ಪೋಲಿಸ್ ವಾಹನದಲ್ಲಿ ಕುಳರಿಸಿ ಪೊಲೀಸರಿಂದ ಗಣೇಶ ವಿಸರ್ಜನೆ ತೇರದಾಳ : ದಿನವಿಡೀ ಆ ಕೇಸು ಈ ಕೇಸು, ಅಲ್ಲಿ ಹೊಡೆದಾಟ, ಬಡಿದಾಟ, ಅಶಾಂತಿ, ಒಂದಿಲ್ಲೊಂದು ಪ್ರಕರಣಗಳ ಬಗಿಹರಿಸುವುದರಲ್ಲೇ ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ಪೊಲೀಸರು ಬುಧವಾರ ಸಂಜೆ ಮಾತ್ರ ತಮ್ಮ ಖಾಕಿಗಳನ್ನು ತೆಗೆದಿರಿಸಿ, ಲಾಠಿ ಕೈಬಿಟ್ಟು ತಲೆಗೆ ಕೆಂಪು ಟೋಪಿ ಹಾಕಿ ಬಣ್ಣ ಬಣ್ಣದ ಶರ್ಟ ಧರಿಸಿ, ಪಟಾಕಿ ಸಿಡಿಸಿ, ಜೈಘೋಷಗಳೊಂದಿಗೆ ವಿಘ್ನವಿನಾಶಕನನ್ನು ಸರಳವಾಗಿ ಬೀಳ್ಕೋಡುವ ಮೂಲಕ ಇತರರಿಗೆ ಮಾದರಿಯಾದರು.

 

ತೇರದಾಳದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನಿಗೆ ಬುಧವಾರ ಬೀಳ್ಕೊಟ್ಟರು.

ಪೋಲಿಸ್ ವಾಹನದಲ್ಲಿ ಕುಳರಿಸಿ ಪೊಲೀಸರಿಂದ ಗಣೇಶ ವಿಸರ್ಜನೆ 

ತೇರದಾಳ : ದಿನವಿಡೀ ಆ ಕೇಸು ಈ ಕೇಸು, ಅಲ್ಲಿ ಹೊಡೆದಾಟ, ಬಡಿದಾಟ, ಅಶಾಂತಿ, ಒಂದಿಲ್ಲೊಂದು ಪ್ರಕರಣಗಳ ಬಗಿಹರಿಸುವುದರಲ್ಲೇ ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ಪೊಲೀಸರು ಬುಧವಾರ ಸಂಜೆ ಮಾತ್ರ ತಮ್ಮ ಖಾಕಿಗಳನ್ನು ತೆಗೆದಿರಿಸಿ, ಲಾಠಿ ಕೈಬಿಟ್ಟು ತಲೆಗೆ ಕೆಂಪು ಟೋಪಿ ಹಾಕಿ ಬಣ್ಣ ಬಣ್ಣದ ಶರ್ಟ ಧರಿಸಿ, ಪಟಾಕಿ ಸಿಡಿಸಿ, ಜೈಘೋಷಗಳೊಂದಿಗೆ ವಿಘ್ನವಿನಾಶಕನನ್ನು ಸರಳವಾಗಿ ಬೀಳ್ಕೋಡುವ ಮೂಲಕ ಇತರರಿಗೆ ಮಾದರಿಯಾದರು. 
        ದೇಶದಲ್ಲೆಡೆ ಕೊರೊನಾ ವೈರಾಣುವಿನ ಅಟ್ಟಹಾಸದಿಂದಾಗಿ ಹಬ್ಬ ಹರಿದಿನಗಳು ಸರಳವಾಗಿ ಆಚರಿಸಲಾಯಿತು. ಶ್ರಾವಣ ಮಾಸದಲ್ಲಿ ನಡೆಯಬೇಕಾಗಿದ್ದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯು ರದ್ದಾಗಿರುವುದರಿಂದ ಅರ್ಚಕರು ಮಾತ್ರ ಸಂಪ್ರದಾಯದಂತೆ ಪಾಲಕಿ ಉತ್ಸವ ನೆರವೇರಿಸಿದರು. ಗಣೇಶ ಚೌತಿಯ ನಿಮಿತ್ಯ ಕೆಲವು ಗಣೇಶ ಪ್ರತಿಷ್ಠಾಪನಾ ಮಂಡಳಿಯವರು ಗಣೇಶನನ್ನು ಒಂದು ದಿನ ಪ್ರತಿಷ್ಠಾಪಿಸಿ ಗಣೇಶ ವಿಸರ್ಜನೆ ಮಾಡಿದರು. ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಬಳಸಲಿಲ್ಲ. ಈ ವರ್ಷ ಕೊರೊನಾ ಅಬ್ಬರದಿಂದಾಗಿ ಎಲ್ಲ ಹಬ್ಬಗಳಿಗೆ ಕಳೆ ಇಲ್ಲದಂತಾಗಿದೆ. ಪೋಲಿಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಪೋಲಿಸ್ ವಾಹನದಲ್ಲಿ ಗಣೇಶನನ್ನು ಕುಳ್ಳಿರಿಸಿ ಪಟಾಕಿಗಳನ್ನು ಸಿಡಿಸುವುದರ ಮೂಲಕ ವಿಸರ್ಜನೆಗೆ ಸರಳವಾಗಿ ಯಾವುದೇ ರೀತಿಯ ವಾದ್ಯ, ಧ್ವನಿವರ್ಧಕಗಳಿಲ್ಲದೇ ವಿಸರ್ಜನೆಗೆ ತೆರಳಿದರು. ಐದು ದಿನಗಳವರೆಗೆ ಗಣೇಶನಿಗೆ ಪೊಲೀಸ್ ಠಾಣೆಯಲ್ಲಿ ವಿಶೇಷ ಪೂಜೆಗಳೊಂದಿಗೆ ನೈವೇದ್ಯ ಅರ್ಪಿಸಿದರು.ಪಿಎಸ್‍ಐ ವಿಜಯ ಕಾಂಬಳೆ ನೇತೃತ್ವದಲ್ಲಿ ಬುಧವಾರ ಸಂಜೆ ವಿನಾಯಕನಿಗೆ ವಿದಾಯ ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಎಎಸ್‍ಐ ಎಲ್.ಬಿ.ಮಾಳಿ, ಎಸ್.ಎಮ್.ಬಗಲಿ, ಎ.ಎ.ಕೋಲೂರ, ರಾಜು ಪೂಜಾರ ಸೇರಿದಂತೆ ಠಾಣೆಯ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.