`ಮಹಾ’ಮಳೆ: ಕೃಷ್ಣೆಗೆ ಅಪಾರ ಪ್ರಮಾಣದ ನೀರು ರಬಕವಿ-ಬನಹಟ್ಟಿ,ಅ8: ಮಹಾರಾಷ್ಟ್ರದ ಕೃಷ್ಣಾ ನದಿ ಕೊಳ್ಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದೆ. ಹಿಪ್ಪರಗಿ ಜಲಾಶಯದಲ್ಲಿ ಹಿನ್ನೀರಿನ ಪ್ರಮಾಣ ಹೆಚ್ಚಳಗೊಳ್ಳುತ್ತಿರುವ ಕಾರಣ ಸುತ್ತಲಿನ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಅವರು ಶನಿವಾರ ಪತ್ರಿಕೆಯ ಜೊತೆಗೆ ಮಾತನಾಡಿ ಮಳೆ ಪ್ರಮಾಣದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಯಾವುದೆ ಪ್ರವಾಹದ ಭೀತಿ ಇಲ್ಲ ಎಂದರು. ಕೃಷ್ಣಾ ನದಿಯಲ್ಲಿ ನೀರಿನ ವೇಗ ಹೆಚ್ಚು ಇದ್ದು ಜನರು ನದಿ ತೀರಕ್ಕೆ ಹೋಗಬಾರದು ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು. ಮಹಾರಾಷ್ಟ್ರದ ಕೊಯ್ನಾ: 89 ಮಿ.ಮೀ, ನವುಜಾ: 106 ಮಿ.ಮೀ, ಮಹಾಬಳೇಶ್ವರ: 72 ಮಿ.ಮೀ, ವಾರಣಾ 75 ಮಿ.ಮೀ, ರಾಧಾ ನಗರಿ: 99 ಮಿ.ಮೀ ಮಳೆಯಾದ ವರದಿಯಾಗಿದೆ. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದ ರಾಜಾಪುರ ಜಲಾಶಯದಿಂದ ಕೃಷ್ಣಾ ನದಿಗೆ 128875 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)..
`ಮಹಾ’ಮಳೆ: ಕೃಷ್ಣೆಗೆ ಅಪಾರ ಪ್ರಮಾಣದ ನೀರು 

ರಬಕವಿ-ಬನಹಟ್ಟಿ,ಅ8: ಮಹಾರಾಷ್ಟ್ರದ ಕೃಷ್ಣಾ ನದಿ ಕೊಳ್ಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದೆ. ಹಿಪ್ಪರಗಿ ಜಲಾಶಯದಲ್ಲಿ ಹಿನ್ನೀರಿನ ಪ್ರಮಾಣ ಹೆಚ್ಚಳಗೊಳ್ಳುತ್ತಿರುವ ಕಾರಣ ಸುತ್ತಲಿನ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ.

ಅವರು ಶನಿವಾರ ಪತ್ರಿಕೆಯ ಜೊತೆಗೆ ಮಾತನಾಡಿ ಮಳೆ ಪ್ರಮಾಣದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಯಾವುದೆ ಪ್ರವಾಹದ ಭೀತಿ ಇಲ್ಲ ಎಂದರು. ಕೃಷ್ಣಾ ನದಿಯಲ್ಲಿ ನೀರಿನ ವೇಗ ಹೆಚ್ಚು ಇದ್ದು ಜನರು ನದಿ ತೀರಕ್ಕೆ ಹೋಗಬಾರದು ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದರು.

ಮಹಾರಾಷ್ಟ್ರದ ಕೊಯ್ನಾ: 89 ಮಿ.ಮೀ, ನವುಜಾ: 106 ಮಿ.ಮೀ, ಮಹಾಬಳೇಶ್ವರ: 72 ಮಿ.ಮೀ, ವಾರಣಾ 75 ಮಿ.ಮೀ, ರಾಧಾ ನಗರಿ: 99 ಮಿ.ಮೀ ಮಳೆಯಾದ ವರದಿಯಾಗಿದೆ. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದ ರಾಜಾಪುರ ಜಲಾಶಯದಿಂದ ಕೃಷ್ಣಾ ನದಿಗೆ 128875 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.