ಪ್ರಮಾಣೀಕರಣಕ್ಕೆ ಲಂಚ ಆರೋಪ ರಬಕವಿ-ಬನಹಟ್ಟಿ,ಅ26: ಅಧಿಕೃತ ದಾಖಲೆಗಳೊಂದಿಗೆ ನಕಲು ಪ್ರತಿಗಳಿಗೆ ಪ್ರಮಾಣೀಕರಣ ಮಾಡಿ ಸಹಿ ಹಾಕುವದಕ್ಕೆ ಲಂಚ ಪಡೆಯುತ್ತಿದ್ದಾರೆಂದು ಸಮಾಜ ಸೇವಕ ವಿಠ್ಠಲ ಗೋಂಧಳೆ ಹಾಗು ಶಿವಾನಂದ ದೇಸಾಯಿ ಆರೋಪಿಸಿದರು. 

 ರಬಕವಿ-ಬನಹಟ್ಟಿ,ಅ26: ಅಧಿಕೃತ ದಾಖಲೆಗಳೊಂದಿಗೆ ನಕಲು ಪ್ರತಿಗಳಿಗೆ ಪ್ರಮಾಣೀಕರಣ ಮಾಡಿ ಸಹಿ ಹಾಕುವದಕ್ಕೆ ಲಂಚ ಪಡೆಯುತ್ತಿದ್ದಾರೆಂದು ಸಮಾಜ ಸೇವಕ ವಿಠ್ಠಲ ಗೋಂಧಳೆ ಹಾಗು ಶಿವಾನಂದ ದೇಸಾಯಿ ಆರೋಪಿಸಿದರು. ರಬಕವಿ-ಬನಹಟ್ಟಿ ತಾಲೂಕಿನ ಪಶು ಆಸ್ಪತ್ರೆಯ ವೈದ್ಯಾಧಿಕಾರಿಯು ಬಡತನದಲ್ಲಿರುವ ಹಾಗು ನೇಕಾರಿಕೆ ಕುಟುಂಬದಲ್ಲಿರುವವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗು ಇತರೆ ಕಾರ್ಯಗಳಿಗೆಂದು ದಾಖಲೆಗಳ ನಕಲುಗಳನ್ನು ಪ್ರಮಾಣೀಕರಿಸುವದಕ್ಕೆಂದು ತೆರಳಿದಾಗ 100 ರಿಂದ 200 ರೂ.ಗಳವರೆಗೆ ಪ್ರತಿಯೊಬ್ಬರಿಂದ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಇದೇ ಸಂದರ್ಭ ಸ್ಥಳೀಯ ಹಿರಿಯರಾದ ರಾಜು ಅಂಬಲಿ, ಕುಮಾರ ಕದಂ ಸೇರಿದಂತೆ ಹಲವಾರು ಪ್ರಮುಖರು ತೆರಳಿದಾಗ ಲಂಚ ಪಡೆದಿರುವದನ್ನು ಒಪ್ಪಿ ಕ್ಷಮೆ ಕೇಳಿದ ಪ್ರಸಂಗವೂ ನಡೆಯಿತು. ಆದರೆ ಮೊದಲೇ ದುಡಿಮೆಯಿಲ್ಲದ ನೇಕಾರ ಸಮುದಾಯದಿಂದ ಈ ರೀತಿ ಹಣ ಸುಲಿಗೆ ಮಾಡುತ್ತಿರುವದಕ್ಕೆ ಸ್ಥಳೀಯರು ಅಧಿಕಾರಿ ವಿರುದ್ಧ ಕಿಡಿಕಾರಿದರು. ಅಲ್ಲದೆ ಪ್ರಾಮಾಣಿಕ ಕಾರ್ಯ ಮಾಡುವಂತೆ ತಿಳಿ ಹೇಳಿದರು.