ಕಂಟೋನ್ಮೆಂಟ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ.
ವರದಿ : ಕೆ. ಎಸ್ .ರಂಗಸ್ವಾಮಿ
ತೇರದಾಳ: ಜಮಖಂಡಿಯ ಉಪವಿಭಾಗಾದಿಕಾರಿ ಸಿದ್ದು ಹುಲ್ಲೊಳ್ಳಿಯವರು ಇಂದು ತೇರದಾಳ ಪಟ್ಟಣದಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಕಂಟೋನ್ಮೆಂಟ ಪ್ರದೇಶ ಮತ್ತು ಭಾಗ್ಯೋದಯ ಶಿಕ್ಷಣ ಸಂಸ್ಥೆಗಳಿಗೆ ಬೇಟಿ ನೀಡಿ ಎಲ್ಲ ವ್ಯವಸ್ಥೆಯನ್ನು ಖುದ್ದಾಗಿ ಪರಿಶಿಲಿಸಿದರಲ್ಲದೆ ಕಂಟೋನ್ಮೆಂಟ ಜೋನದಲ್ಲಿ ವಾಸವಿರುವ ಹಾಗೂ ಕೋರೋನಾದಿಂದ ಗುಣಮುಖರಾಗಿ ಬಂದವರನ್ನು ನೇರವಾಗಿ ಭೇಟಿಯಾಗಿ ಅವರ ಕುಶಲೋಪರಿ ವಿಚಾರಿಸಿದರು.ಅಲ್ಲದೆ ಕೋವಿಡ್ ಚಿಕಿತ್ಸಾಕೇಂದ್ರದಲ್ಲಿರುವ ವ್ಯವಸ್ಥೆ ಕುರಿತು ಅವರ ಅನುಭವ ಕೇಳಿದರಲ್ಲದೆ ಯಾವುದೇ ಕಾರಣಕ್ಕೂ ಕರೋನಾಕ್ಕೆ ಹೆದರದೆ ಧೈರ್ಯದಿಂದ ಇರಬೇಕು ಎಂದು ತಿಳಿಸಿದರು ಮತ್ತು ಚಿಕಿತ್ಸೆ ಪಡೆದು ಮನೆಗೆ ಬಂದವರು ಕೆಲವು ದಿನಗಳವರೆಗೆ ವೈದ್ಯರು ತಿಳಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದರು. ಇದೆ ಸಂದರ್ಭದಲ್ಲಿ ಅಲ್ಲಿಯೆ ಬಾಜು ಮನೆಯಲ್ಲಿ ಮೈತರಾದ ಕಾರಣ ಮಾತನಾಡಸಲಿಕ್ಕೆ ಬಂದವರನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ ಸಿದ್ದುಹುಲ್ಲೋಳ್ಳಿಯವರು ದೇಶದಲ್ಲಿ ಕೊರೋನಾ ಇನ್ನೂ ತನ್ನ ಪ್ರಾಭಲ್ಯವನ್ನು ಕಡಿಮೆಮಾಡಿಲ್ಲ. ಪ್ರತಿ ರಾಜ್ಯದಲ್ಲಿಯೂ ಸಹ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅದರ ನಿಯಂತ್ರಣದ ಜವಾಬ್ದಾರಿ ನಮ್ಮ ಮೇಲಿದೆ. ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಶುಚಿತ್ವ ಕಾಪಾಡಿಕೊಳ್ಳುವುದು ಪರಿಸ್ಥಿತಿ ಹೀಗಿರುವಾಗ ಜನರು ಒಂದೇ ಕಡೇ ಸೇರುವುದು ಸರಿಅಲ್ಲ. ತಮ್ಮ ನೋವು ನಮಗೂ ಅರ್ಥವಾಗುತ್ತದೆ ಆದರೆ ಪರಿಸ್ಥಿತಿಯ ಗಂಭೀರತೆಯ ಕುರಿತು ತಾವು ಅರ್ಥಮಾಡಿಕೊಂಡು ನಡೆದರೆ ಒಳ್ಳೆಯದು ಎಂದು ಅವರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳಿಗೆ ವಿನಂತಿ ಮಾಡಿಕೊಂಡ ಅವರು ಯಾರಾದರೂ ದಾಣಿಗಳು ದೇಣಿಗೆ ಕೊಡುವವರಿದ್ದರೆ ದಯವಿಟ್ಟು ಕೊವಿಡ್ ಕೇಂದ್ರಗಳಿಗೆ ಪುಸ್ತಕಗಳನ್ನಾಗಲಿ,ಚೆಸ್ ಬೋರ್ಡಗಳನ್ನಾಗಲಿ,ಕೆರಮ್ ಬೋರ್ಡಗಳನ್ನಾಗಲಿ ದೇಣಿಗೆನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು. ಈ ಭಾಗದ ಜನರ ಅನೂಕೂಲಕ್ಕಾಗಿ ಪಟ್ಟಣದ ಭಾಗ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಕೆಲವೇ ದಿನಗಳಲ್ಲಿ ಕೊವಿಡ್ ಕ್ವಾರಂಟೈನ ಕೇಂದ್ರವನ್ನು ತೆರೆಯಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಪ್ರಶಾಂತ ಚನಗೊಂಡ,ತೇರದಾಳ ಉಪತಹಶಿಲದಾರ ಎಸ್.ಬಿ.ಮಾಯನ್ನವರ, ತಾಲ್ಲೂಕಾ ಆರೋಗ್ಯಾಧಿಕಾರಿ ಗಲಗಲಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ,ಕಂದಾಯ ನೀರಿಕ್ಷಕರಾದ ಎಸ್,ಬಿ.ತಾಳಿಕೋಟಿ, ಗ್ರಾಮಲೆಕ್ಕಾಧಿಕಾರಿ ಪಿ.ಮಠಪತಿ, ಹಾಗೂ ಸಿಬ್ಬಂದಿ ಹಣಮಂತ ಮಾಳಗಿ, ಮಹಾದೇವ ಯಲ್ಲಟ್ಟಿ ಮುಂತಾದವರಿದ್ದರು.
👉 ವಿಶೇಷ ಸಂದರ್ಶನ ಹಾಗೂ ಸುದ್ದಿಗಳಿಗಾಗಿ "ಸ್ವರೂಪ ಸಂದರ್ಶನ " ಯೂಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡಿ ಹಾಗೂ "ಸ್ವರೂಪ ಸಂದರ್ಶನ" ಫೇಸ್ಬುಕ್ ಪೇಜ್ ಫಾಲೋ ಮಾಡಿ...
Social Plugin