ಬನಹಟ್ಟಿಯ ಮಾಹೇಶ್ವರಿ ಸಮಾಜದ ಮಹಿಳೆಯರು ಆಯೋಧ್ಯಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಭೂಮಿಪೂಜೆ ನಿಮಿತ್ತವಾಗಿ ಬಾಲಾಜಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀರಾಮ ಮಂದಿರ ಭಾರತೀಯ ಹೆಮ್ಮೆಯ ಪ್ರತೀಕ
ರಬಕವಿ-ಬನಹಟ್ಟಿ,ಅ5: ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಭಾರತೀಯ ಹೆಮ್ಮೆಯ ಪ್ರತೀಕವಾಗಿದೆ. ಐದು ನೂರು ವರ್ಷಗಳ ಕಾಲ ರಾಮ ಮಂದಿರದ ನಿರ್ಮಾಣಕ್ಕೆ ನಾವೆಲ್ಲರೂ ಕಾಯಬೇಕಾಯಿತು ಎಂದು ಸ್ಥಳೀಯ ಮಾಹೇಶ್ವರಿ ಸಮಾಜದ ಗೀತಾ ಭಟ್ಟಡ ತಿಳಿಸಿದರು.
ಅವರು ಬುಧವಾರ ಸ್ಥಳೀಯ ಬಾಲಾಜಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪತ್ರಿಕೆಯ ಜೊತೆಗೆ ಮಾತನಾಡಿದರು. ರಾಮ ಮಂದಿರದ ನಿರ್ಮಾಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರು ಅಭಿನಂದನಕ್ಕೆ ಅರ್ಹರಾಗಿದ್ದಾರೆ. ರಾಮ ಮಂದಿರದ ವಿಶ್ವದ ಶ್ರೇಷ್ಠ ದೇವಸ್ಥಾನಗಳಲ್ಲಿ ಒಂದಾಗಲಿದೆ ಎಂದು ಭಟ್ಟಡ ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಕಲಾ ಲಡ್ಡಾ, ತಾರಾ ಡಾಗಾ, ರಂಜನಾ ಲಡ್ಡಾ, ಜ್ಯೋತಿ ಭಟ್ಟಡ ಇದ್ದರು.


👉ವಿಶೇಷ ಸಂದರ್ಶನ ವೀಕ್ಷಿಸಿ ನಿಮ್ಮ "ಸ್ವರೂಪ ಸಂದರ್ಶನ " ಯೂಟ್ಯೂಬ್ ಚಾನಲ್ ನಲ್ಲಿ ಮಾತ್ರ