂಕರ ಶ್ರೀ ...
ರಬಕವಿ-ಬನಹಟ್ಟಿ,ಅ23 : ಹಿರಿಯರಿಲ್ಲದ ಮನೆಯಲ್ಲಾ, ಗುರುಗಳಿಲ್ಲದ ಮಠವಲ್ಲಾ ಎಂಬ ಮಾತಿನಂತೆ ಮನೆಗೆ ಹಿರಿಯರೇ ಭೂಷಣ. ಅವರ ಅನುಭವ, ಜ್ಞಾನ, ಮಾಡುವ ಕಾರ್ಯಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಜನ್ಮಸಾರ್ಥಕ ಮಾಡಿಕೊಳ್ಳಬೇಕು. ಹಿರಿಯರ ಅಂತಃಕರಣ, ಸ್ವಭಾವ, ಸಮಾಜಸೇವೆ, ನಡೆ-ನುಡಿ, ಆಚಾರ ವಿಚಾರಗಳನ್ನು ಸದಾಕಾಲ ಸ್ಮರಿಸಬೇಕೆಂದು ಹಳೇಹುಬ್ಬಳ್ಳಿ ನೀಲಕಂಠಮಠದ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಇಲ್ಲಿಯ ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಪರಪ್ಪ ಚ. ಸೊಲ್ಲಾಪುರ ಅವರಿಗೆ ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶೃದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ, ಪರಪ್ಪನವರ ಸಮಾಜಸೇವೆ ಸ್ಮರಣೀಯವಾದುದು ಎಂದರು.
ದೇವಸ್ಥಾನದ ಟ್ರಸ್ಟ್ ಕಮೀಟಿ ಚೇರಮನ್ ಅಶೋಕ ಕುಚನೂರ ಅಧ್ಯಕ್ಷತೆ ವಹಿಸಿ, ಶ್ರೀಮಠದ ಏಳಿಗೆಗೆ ನಿರಂತರ ಶ್ರಮಿಸಿ, ಮಾರ್ಗದರ್ಶನ ಮಾಡಿದ ಬಗ್ಗೆ ಮಾತನಾಡಿದರು.
ಹಿರಿಯರಾದ ರಾಮಣ್ಣ ಹುಲಕುಂದ, ಮಲ್ಲೇಶಪ್ಪ ಕುಚನೂರ, ಇಂದುಧರ ಬೆಳಗಲಿ, ಜಯಪ್ರಕಾಶ ಸೊಲ್ಲಾಪುರ, ಭಾಗಿರಥಿ ಸೊಲ್ಲಾಪುರ ಮಾತನಾಡಿ, ಪರಪ್ಪ ಸೊಲ್ಲಾಪುರ ಅವರು ಕುರುಹಿನಶೆಟ್ಟಿ ಸಮಾಜ ಚಿಂತಕರಾಗಿ, ಆರಾಧ್ಯದೈವ ಶ್ರೀಮಹಾದೇವ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.
ಶಿಕ್ಷಕ-ಸಾಹಿತಿ ಮ.ಕೃ.ಮೇಗಾಡಿ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದಿ. ಪರಪ್ಪ ಸೊಲ್ಲಾಪುರ ಅವರ ವ್ಯಕ್ತಿತ್ವ ಪರಿಚಯಸಿದರು. ಒಂದು ನಮಿಷ ಮೌನ ಆಚರಣೆ, ಶಿವಪಂಚಾಕ್ಷರ ಮಂತ್ರ ಪಠಣ ನೆರವೇರಿತು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು...
ಜಾಹಿರಾತುದಾರರು...
Social Plugin