ತೇರದಾಳ ಮತಕ್ಷೇತ್ರ : ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಬೇಸತ್ತ ರೈತ ನ್ಯಾಯಕ್ಕಾಗಿ ಬೆಂಗಳೂರಿಗೆ 
ವರದಿ : ಕೆ. ಎಸ್. ರಂಗಸ್ವಾಮಿ. 
  ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)...

 ತೇರದಾಳ: ಕಳೆದ ಸುಮಾರು ವರ್ಷಗಳಿಂದ ಸಾವರಿನ್ ಶುಗರ್ ಫ್ಯಾಕ್ಟರಿನ ರೈತರಿಗೆ ಕೊಡತಕ್ಕಂತಹ ಕಬ್ಬಿಣ ಬಿಲ್ಲಗೆ ಸಂಭಂದಿಸಿದಂತೆ ರೈತರು ನಾನಾರೀತಿಯಿಂದ ಹೋರಾಟ ನಡೆಸುತ್ತಾ ಬರುತ್ತಿದ್ದಾರೆ ಅದರೂ ಸಹ ಇನ್ನೂವರೆಗೂ ಸಂಬಂದಿಸಿದ ಕಾರ್ಖಾನೆಯಿಂದ ರೈತರಿಗೆ ಬಿಲ್ಲು ಪಾವತಿಯಾಗುತ್ತಿಲ್ಲ.ಇದಕ್ಕೆ ಸಂಭಂದಿಸಿದಂತೆ ನ್ಯಾಯಾಲಯದಲ್ಲಿ ಕೇಸ ಸಹ ದಾಖಲಾಗಿದೆ.ಅಲ್ಲದೆ ಮಾನ್ಯ ನ್ಯಾಯಾಲವು ಸಹ ಬಾಗಲಕೋಟ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಕೊಳ್ಳಲು ನಿರ್ದೇಶನವನ್ನೂ ಕೂಡಾ ನೀಡಿದೆ. ಸಂಭಂದಿಸಿದ ನ್ಯಾಯಾಲಯದ ಆದೇಶದ ಪ್ರಕಾರ ಸಾವರಿನ ಸಕ್ಕರೆ ಕಾರ್ಖಾನೆಯನ್ನು ಜಿಲ್ಲಾಢಳಿತವು ತನ್ನ ವಶಕ್ಕೆ ತೆಗೆದುಕೊಂಡು ಜಪ್ತ ಮಾಡಿದೆ.ನಂತರ ರೈತರ ಬಿಲ್ಲ ಪಾವತಿ ಮಾಡುವ ಉದ್ದೇಶದಿಂದ ಜಿಲ್ಲಾಡಳಿತವು ಕಾರ್ಖಾನೆಯನ್ನು ಹರಾಜು ಮಾಡಲು ತಿರ್ಮಾಣಿಸಿತು. ಆದರೆ ಎಕೋ ಎನೋ ಗೋತ್ತಿಲ್ಲ ಹರಾಜು ಪ್ರಕಿಯೆ ಯಶಸ್ವಿಯಾಗಲಿಲ್ಲ.ಹೀಗಾಗಿ ರೈತರ ಬಿಲ್ಲು ಇನ್ನೂ ಹಾಗೆ ಉಳಿಯಿತು. ಹೀಗಾಗಿ ಮೋದಲೇ ಸಾಲ ಮಾಡಿದ ರೈತರು ಕಂಗಾಲಾಗಿ ಹೋಗಿದ್ದಾರೆ.ಅಲ್ಲದೆ ಸಾಕಷ್ಟು ರೈತರು ಸಕಾಲದಲ್ಲಿ ಹಣ ಸಿಗದೆ ಸಾಲಗಾರರ ಕಾಟಕ್ಕೆ ಹಾಗೂ ಕುಟುಂಬ ನಿರ್ವಹನೆಯ ತೊಂದರೆಯಿಂದ ಮಾನಸಿಕ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಬಂದಿದ್ದಾರೆ.ರೈತರ ಜೀವದ ಜೋತೆ ಆಟವಾಡುತ್ತಿರುವ ಈ ವ್ಯವಸ್ಥೆ ಸರಿಯಲ್ಲ.ದೇಶದ ಬೆನ್ನೇಲುಬು ರೈತ ಎಂದು ಬಡಾಯಿ ಕೊಚ್ಚಿಕೊಳ್ಳುವ ರಾಜಕೀಯ ನಾಯಕರಾಗಲಿ ಅಥವಾ ಅಧಿಕಾರಿ ವರ್ಗದವರಾಗಲಿ  ರೈತನ ಸಹಾಯಕ್ಕೆ ಬಾರದೆ ರೈತನ ಬೆನ್ನೆಲುಬು ಮುರಿಯುತ್ತಿರುವ ಕಾರ್ಯ ಮಾಡುತ್ತಿರುವುದು ಸರಿಯೇ ಎಂದು ರೈತಪರ ಹೋರಾಟಗಾರ ಮಹಾಲಿಂಗಪೂರದ ಗಂಗಾಧರ ಮೇಟಿಯವರು ಸರ್ಕಾರ ಹಾಗೂ ಅಧಿಕಾರಿ ವರ್ಗದವರ ಮೇಲೆ ಹರಿಹಾಯ್ದರು.

                 ತೇರದಾಳ ಪಟ್ಟಣದ ತುಳಜಾಭವಾಣಿ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರೈತಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಸಾವರಿನ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ತುಂಬಾ ಅನ್ಯಾಯವಾಗಿದೆ.ಇದಕ್ಕೆ ಕಾರ್ಖಾನೆಯವರಾಗಲಿ ಅಥವಾ ಅಧಿಕಾರಿ ವರ್ಗದವರಾಗಲಿ ಯಾರೊಬ್ಬರೂ ರೈತರಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ,ಇದರಿಂದ ರೈತನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಏರ್ಪಟಿದೆ.ಹೀಗಾಗಿ ನಮಗೆ ಇಲ್ಲಿ ನ್ಯಾಯ ಸಿಗಲು ಸಾದ್ಯವಿಲ್ಲ ಆದ್ದರಿಂದ ನಾವೆಲ್ಲ ರೈತರು ನ್ಯಾಯಕ್ಕೋಸ್ಕರ ಬೆಂಗಳೂರಿನ ಶುಗರ್ ಕೇನ್ ಕಮೀಶನರ ಕಚೇರಿಮುಂದೆ ಹೋರಾಟ ಮಾಡಲು ತಿರ್ಮಾಣಿಸಿದ್ದೇವೆ ಎಂದು ಹೇಳಿದರು.ಈ ಕುರಿತು ಇನ್ನೂ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಹೋಗಲಾಗುವುದು ಎಂದು ಮಾದ್ಯಮಕ್ಕೆ ತಿಳಿಸಿದರು. ನಂತರ ಮಾತನಾಡಿದ ಬಸವರಾಜ ಕೊಕಟನೂರ ಅವರು ರೈತನು ತನ್ನ ಬದುಕನ್ನು ಕಟ್ಟಿಕೊಳ್ಳಲು ಹೋರಾಟಮಾಡುತ್ತಾನೆ ಹೊರತು ಇನ್ಯಾವುದಕ್ಕು ಅಲ್ಲ.ಆದರೇ ತನ್ನ ಹಕ್ಕನ್ನು ಕೇಳುವ ರೈತರ ಹಕ್ಕನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿರುವುದು ತುಂಬಾ ನೋವಿನ ಸಂಗತಿ.ಎನೇ ಇರಲಿ ನಮಗೆ ನ್ಯಾಯ ಸಿಗುವವರೆಗೆ ಕಾನೂನಿನಡಿಯಲ್ಲಿ ಹೋರಾಟ ಮಾಡೋನ ಎಂದು ಹೇಳಿದರು. ನಂತರ ಮಾತನಾಡಿದ ಹುಟ್ಟು ಹೋರಾಟಗಾರ ಬಸವರಾಜ ಬಾಳಿಕಾಯಿ ಮಾತನಾಡಿ ರೈತರ ವಿಷಯದಲ್ಲಿ ಈ ರೀತಿ ನಿರ್ಲಕ್ಷ ಸರಿಯಲ್ಲ ಇಡೀ ಜಗತ್ತಿಗೆ ಅನ್ನ ನೀಡುವ ರೈತನಿಗೆ ನೀವು ಕೊಡುವ  ಗೌರವ ಇದೇಯೇ? ಅವನು ಬೆಳೆದ ಬೆಳೆಗೆ ಬೆಲೆ ಇಲ್ಲವೇ? ಇದಕ್ಕೆಲ್ಲ ಜಿಲ್ಲಾಡಳಿತದ ನಿರ್ಲಕ್ಷ ಧೋರಣೆಯೇ ಕಾರಣ. ಯಾವೊಬ್ಬ ಅಧಿಕಾರಿಯೂ ಜವಾಬ್ದಾರಿ ತಗೆದುಕೊಂಡು ರೈತರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಯಾಕೆ ಇಷ್ಟೊಂದು ನಿರ್ಲಕ್ಷ ಮಾಡುತ್ತಿದ್ದಾರೆ ಗೊತ್ತಿಲ್ಲ.ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಕೇಳಿದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಹೀಗಾಗಿ ನ್ಯಾಯ ಕೇಳಲು ದೂರದ ಬೆಂಗಳೂರಿಗೆ ಹೋಗುವುದು ನಮ್ಮ ದುರ್ದೈವ ಎಂದು ತುಂಬಾ ನೋವಿನಿಂದ ಹೇಳಿದರು. ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದನ್ನು ನೋಡಿದ್ದೇವೆ. ಆದರೇ ಈಗ ನಮ್ಮ ಹಕ್ಕನ್ನು ಕೇಳಲು ಸಹ ಹೋರಾಟ ಮಾಡಬೇಕಾದ ಪರಿಸ್ಥತಿ ಬಂದಿದೆ ಎಂದರೆ ಏನಿದರರ್ಥ?ದುಡಿದವರು ವೇತನ ಕೇಳುವುದು ತಪ್ಪೇ? ಅದಕ್ಕೂ ಹೋರಾಟ ಮಾಡಬೇಕೆ? ನಾವು ಕಳೆದ ಸುಮಾರು ತಿಂಗಳುಗಳಿಂದ ನೋಡ್ತಾ ಇದ್ದೀವಿ ಈ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರು ತಮ್ಮ ಬಿಲ್ಲು ಪಡೆಯಲು ನಿರಂತರವಾಗಿ ಹೋರಾಟ ಮಾಡುತ್ತಲೇ ಇದ್ದಾರೆ ಅದರಂತೆ ಅಧಿಕಾರಿಗಳು ಸಹ ರೈತರಿಗೆ ಭರವಸೆ ನೀಡುತ್ತಲೇ ಇದ್ದಾರೆ.ಆದರೆ ಭರವಸೆಗಳ ಮೇಲೆ ಬದುಕು ಸಾಗಿಸಲು ಸಾದ್ಯವೇ? ಸಚಿವ ಮಹೋದಯರ ಹಾಗೂ ರಾರಕೀಯ ನಾಯಕರುಗಳು ಹೇಳಿದ ತಕ್ಷಣವೇ ಅದಕ್ಕೆ ಯಾವುದೇ ಕಾನೂನಿನ ಅಡೆತಡೆ ಇದ್ದರೂ ಸಹ ಅದಕ್ಕೊಂದು ಮಾರ್ಗ ಕಂಡು ಹಿಡಿದು ಕೂಡಲೇ ಕೆಲಸ ಪೂರ್ಣಗೊಳಿಸುವ ಚಾಣಾಕ್ಷತನ ಹೊಂದಿದ ಚಾಣಕ್ಯ ಅಧಿಕಾರಿ ವರ್ಗದವರು ಈ ರೀತಿ ರೈತರ ವಿಷಯದಲ್ಲಿ ಇಷ್ಟೊಂದು ದಿವ್ಯ ನಿರ್ಲಕ್ಷಮಾಡಿದ್ದು ಸರಿಯಲ್ಲ.ನಿಮ್ಮನ್ನೇ ನಂಬಿದ ಜನತೆಗೆ ನಿಮ್ಮಿಂದ ನ್ಯಾಯ ದೊರಕದಿದ್ದರೆ ಹೇಗೆ?  ಮಂತ್ರಿ ಮಹೋದಯರ ಮಾತಿಗೆ ಮಾತ್ರ ಬೆಲೆಯೇ? ರೈತರಿಗೆ ಬೆಲೆ ಇಲ್ಲವೆ? ಎಂದು ಅಧಿಕಾರಿ ವರ್ಗದವರನ್ನು ತರಾಟೆಗೆ ತಗೆದುಕೊಂಡರು. 

            ಈ ಸಂದರ್ಭದಲ್ಲಿ ರೇವಣೇಶ ಹಿರೇಮಠರವರು ಮಾತನಾಡಿದರು.ಸಬೆಯಲ್ಲಿ ರೈತಮುಖಂಡರಾದ ಶ್ರೀಕಾಂತ ಗುಳ್ಳನ್ನವರ,ಸತ್ಯೆಪ್ಪ ಹುಲ್ಲೊಳ್ಳಿ, ಮಲಕಪ್ಪ ಮುರಸಿ,ಶ್ರೀಶೈಲನಂದಿ, ಯಂಕಪ್ಪ ರಡ್ಡಿ,ಶಿವು ಮಂಟೂರ, ಹಣಮಂತ ರಡ್ಡಿ,ವಿಠ್ಠಲ ರಡ್ಡಿ,ಅಜೀತ ಆಲಗೂರ,ಬಾಳಾಸಾಬ ದೇಸಾಯಿ,ಪ್ರಕಾಶ ಭದ್ರಶೆಟ್ಟಿ ಸೇರಿದಂತೆ .ಮುಂತಾದವರಿದ್ದರು.