ಬನಹಟ್ಟಿಯ ಅಶೋಕ ಕಾಲನಿಯಲ್ಲಿ ಕಂಟೈನ್ಮೆಂಟ್ ವಲಯ ನಿರ್ಮಿಸುತ್ತಿರುವದು.
ರ್ಯಾಪಿಡ್ ಕಿಟ್‍ಗಳು ಖಾಲಿ: ಪರೀಕ್ಷೆ ವಿಳಂಬ-ಓರ್ವನಿಗೆ ಸೋಂಕು ರಬಕವಿ-ಬನಹಟ್ಟಿ,ಅ7: ತಾಲೂಕಿನಾದ್ಯಂತ ಕೊರೊನಾ ವೈರಸ್ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆ ಕಳೆದೊಂದು ವಾರದಿಂದ ಸ್ಥಳೀಯ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್‍ಗಳ ಮೂಲಕ ತಕ್ಷಣವೇ ಕೊರೊನಾ ಪರೀಕ್ಷೆ ನಡೆಯುತ್ತಿತ್ತು. ಶುಕ್ರವಾರ ಖಾಲಿಯಾಗಿರುವ ಕಾರಣ ಶಂಕಿತರ ಪರೀಕ್ಷೆ ನಡೆಸುವಲ್ಲಿ ವಿಳಂಬವಾಗುವಲ್ಲಿ ಕಾರಣವಾಗಿದೆ. ಪ್ರತಿ ದಿನ 100 ರಿಂದ 200ರವರೆಗೆ ರ್ಯಾಪಿಡ್ ಕಿಟ್‍ಗಳ ಮೂಲಕ ಶಂಕಿತರ ಪರೀಕ್ಷೆ ನಡೆಯುತ್ತಿದ್ದ ಕಾರಣ ಇತರರಿಗೆ ಸೋಂಕು ಹರಡುವದನ್ನು ತಡೆಯುವಲ್ಲಿ ಹೆಚ್ಚು ಸಹಕಾರಿಯಾಗಿತ್ತು. ಇದೀಗ ಕಿಟ್‍ಗಳು ಇಲ್ಲದ ಕಾರಣ ಶಂಕಿತರ ಪರೀಕ್ಷೆ ತಡವಾಗುತ್ತಿದ್ದು, ಮತ್ತಷ್ಟು ಜನರಿಗೆ ಸೋಂಕು ತಗುಲುವ ಭೀತಿ ಎದುರಾಗಿದೆ. ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಯಲ್ಲಿ ಕಿಟ್‍ಗಳ ಸಮಸ್ಯೆ ನೀಗಿಸುವ ಮೂಲಕ ತ್ವರಿತ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕಾಗಿದೆ. ಓರ್ವನಿಗೆ ಸೋಂಕು: ಗುರುವಾರ ಕೊರೊನಾ ವೈರಸ್‍ನ ಸೋಂಕಿನಿಂದ 49 ವರ್ಷದ ಬನಹಟ್ಟಿಯ ವ್ಯಕ್ತಿ ಮೃತಪಟ್ಟ ತಂದೆಗೂ ಕೊರೊನಾ ಪಾಜಿಟಿವ್ ದೃಢವಾಗಿದೆ.

ರ್ಯಾಪಿಡ್ ಕಿಟ್‍ಗಳು ಖಾಲಿ: ಪರೀಕ್ಷೆ ವಿಳಂಬ-ಓರ್ವನಿಗೆ ಸೋಂಕು
ರಬಕವಿ-ಬನಹಟ್ಟಿ,ಅ7: ತಾಲೂಕಿನಾದ್ಯಂತ ಕೊರೊನಾ ವೈರಸ್ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆ ಕಳೆದೊಂದು ವಾರದಿಂದ ಸ್ಥಳೀಯ ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್‍ಗಳ ಮೂಲಕ ತಕ್ಷಣವೇ ಕೊರೊನಾ ಪರೀಕ್ಷೆ ನಡೆಯುತ್ತಿತ್ತು. ಶುಕ್ರವಾರ ಖಾಲಿಯಾಗಿರುವ ಕಾರಣ ಶಂಕಿತರ ಪರೀಕ್ಷೆ ನಡೆಸುವಲ್ಲಿ ವಿಳಂಬವಾಗುವಲ್ಲಿ ಕಾರಣವಾಗಿದೆ.
ಪ್ರತಿ ದಿನ 100 ರಿಂದ 200ರವರೆಗೆ ರ್ಯಾಪಿಡ್ ಕಿಟ್‍ಗಳ ಮೂಲಕ ಶಂಕಿತರ ಪರೀಕ್ಷೆ ನಡೆಯುತ್ತಿದ್ದ ಕಾರಣ ಇತರರಿಗೆ ಸೋಂಕು ಹರಡುವದನ್ನು ತಡೆಯುವಲ್ಲಿ ಹೆಚ್ಚು ಸಹಕಾರಿಯಾಗಿತ್ತು. ಇದೀಗ ಕಿಟ್‍ಗಳು ಇಲ್ಲದ ಕಾರಣ ಶಂಕಿತರ ಪರೀಕ್ಷೆ ತಡವಾಗುತ್ತಿದ್ದು, ಮತ್ತಷ್ಟು ಜನರಿಗೆ ಸೋಂಕು ತಗುಲುವ ಭೀತಿ ಎದುರಾಗಿದೆ.
ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಯಲ್ಲಿ ಕಿಟ್‍ಗಳ ಸಮಸ್ಯೆ ನೀಗಿಸುವ ಮೂಲಕ ತ್ವರಿತ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕಾಗಿದೆ.
ಓರ್ವನಿಗೆ ಸೋಂಕು: ಗುರುವಾರ ಕೊರೊನಾ ವೈರಸ್‍ನ ಸೋಂಕಿನಿಂದ 49 ವರ್ಷದ ಬನಹಟ್ಟಿಯ ವ್ಯಕ್ತಿ ಮೃತಪಟ್ಟ ತಂದೆಗೂ ಕೊರೊನಾ ಪಾಜಿಟಿವ್ ದೃಢವಾಗಿದೆ.