ಬ್ಯಾಂಕ್‍ಗಳಲ್ಲಿ ಕನ್ನಡದಲ್ಲಿ ಸೇವೆಗೆ ಗ್ರಾಹಕರ ಒತ್ತಾಯ ರಬಕವಿ-ಬನಹಟ್ಟಿ,ಅ27: ಕರ್ನಾಟಕದ ಬ್ಯಾಂಕಗಳು ಯಾವ ಭಾಷೆಯಲ್ಲಿ ಸೇವೆ ನೀಡಬೇಕು? ಕನ್ನಡವೇ ಅಥವಾ ಹಿಂದಿ ಭಾಷೆಯಲ್ಲಿಯೇ? ಈಗಾಗಲೇ ಬಹುತೇಕ ಬ್ಯಾಂಕುಗಳಲ್ಲಿ ಹಿಂದಿ ಭಾಷಿಕ ಅಧಿಕಾರಿಗಳು ತುಂಬಿಕೊಳ್ಳುತ್ತಿದ್ದು, ಮುಂದೆ ಕನ್ನಡಿಗರು ಹಿಂದಿ ಕಲಿತು ಬ್ಯಾಂಕ್ ವ್ಯವಹಾರ ನಡೆಸುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. 

   
ಬನಹಟ್ಟಿಯ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ಬ್ಯಾಂಕ್‍ಗಳಲ್ಲಿ ಕನ್ನಡದಲ್ಲಿ ಸೇವೆ ನೀಡ ಸಿಬ್ಬಂದಿ.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ಬ್ಯಾಂಕ್‍ಗಳಲ್ಲಿ ಕನ್ನಡದಲ್ಲಿ ಸೇವೆಗೆ ಗ್ರಾಹಕರ ಒತ್ತಾಯ 
ರಬಕವಿ-ಬನಹಟ್ಟಿ,ಅ27: ಕರ್ನಾಟಕದ ಬ್ಯಾಂಕಗಳು ಯಾವ ಭಾಷೆಯಲ್ಲಿ ಸೇವೆ ನೀಡಬೇಕು? ಕನ್ನಡವೇ ಅಥವಾ ಹಿಂದಿ ಭಾಷೆಯಲ್ಲಿಯೇ? ಈಗಾಗಲೇ ಬಹುತೇಕ ಬ್ಯಾಂಕುಗಳಲ್ಲಿ ಹಿಂದಿ ಭಾಷಿಕ ಅಧಿಕಾರಿಗಳು ತುಂಬಿಕೊಳ್ಳುತ್ತಿದ್ದು, ಮುಂದೆ ಕನ್ನಡಿಗರು ಹಿಂದಿ ಕಲಿತು ಬ್ಯಾಂಕ್ ವ್ಯವಹಾರ ನಡೆಸುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ. ರಬಕವಿ-ಬನಹಟ್ಟಿ ತಾಲೂಕಿನ ಗ್ರಾಮೀಣ ಪ್ರದೇಶದ ಬ್ಯಾಂಕ್‍ಗಳಲ್ಲಿಯೂ ಹಿಂದಿ ಭಾಷಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಕನ್ನಡದಲ್ಲಿ ಸೇವೆ ಕೇಳುವವರ ವಿರುದ್ಧ ದಾಷ್ಟ್ರ್ಯ ಪ್ರದರ್ಶಿಸುತ್ತಿದ್ದಾರೆ. ಹಿಂದಿಯಲ್ಲಿ ಮಾತನಾಡುವಂತೆ ದಬ್ಬಾಳಿಕೆ ನಡೆಸುವ ಪ್ರಕರಣಗಲು ಹೆಚಾಗುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇಲ್ಲವಾದರೆ ಫಲಾನುಭವಿ ಗ್ರಾಹಕನ ಗತಿ ಅಷ್ಟೇ. ಕರ್ನಾಟಕದವರೇ ಸ್ಥಾಪಿಸಿದ ಬ್ಯಾಂಕ್‍ಗಳಲ್ಲಿ ಉತ್ತರ ಭಾರತೀಯರು ಬಂದು ಸೇರಿ ಕೊಳ್ಳುತ್ತಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡದಲ್ಲಿ ಕಲಿಯದ ಅವರು, ಹಿಂದಿಯಲ್ಲಿ ಮಾತನಾಡುವಂತೆ ರಾಹಕರ ಮೇಲಿನ ಗದಾಪ್ರಹಾರಕ್ಕೆ ಸ್ಥಳೀಯ ಕನ್ನಡ ಮನಸ್ಸುಗಳಿಗೆ ಧಕ್ಕೆಯಾಗುತ್ತಿದೆ. ಸ್ಥಳೀಯ ವಿಜಯಾ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾ ಆಗಿ ರೂಪಗೊಂಡಿರುವ ಬನಹಟ್ಟಿ ಶಾಖೆಯಲ್ಲಿಯೂ ಇಂತಹ ಪ್ರಸಂಗ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಖಾತೆಗಳ ಸಂಖ್ಯೆ ಸೇರಿದಂತೆ ಇತರೆ ಅಂತರ್ಜಾಲ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಇವುಗಳ ಬಗ್ಗೆ ಕೇಳಲು ತೆರಳಿದರೆ ಸಮರ್ಪಕವಾದ ಉತ್ತರ ಹಾಗು ಕನ್ನಡದಲ್ಲಿ ಸಂಬಂಧಿಸಿದ ಸಿಬ್ಬಂದಿಗಳು ಮಾತನಾಡುವದೇ ಇಲ್ಲ. ಇದರಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. 2018 ರಲ್ಲಿಯೇ ಅಂದಿನ ಕರ್ನಾಟಕ ಪ್ರಾಧಿಕಾರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಬ್ಯಾಂಕ್ ವ್ಯವಸ್ಥೆಯಲ್ಲಿ ಕನ್ನಡ ಅನುಷ್ಠಾನ ಕುರಿತು ಹಲವಾರು ಸಭೆಗಳಲ್ಲಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಹಣಕಾಸಿನ ಸಹಾಯಕ್ಕೆ ಬ್ಯಾಂಕ್‍ಗಳ ಪಾತ್ರ ಹಿರಿದಾಗಿರುವ ಕಾರಣ ಸ್ಥಳೀಯ ಭಾಷೆಗಳ ಸಿಬ್ಬಂದಿಗಳ ನೇಮಕ ಅವಶ್ಯವಾಗಿದೆ ಎಂದು ಪವನ ಮಂಡಿ, ಅಮಿತ ಹಟ್ಟಿ, ಪ್ರವೀಣ ಗಣೇಶನವರ, ಸಿದ್ದು ಸಜ್ಜನ, ಸಮರ್ಥ ಬಾಣಕಾರ, ಚೇತನ ಐವಳ್ಳಿ, ಅಕ್ಷಯ ಬಾಣಕಾರ ಆಗ್ರಹಪಡಿಸಿದ್ದಾರೆ.