ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿದ್ಯಾರ್ಥಿಗಳು
ರಬಕವಿ-ಬನಹಟ್ಟಿ,ಅ6: ಕಳೆದ ಒಂದು ವಾರದಿಂದ ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ಬ್ಯಾಂಕ್‍ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂಕು ನುಗ್ಗಲಿನಿಂದ ಬ್ಯಾಂಕ್‍ಗಳ ಮುಂದೆ ನಿಂತು ಕೊರೊನಾ ವೈರಸ್‍ನ ನಿಯಮಗಳ ನಿರ್ಲಕ್ಷ್ಯದಿಂದ ವಯಸ್ಕರರಿಗೂ ತೊಂದರೆಯುಂಟು ಮಾಡುತ್ತಿರುವ ಘಟನೆ ನಡೆಯುತ್ತಿದೆ.
ಈ ಕುರಿತು ಬ್ಯಾಂಕ್‍ನ ಸಿಬ್ಬಂದಿಗಳು ತಾಕೀತು ಮಾಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ಕೆಲ ವಯಸ್ಕರರು ಬ್ಯಾಂಕ್‍ಗೆ ಆಗಮಿಸಿದರೂ ಬೆಳಿಗ್ಗೆಯಿಂದ ಸಂಜೆವರೆಗೆ ಬ್ಯಾಂಕ್‍ನ ಹೊರಗೆ ಇದೇ ರೀತಿ ಗದ್ದಲದ ಮಧ್ಯೆಯೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಶಾಲಾ-ಕಾಲೇಜುಗಳ ಪ್ರವೇಶಾತಿಗಳು ಪ್ರಾರಂಭವಾಗಿರುವ ಹಿನ್ನಲೆ ಬಹುತೇಕ ಬ್ಯಾಂಕ್‍ಗಳ ಮುಂದೆ ಈ ರೀತಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ನಿಯಮ ಮೀರಿ ಗುಂಪು ಸೇರುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.