ಪ್ರಗತಿಪರ ಯುವ ರೈತ ಕೊರೊನಾಗೆ ಬಲಿ
ರಬಕವಿ-ಬನಹಟ್ಟಿ,ಅ6: ಬಾಗಲಕೋಟೆ ಜಿಲ್ಲೆಯಲ್ಲಿಯೇ ಸಾವಯವ ಬೆಳೆ ಸೇರಿದಂತೆ ಅರಿಷಿಣ ಹಾಗು ಕಬ್ಬು ಬೆಳೆಗೆ ಹೆಸರುವಾಸಿಯಾಗಿದ್ದ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆ ರಸ್ತೆಯ ಕಾಡಪ್ಪ ಹಣಮಂತ ಗೌಡಪ್ಪನವರ(47) ಇಂದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಬಲಿಯಾದ ವರದಿಯಾಗಿದೆ.
ಪ್ರಗತಿಪರ ರೈತರಾಗಿ ಈ ಭಾಗದ ರೈತರ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಗೆ ಹೆಸರುವಾಸಿಯಾಗಿದ್ದರು. ನೆರೆಯ ಮಹಾರಾಷ್ಟ್ರದ ಸಾಂಗಲಿ ಮಾರುಕಟ್ಟೆಯಲ್ಲಿ ತನ್ನದೇಯಾದ ಪ್ರಾಬಲ್ಯ ಹೊಂದಿದ್ದ ಯುವ ರೈತ. ಈ ಭಾಗದ ಹಲವಾರು ರೈತರಿಗೆ ನೀರಾವರಿ ಬೆಳೆಗಳ ಬಗ್ಗೆ ಮಾಹಿತಿ ಒದಗಿಸುತ್ತ ಮಾದರಿ ರೈತರಾಗಿದ್ದರು. ಇವರ ಅಗಲಿಕೆಯಿಂದ ಈ ಭಾಗದ ರೈತರಿಗೆ ತೀವ್ರ ಸಂಕಷ್ಟ ಎದುರಿಸುವಲ್ಲಿ ಕಾರಣವಾಗಿದೆ.
ಕೃಷಿ ಇಲಾಖೆಯಿಂದ ಸಾಕಷ್ಟು ಅಧ್ಯಯನ ನಡೆಸಿ, ಯಾವದೇ ದೇಶ ಸುತ್ತದೆ. ಉತ್ತಮ ಭೂಮಿಯಲ್ಲಿ ಯಾವ ರೀತಿ ಫಸಲು ತೆಗೆಯಬೇಕೆಂಬ ಮಾಹಿತಿ ಹೊಂದಿದ ಪಂಡಿತರಾಗಿದ್ದರು. ಹಲವಾರು ರೈತರಿಗೆ ಕೃಷಿ ಮಾಹಿತಿ ಒದಗಿಸಿ ಹೊಸ ತಂತ್ರಜ್ಞಾನಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದರು. ತಾವು ತಿಳಿದ ತಂತ್ರಜ್ಞಾನವನ್ನು ಬೇರೆ ರೈತರೊಂದಿಗೆ ಹಂಚಿಕೊಂಡು ಸಲಹೆ-ಸೂಚನೆ ನೀಡುತ್ತಿದ್ದರು. 
ಬರಗಾಲ ಸಂದರ್ಭ ಪರ್ಯಾಯ ಮತ್ತು ಸಮಗ್ರ ಕೃಷಿಯತ್ತ ರೈತರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರೈತರ ಆರ್ಥಿಕ ಸುವ್ಯವಸ್ಥೆ ಬಗ್ಗೆ ಅನುಭವ ಪಡೆದ ರೈತ ಇವರಾಗಿದ್ದರು.