ಗ್ರಂಥಗಳೇ ಕಾಲೇಜುಗಳ ನಿಜವಾದ ಆಸ್ತಿ...ರಬಕವಿ-ಬನಹಟ್ಟಿ,ಅ12: ಗ್ರಂಥಾಲಯಗಳು ಶಾಲಾ ಕಾಲೇಜುಗಳ ನಿಜವಾದ ಆಸ್ತಿಗಳು. ಗ್ರಂಥಾಲಯಗಳು ದೇವಾಲಯಗಳು ಇದ್ದಂತೆ. ಪುಸ್ತಕ ಓದುವ ಹವ್ಯಾಸವನ್ನು ಹೊಂದಿದ ವ್ಯಕ್ತಿ ಜ್ಞಾನವಂತನಾಗಿರುತ್ತಾನೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು... 

 
  ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯದ ಪಿತಾಮಹ     ಡಾ.ಎಸ್.ಆರ್.ರಂಗನಾಥರ ಜಯಂತ್ಯುತ್ಸವದ ನಿಮಿತ್ತವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)...

 ಗ್ರಂಥಗಳೇ ಕಾಲೇಜುಗಳ ನಿಜವಾದ ಆಸ್ತಿ 

ರಬಕವಿ-ಬನಹಟ್ಟಿ,ಅ12: ಗ್ರಂಥಾಲಯಗಳು ಶಾಲಾ ಕಾಲೇಜುಗಳ ನಿಜವಾದ ಆಸ್ತಿಗಳು. ಗ್ರಂಥಾಲಯಗಳು ದೇವಾಲಯಗಳು ಇದ್ದಂತೆ. ಪುಸ್ತಕ ಓದುವ ಹವ್ಯಾಸವನ್ನು ಹೊಂದಿದ ವ್ಯಕ್ತಿ ಜ್ಞಾನವಂತನಾಗಿರುತ್ತಾನೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ತಿಳಿಸಿದರು. ಅವರು ಬುಧವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥರ ಜಯಂತ್ಯುತ್ಸವದ ನಿಮಿತ್ತವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜ್ಞಾನಿಗಳ ಜ್ಞಾನವನ್ನು ತಣಿಸಲು, ಬೋಧನೆ, ಕಲಿಕೆ ಹಾಗೂ ಸಂಶೋಧನೆಗೆ ಅಗತ್ಯವಾದ ಮಾಹಿತಿಯನ್ನು ಪೂರೈಸುವಲ್ಲಿ ಗ್ರಂಥಾಲಯಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಡಾ.ಜುನ್ನಾಯ್ಕರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಂಥಪಾಲಕ ಪೆÇ್ರ.ವೈ.ಬಿ.ಕೊರಡೂರ ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಭಾರತದಲ್ಲಿ ಗ್ರಂಥಾಲಯ ವಿಜ್ಞಾನಕ್ಕೆ ವೈಜ್ಞಾನಿಕ ತಳಹದಿ ನೀಡಿದಂತಹ ಅಗ್ರಮಾನ್ಯ ವ್ಯಕ್ತಿ. ಭಾರತದಲ್ಲಿ ಗ್ರಂಥಪಾಲಕರಿಗೆ ಸೂಕ್ತವಾದ ಸ್ಥಾನಮಾನ ನೀಡುವಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಮಂಜುನಾಥ ಬೆನ್ನೂರ, ಡಾ.ಮನೋಹರ ಶಿರಹಟ್ಟಿ, ಡಾ,ರೇಶ್ಮಾ ಗಜಕೋಶ, ಸುರೇಶ ನಡೋಣಿ, ಗೀತಾ ಗೋಂದಕರ, ಎಸ್.ಬಿ.ಉಕ್ಕಲಿ, ಆರತಿ ಅಡವಿತೋಟ, ಶಿವು ಇಟ್ನಾಳ, ಉಜ್ವಲಾ ಮಾಲಾಪುರ, ವೈ.ಬಿ.ಕಲ್ಲನ್ನವರ, ಮಂಜುನಾಥ ಬಸಪ್ಪಗೊಳ ಸೇರಿದಂತೆ ಅನೇಕರು ಇದ್ದರು.