ರಬಕವಿ-ಬನಹಟ್ಟಿ ತಾಲೂಕಿನ ಎರಡು ಕೋವಿಡ್ ಕಾಳಜಿ ಕೇಂದ್ರಗಳಿಗೆ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಭೆಟ್ಟಿ ನೀಡಿದರು.
ಕೋವಿಡ್ ಕಾಳಜಿ ಕೇಂದ್ರಗಳಿಗೆ ಉಪವಿಭಾಗಾಧಿಕಾರಿ ಭೆಟ್ಟಿ
*ರೋಗಿಗಳಿಗೆ ಧೈರ್ಯ ತುಂಬಿದ ಅಧಿಕಾರಿಗಳು
ರಬಕವಿ-ಬನಹಟ್ಟಿ,ಅ6: ರಬಕವಿ-ಬನಹಟ್ಟಿ ತಾಲೂಕಿನ ಕೋವಿಡ್ ಕಾಳಜಿ ಕೇಂದ್ರಗಳಿಗೆ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಭೆಟ್ಟಿ ನೀಡಿ ರೋಗಿಗಳಿಗೆ ಧೈರ್ಯ ತುಂಬುವ ಕಾರ್ಯ ಮಾಡುವದರ ಜೊತೆಗೆ ಊಟ ಹಾಗು ನೀರಿನ ವ್ಯವಸ್ಥೆ ಕುರಿತು ಅವಲೋಕನ ನಡೆಸಿದರು.
ಗುರುವಾರ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಹಾಗು ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ನಿರ್ಮಿಸಲಾದ ಕೋವಿಡ್ ಆಸ್ಪತ್ರೆಗಳಿಗೆ ತೆರಳಿ ಮಾಹಿತಿ ಪಡೆದರು. ಇದಕ್ಕೂ ಮೊದಲು ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆ ಹಾಗು ತೇರದಾಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಸಭೆ ನಡೆಸಿ ಕೊರೊನಾ ಸೋಂಕಿತ ಆಸ್ಪತ್ರೆಯ ಬಗ್ಗೆ ಯಾವ ರೀತಿ ವ್ಯವಸ್ಥೆ ಹಾಗು ಜಾಗೃತಿಯಿಂದರಬೇಕೆಂದು ಮಾಹಿತಿ ಒದಗಿಸಿದರು.
ಇದೇ ಸಂದರ್ಭ ತಹಶೀಲ್ದಾರ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಸ ಜಾಧವ, ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ವಸತಿ ನಿಲಯಗಳ ಮುಖ್ಯಸ್ಥರಾದ ಶಿವಲೀಲಾ ಸಾಬೋಜಿ, ಸುಭಾಷ ಲಮಾಣಿ ಸೇರಿದಂತೆ ಅನೇಕರಿದ್ದರು.

Social Plugin