ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ನಡೆದ ವೈದ್ಯರು, ಔಷಧಿ ಅಂಗಡಿಕಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿರುವ ಶಾಸಕ ಸಿದ್ದು ಸವದಿ
ಸುರಕ್ಷತೆಯೊಂದಿಗೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡಿ : ಸವದಿ
ರಬಕವಿ-ಬನಹಟ್ಟಿ,ಅ5: ವೈದ್ಯರು ಓಪಿಡಿಗಳನ್ನು ಬಂದ ಮಾಡುವುದರ ಬದಲಾಗಿ ತಮ್ಮ ಸುರಕ್ಷತೆಯೊಂದಿಗೆ ಸಾರ್ವಜನಿಕರ ರಕ್ಷಣೆಗೆ ತಾವು ಮುಂದಾಗಬೇಕು ಇದರಿಂದ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಿದಂತಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ನಡೆದ ವೈದ್ಯರು, ಔಷಧಿ ಅಂಗಡಿಕಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸದ್ಯದ ಪರಸ್ಥಿತಿಯಲ್ಲಿ ಮೆಡಿಕಲ್ ಎಮರಜನ್ಸಿ ಇದ್ದು, ಎಲ್ಲ ವೈದ್ಯಾಧಿಕಾರಿಗಳು ಜಾಗೃತರಾಗಿ ರೋಗಿಗಳ ತಪಾಸಣೆ ಮಾಡಬೇಕು. ತಮ್ಮ ವೈಯಕ್ತಿಕ ಸುರಕ್ಷತೆಯನ್ನು ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಿ. ತಾಲ್ಲೂಕಿನಲ್ಲಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳು ಅವಶ್ಯವಾಗಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ತಮ್ಮೆಲ್ಲರೊಂದಿಗೆ ನಾವು ಇದ್ದೇವೆ ಎಂದರು.
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ, ಕೋವಿಡ್-19 ನಿಯಂತ್ರಣ ಮಾಡುವಲ್ಲಿ ತಾಲ್ಲೂಕು ಆಡಳಿತದೊಂದಿಗೆ ಸಹಕಿಸಿ. ಕಳೆದ 5 ದಿನಗಳಲ್ಲಿ 700 ರಿಂದ 800 ರ್ಯಾಪಿಡ್ ಟೆಸ್ಟ್ ಮಾಡಿದ್ದು ಕೋವಿಡ್ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರ್‍ಎಂಪಿ, ಆಯುರ್ವೇದ, ಅಲೋಪತಿಕ ವೈದ್ಯರು ಸೇರಿದಂತೆ ಎಲ್ಲ ವೈದ್ಯರು ತಮ್ಮ ಬಳಿ ಶಂಕಿತರ ಬಗ್ಗೆ ಮಾಹಿತಿ ಬಂದಲ್ಲಿ ಅದರ ಕುರಿತು ತಾಲ್ಲೂಕು ಆಡಳಿತ ಇಲ್ಲವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಇದರಿಂದ ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ತಾಲ್ಲೂಕಿನಲ್ಲಿ ಒಟ್ಟು 3 ಕೋವಿಡ್ ಕೇರ ಸೆಂಟರ್‍ಗಳನ್ನು ಪ್ರಾರಂಭಿಸಲಾಗಿದೆ ಎಂದರು. 
ಈ ಸಂದರ್ಭದಲ್ಲಿ ಐಎಂಐ ಅಧ್ಯಕ್ಷ ಡಾ. ಪದ್ಮಜೀತ ನಾಡಗೌಡ ಪಾಟೀಲ, ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜು ಹಿರೇಮಠ ಮಾತನಾಡಿದರು.
ರಬಕವಿ-ಬನಹಟ್ಟಿ ತಾಲ್ಲೂಕು ಕೋವಿಡ್-19 ನೋಡಲ ಅಧಿಕಾರಿ ಶಶಿಧರ ಪೂಜಾರಿ, ಪೌರಾಯುಕ್ತ ಶ್ರೀನಿವಾಸ ಜಾಧವ, ವೈದ್ಯಾಧಿಕಾರಿ ಎನ್. ಎಂ. ನಧಾಪ, ಸಿಪಿಐ ಜೆ. ಕರುಣೇಶಗೌಡ, ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಅಶೋಕ ರಾಠಿ, ರವಿ ಪುಂಡೆ, ಅರುಣ ಪಾಟೀಲ ವಿಶ್ವನಾಥ ಬಡ್ಡೂರ, ವಿಜಯ ಹೊಸೂರ ಸೇರಿದಂತೆ ಅನೇಕರು ಇದ್ದರು. 



👉 ವಿಶೇಷ ಸಂದರ್ಶನ ತಪ್ಪದೇ ವೀಕ್ಷಿಸಿ ನಿಮ್ಮ "ಸ್ವರೂಪ ಸಂದರ್ಶನ " ಯೂಟ್ಯೂಬ್ ಚಾನಲ್ ನಲ್ಲಿ ಮಾತ್ರ...