ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಕಂಟೈನ್ಮೆಂಟ್ ವಲಯಗಳು ಹೆಚ್ಚುತ್ತಿರುವ ಕಾರಣ ಜನರ ಆತಂಕಕ್ಕೆ ಕಾರಣವಾಗಿದೆ.
ರಬಕವಿ-ಬನಹಟ್ಟಿ: 7 ಜನರಿಗೆ ಕೊರೊನಾ
ರಬಕವಿ-ಬನಹಟ್ಟಿ,ಅ5: ತಾಲೂಕಿನಾದ್ಯಂತ ಕೊರೊನಾ ಪಾಜಿಟಿವ್ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಮತ್ತೆ ಬುಧವಾರ ಏಳು ಜನರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟಿದೆ. 
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನರನ್ನು ರ್ಯಾಪಿಡ್ ಕಿಟ್ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 7 ಜನರಿಗೆ ಪಾಜಿಟಿವ್ ಇದ್ದ ವರದಿಯಾಗಿದೆ. 
ಕಳೆದೆರಡು ದಿನಗಳಿಂದ ಭಾರಿ ಮಳೆ, ಗಾಳಿಯಿಂದಾಗಿ ಹವಾಮಾನದಲ್ಲಿ ಭಾರಿ ವ್ಯತಿರಿಕ್ತ ಪರಿಣಾಮ ಕಂಡಿರುವ ಕಾರಣ ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರದಿಂದ ಜನರು ಬಳಲುತ್ತಿದ್ದಾರೆ. ತಾಲೂಕಿನಾದ್ಯಂತ ಖಾಸಗಿ ವೈದ್ಯರು ಚಿಕಿತ್ಸೆ ನೀಡದ ಕಾರಣ ರೋಗಿಗಳು ತೀವ್ರ ಪರದಾಡುವಂತಾಗಿದೆ.


👉 ವಿಶೇಷ ಸಂದರ್ಶನ ತಪ್ಪದೇ ವೀಕ್ಷಿಸಿ ನಿಮ್ಮ "ಸ್ವರೂಪ ಸಂದರ್ಶನ " ಯೂಟ್ಯೂಬ್ ಚಾನಲ್ ನಲ್ಲಿ ಮಾತ್ರ...