ಬನಹಟ್ಟಿಯ ಎಸ್‍ಬಿಐ ಬ್ಯಾಂಕ್ ಸೀಲ್‍ಡೌನ್ ಮಾಡಲಾಗಿರುವದು
ಆಸಂಗಿ ಗ್ರಾಮದ 8 ಜನರಿಗೆ ಕೊರೊನಾ
ರಬಕವಿ-ಬನಹಟ್ಟಿ,ಅ12: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಗ್ರಾಮಗಳಲ್ಲಿಯೂ ಸಹಿತ ಕೊರೊನಾ ಪಾಜಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕಾರಣ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕೊರೊನಾ ಆವರಿಸುವ ಮಾರ್ಗವೇ ಅರಿವಾಗದ ಕಾರಣ ಜನತೆ ಕೆಂಗೆಟ್ಟು ಹೋಗಿದ್ದಾರೆ. ಕಳೆದ ಸೋಮವಾರದಂದು ಆಸಂಗಿ ಗ್ರಾಮದ 8 ಜನರಿಗೆ ಕೊರೊನಾ ಒಕ್ಕರಿಸಿದೆ. ರ್ಯಾಪಿಡ್ ಕಿಟ್‍ಗಳ ಕೊರತೆಯಿಂದಾಗಿ ಜ್ವರ, ಕೆಮ್ಮು ಹಾಗು ನೆಗಡಿಯಿಂದ ಬರುವ ರೋಗಿಗಳಿಗೆ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಪರೀಕ್ಷೆಗೆ ತೀವ್ರ ತೊಂದರೆಯಾಗುತ್ತಿದೆ.
ಕಳೆದೆರಡು ದಿನಗಳಲ್ಲಿ ಒಟ್ಟು 170 ರೋಗಿಗಳನ್ನು ರ್ಯಾಪಿಡ್ ಕಿಟ್‍ಗಳಿಂದ ಪರೀಕ್ಷೆ ಮಾಡಲಾಗಿ ಒಟ್ಟು 17 ಜನರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟಿದೆ.
ಬ್ಯಾಂಕ್ ಸೀಲ್‍ಡೌನ್: ಸ್ಥಳೀಯ ಎಸ್‍ಬಿಐ ಬ್ಯಾಂಕ್‍ನ ಸಿಬ್ಬಂದಿಯೋರ್ವರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟ ಹಿನ್ನಲೆ ಬುಧವಾರ ಹಾಗು ಗುರುವಾರದಂದು ಬ್ಯಾಂಕ್‍ನ ವಹಿವಾಟ ಸಂಪೂರ್ಣ ಬಂದ್ ಮಾಡಲಾಗಿ ಸೀಲ್‍ಡೌನ್ ಮಾಡಲಾಗಿದೆ. ಬ್ಯಾಂಕ್‍ಗೆ ಬರುವ ಗ್ರಾಹಕರು ತೀವ್ರ ಪರದಾಡುವಂತಾಗಿ ವಾಪಸ್ ಮನೆಗೆ ತೆರಳುತ್ತಿರುವದು ಸಾಮಾನ್ಯವಾಗಿತ್ತು.
Social Plugin