ರಬಕವಿ-ಬನಹಟ್ಟಿ,ಅ13: ತಂದೆಯಿಲ್ಲದ ಕುಟುಂಬ ತಾಯಿ ಅಲ್ಲೋ ಇಲ್ಲೋ ಕೆಲಸ ಮಾಡುತ್ತ ಬಂದಷ್ಟು ಹಣದಲ್ಲಿ ಕುಟುಂಬ ನಿರ್ವಹಣೆ ಇಳಿ ವಯಸ್ಸಿನಲ್ಲಿರುವ ಅಜ್ಜಿ. ಇಂತಹ ಸಂದಿಗ್ಧ ಹಾಗು ಸಂಕಷ್ಟದ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಯು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.92 ರಷ್ಟು ಅಂಕ ಪಡೆದು ಕನ್ನಡ-123, ವಿಜ್ಞಾನ-100, ಹಿಂದಿ-95, ಇಂಗ್ಲೀಷ್-94, ಸಮಾಜ ವಿಜ್ಞಾನ-89 ಹಾಗು ಗಣಿತದಲ್ಲಿ 73 ಅಂಕ ಪಡೆದು ಸಾಧನೆ ಮೆರೆಯುವಲ್ಲಿ ಕಾರಣಳಾಗಿದ್ದಾಳೆ. 

 

ಅಜ್ಜಿಯ ಮಡಿಲಲ್ಲಿ ಬದುಕು ಸಾಗಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ ಸಾಕ್ಷಿ ಗಿರೀಶ ಗುಮ್ಮಾ(ಕೊಕಟನೂರ)




ಸ್ವಂತ ಸೂರು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ ಅಮೃತಾ ಕಲ್ಮೇಶ ಬಾಗಲಕೋಟ ಕುಟುಂಬ

-ಮಲ್ಲಿಕಾರ್ಜುನ ತುಂಗಳ


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ರಬಕವಿ-ಬನಹಟ್ಟಿ,ಅ13: ತಂದೆಯಿಲ್ಲದ ಕುಟುಂಬ ತಾಯಿ ಅಲ್ಲೋ ಇಲ್ಲೋ ಕೆಲಸ ಮಾಡುತ್ತ ಬಂದಷ್ಟು ಹಣದಲ್ಲಿ ಕುಟುಂಬ ನಿರ್ವಹಣೆ ಇಳಿ ವಯಸ್ಸಿನಲ್ಲಿರುವ ಅಜ್ಜಿ. ಇಂತಹ ಸಂದಿಗ್ಧ ಹಾಗು ಸಂಕಷ್ಟದ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಯು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.92 ರಷ್ಟು ಅಂಕ ಪಡೆದು ಕನ್ನಡ-123, ವಿಜ್ಞಾನ-100, ಹಿಂದಿ-95, ಇಂಗ್ಲೀಷ್-94, ಸಮಾಜ ವಿಜ್ಞಾನ-89 ಹಾಗು ಗಣಿತದಲ್ಲಿ 73 ಅಂಕ ಪಡೆದು ಸಾಧನೆ ಮೆರೆಯುವಲ್ಲಿ ಕಾರಣಳಾಗಿದ್ದಾಳೆ. ಬನಹಟ್ಟಿಯ ಎಸ್‍ಆರ್‍ಎ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೇಕಾರಿಕೆ ಕುಟುಂಬದ ವಿದ್ಯಾರ್ಥಿ ಸಾಕ್ಷಿ ಗಿರೀಶ ಗುಮ್ಮಾ(ಕೊಕಟನೂರ) ಸಾಧನೆ ಮಾಡಿದ ವಿದ್ಯಾರ್ಥಿಯಾಗಿದ್ದಾಳೆ. 574 ಅಂಕಗಳನ್ನು ಪಡೆದು ಆರ್ಥಿಕ ಸಮಸ್ಯೆ ಕಾರಣ ಕಲಾ ವಿಭಾಗವನ್ನು ಆಯ್ಕೆ ಮಾಡುವದಾಗಿ ತಿಳಿಸಿರುವ ಈ ವಿದ್ಯಾರ್ಥಿಯ ಕನಸು ಐಎಎಸ್ ಬರೆಯುವದಾಗಿದೆ. ಇವಳ ಭವಿಷ್ಯ ನನಸಾಗಲೆಂದು ಹಾರೈಕೆ ಪತ್ರಿಕೆಯದ್ದಾಗಿದೆ. ಸಹಾಯ ಮಾಡಲಿಚ್ಛಿಸುವವರು 91413-25033 ನಂಬರನ್ನು ಸಂಪರ್ಕಿಸಬಹುದು. ಶೇ.95 ರಷ್ಟು ಸಾಧನೆ ಮಾಡಿದ ಅಮೃತಾ: ಇಲ್ಲಿನ ಎಸ್‍ಆರ್‍ಎ ಪ್ರೌಢಶಾಲೆಯಲ್ಲಿ ಓದುತ್ತಿರುವ ನೇಕಾರ ಕುಟುಂಬದ ಅಮೃತಾ ಕಲ್ಮೇಶ ಬಾಗಲಕೋಟ 592 ಅಂಕಗಳನ್ನು ಪಡೆದು ಶೇ.95 ರಷ್ಟು ಸಾಧನೆ ಮಾಡಿದ್ದಾಳೆ. ತಂದೆ ಕಲ್ಮೇಶ ದುಡಿಮೆಗೆಂದು ನೇಕಾರಿಕೆಯಲ್ಲಿ ತೊಡಗಿದರೆ, ತಾಯಿ ಮನೆಗೆಲಸದಲ್ಲಿ. ಬಾಡಿಗೆ ಮನೆಯಲ್ಲಿರುವ ಈ ಕುಟುಂಬಕ್ಕೆ ಸೂರು ಗತಿಯಿಲ್ಲ. ಇಂತಹ ಕುಟುಂಬದಲ್ಲಿ ಬೆಳೆದ ಪ್ರತಿಭಾವಂತ ವಿದ್ಯಾರ್ಥಿ ಅಮೃತಾ ಕನ್ನಡ-124, ಹಿಂದಿ-98, ಗಣಿತ-95, ಸಮಾಜ ವಿಜ್ಞಾನ-96, ಇಂಗ್ಲೀಷ್-92 ಹಾಗು ವಿಜ್ಞಾನದಲ್ಲಿ 87 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.