ಜವಳಿ ಉದ್ಯಮಿ ಪಟ್ಟಣ ಇನ್ನಿಲ್ಲ
ರಬಕವಿ-ಬನಹಟ್ಟಿ,ಅ28: ತಾಲೂಕಿನ ಬನಹಟ್ಟಿಯ ಲಕ್ಷ್ಮೀ ನಗರದ ಹಿರಿಯರಾದ ಅಶೋಕ ಪಟ್ಟಣ(70) ಶುಕ್ರವಾರ ರಾತ್ರಿ ನಿಧನರಾದರು.
ರಬಕವಿ-ಬನಹಟ್ಟಿಯಲ್ಲಿ ಜವಳಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಚಿರಪರಿಚಿತರಾದವರು. ನೇಕಾರಿಕೆ ಸಂಘಟನೆಗಳ ಅನೇಕ ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದ್ದ ಇವರು, ಹಲವಾರು ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ. ಮೃತರ ಸಹೋದರರಲ್ಲಿ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಪಂಡಿತ ಪಟ್ಟಣ ಒಬ್ಬರಾಗಿದ್ದಾರೆ.

Social Plugin