ಎಸ್‍ಆರ್‍ಎ ಹೈಸ್ಕೂಲ್ ದಾನೇಶ್ವರಿ ಹಣಗಂಡಿ ಪ್ರಥಮ ರಬಕವಿ-ಬನಹಟ್ಟಿ,ಅ12: ನಗರದ ಪ್ರತಿಷ್ಠಿತ ಎಸ್‍ಆರ್‍ಎ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶದೊಂದಿಗೆ ಶೇ.80 ರಷ್ಟಾಗಿದೆ.




ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

      ಎಸ್‍ಆರ್‍ಎ ಹೈಸ್ಕೂಲ್ ದಾನೇಶ್ವರಿ ಹಣಗಂಡಿ ಪ್ರಥಮ 

   ರಬಕವಿ-ಬನಹಟ್ಟಿ,ಅ12: ನಗರದ ಪ್ರತಿಷ್ಠಿತ ಎಸ್‍ಆರ್‍ಎ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶದೊಂದಿಗೆ ಶೇ.80 ರಷ್ಟಾಗಿದೆ. ಒಟ್ಟು 313 ವಿದ್ಯಾರ್ಥಿಗಳ ಪೈಕಿ 248 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 90 ಕ್ಕೂ ಅಧಿಕ ಅಂಕಗಳನ್ನು 39 ಜನ ಪಡೆದಿದ್ದರೆ, ಒಟ್ಟು ಡಿಸ್ಟಿಂಕ್ಷನ್ 66 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 141 ಹಾಗು ದ್ವಿತೀಯ ದರ್ಜೆಯಲ್ಲಿ 40 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ದಾನೇಶ್ವರಿ ಹಣಗಂಡಿ 619 ಅಂಕಗಳನ್ನು ಪಡೆದು ಶೇ.99.04 ದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಹಾಗು ರಾಜ್ಯಕ್ಕೆ ಏಳನೇ ಸ್ಥಾನ ಪಡೆದಿದ್ದಾಳೆ. ಸುದೀಪ ಅಸ್ಕಿ 609 ಅಂಕದೊಂದಿಗೆ ಶೇ.97.44 ದೊಂದಿಗೆ ದ್ವಿತೀಯ ಹಾಗು ಅಭಿಷೇಕ್ ಮಠಪತಿ 608 ಅಂಕದೊಂದಿಗೆ ಶೇ.97.28 ತೃತಿಯ ಸ್ಥಾನ ಪಡೆದಿದ್ದಾನೆ. 100 ಕ್ಕೆ 100: ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು 8 ವಿದ್ಯಾರ್ಥಿಗಳು ಪಡೆದರೆ, 100ಕ್ಕೆ 100 ಅಂಕಗಳನ್ನು ಹಿಂದಿ ವಿಷಯದಲ್ಲಿ 4, ಗಣಿತದಲ್ಲಿ 2, ವಿಜ್ಞಾನ 2 ಹಾಗು ಸಮಾಜ ವಿಜ್ಞಾನದಲ್ಲಿ 5 ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.