ರಾಮಪೂರದ ಹನುಮಾನ ಮಂದಿರದಲ್ಲಿ ಪವನಾಮ ಹೋಮ ಹವನ ಜರುಗಿತು.
ರಾಮಪೂರದಲ್ಲಿ ಪವನಾಮ ಹೋಮ ಹವನ
ರಬಕವಿ-ಬನಹಟ್ಟಿ,ಅ5: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿರುವ ಸಂದರ್ಭ ಇತ್ತ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದಲ್ಲಿ ಸಕಲ ಸಂಕಷ್ಟ ಪರಿಹರಿಸಿ ಸುಸೂತ್ರವಾಗಿ ರಾಮ ಮಂದಿರ ನಿರ್ಮಾಣವಾಗಲೆಂದು ಹಣಮಾನ ಮಂದಿರದಲ್ಲಿ ಪವನಾಮ ಹೋಮ ಹವನ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ವಿಶ್ವ ಹಿಂದು ಪರಿಷತ್, ಭಜರಂಗ ದಳದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಮಲ್ಲಿಕಾರ್ಜುನ ಹೊಸಮನಿ, ಮಹಾಲಿಂಗ ಘಂಟಿ, ಜಡೇಶ್ವರ ಸಿನದೋಳಿ, ಬಸವರಾಜ ಅಮ್ಮಣಗಿಮಠ, ಸಂಜಯ ತೆಗ್ಗಿ, ಶಿವಾನಂದ ಗಾಯಕವಾಡ, ಯಲ್ಲಪ್ಪ ಕಟಗಿ, ರವಿ ಕೊರತಿ, ಸಿದ್ದು ಇರಳಿ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.


👉 ವಿಶೇಷ ಸಂದರ್ಶನ ತಪ್ಪದೆ ವೀಕ್ಷಿಸಿ ನಿಮ್ಮ "ಸ್ವರೂಪ ಸಂದರ್ಶನ " ಯೂಟ್ಯೂಬ್ ಚಾನಲ್ ನಲ್ಲಿ ಮಾತ್ರ...