ವಿಘ್ನವಿನಾಯಕ’ನಿಗೂ ಕೊರೊನಾ `ವಿಘ್ನ’ ರಬಕವಿ-ಬನಹಟ್ಟಿಯಲ್ಲಿ ಸಾವಿರಾರು ಗಣಪತಿ ವಿಗ್ರಹಗಳಿಗೆ ಮುಂಗಡವಿಲ್ಲದೆ ಜನತೆ ಬಾರದಿರುವದು... 

 
 -ಮಲ್ಲಿಕಾರ್ಜುನ ತುಂಗಳ 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ರಬಕವಿ-ಬನಹಟ್ಟಿಯಲ್ಲಿ ಸಾವಿರಾರು ಗಣಪತಿ ವಿಗ್ರಹಗಳಿಗೆ ಮುಂಗಡವಿಲ್ಲದೆ ಜನತೆ ಬಾರದಿರುವದು. 

`ವಿಘ್ನವಿನಾಯಕ’ನಿಗೂ ಕೊರೊನಾ `ವಿಘ್ನ’

ರಬಕವಿ-ಬನಹಟ್ಟಿ,ಅ12: ಗಣೇಶ ಚತುರ್ಥಿ ಸಮೀಪಸುತ್ತಿದೆ. ಆದರೆ ಕೊರೊನಾದಿಂದಾಗಿ ಈ ಬಾರಿ ಗಣಪತಿಗಳಿಗೆ ಬೇಡಿಕೆಯೇ ಇಲ್ಲವಾಗಿದೆ. 7-8 ತಿಂಗಳಿಂದ ಗಣಪತಿ ತಯಾರಿಸಿರುವ ಕಲಾವಿದರು ಬೇಡಿಕೆ ಇಲ್ಲದೆ ಚಿಂತಾಕ್ರಾಂತರಾಗಿದ್ದರೆ, ಮಾರಾಟಗಾರರೂ ಕಂಗಾಲಾಗಿದ್ದಾರೆ. ಗಣಪತಿ ತಯಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪ್ರತಿ ವರ್ಷ ಪರಿಸರ ಸ್ನೇಹಿ ಗೌರಿ, ಗಣೇಶ ಮೂರ್ತಿ ಸೇರಿದಂತೆ ತರಹೇವಾರಿ ಗೌರಿ, ಗಣೇಶ ಮೂರ್ತಿಗಳು ನಗರದ ಅಂಗಡಿ, ಪಾದಚಾರಿ ಮಾರ್ಗ, ದೇವಸ್ಥಾನಗಳಲ್ಲಿ ರಾರಾಜಿಸುತ್ತಿದ್ದವು. ಈ ಬಾರಿ ಗಣಪತಿ ಮೂರ್ತಿಗಳ ಮಾರಾಟದಲ್ಲಿ ತುಂಬಾ ಕ್ಷೀಣಿಸುವಲ್ಲಿ ಕಾರಣವಾಗಿದೆ. ಗಣಪತಿ ಮಾರಾಟಗಾರರು ಆರ್ಥಿಕ ಸಂಕಷ್ಟ ಒಂದೆಡೆಯಾದರೆ, ಮಹಾರಾಷ್ಟ್ರದಿಂದ ಹೆಚ್ಚಾಗಿ ಗಣಪತಿಗಳು ಈ ಭಾಗದಲ್ಲಿ ಬರುತ್ತವೆ. ಕೊರೊನಾ ಕಾರಣ ವಾಹನಗಳ ಕೊರತೆ, ಬಾಡಿಗೆ ಹೆಚ್ಚಳದೊಂದಿಗೆ ಮೂರ್ತಿಗಳ ಬೆಲೆಯೂ ಹೆಚ್ಚಳಗೊಂಡಿದೆ. ಆದರೆ ಇತ್ತ ಮಾರಾಟದಲ್ಲಿ ಬೆಲೆ ಹೆಚ್ಚಳ ಸವಾಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಹೆಚ್ಚಾಗಿ ನೇಕಾರಿಕೆ ಹೊಂದಿರುವ ಕುಟುಂಬಗಳಾಗಿದ್ದು, ಪ್ರತಿ ವರ್ಷದಂತೆ ಈ ಬಾರಿ ಯಾವದೇ ರೀತಿ ಮುಂಗಡವಾಗಿ ಗಣಪತಿ ಮೂರ್ತಿ ಪಡೆಯುವಲ್ಲಿ ಮುಂದೆ ಬರುತ್ತಿಲ್ಲ. ಸಾರ್ವಜನಿಕ ಗಣಪತಿಗಳ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿಗಳಿಂದ ಉತ್ಸವಕ್ಕೆ ಅನುಮತಿಯಿಲ್ಲದ ಕಾರಣ ಯಾರೋಬ್ಬರೂ ಗಣಪತಿ ಮೂರ್ತಿ ಮುಂಗಡಕ್ಕಾಗಿ ಸುಳಿಯುತ್ತಿಲ್ಲ. ಈ ಬಾರಿ 250 ರಿಂದ 800 ರೂ.ಗಳವರೆಗೆ ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದೇವೆ. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷಕ್ಕಿಂತಲೂ ಅಗ್ಗದ ದರದಲ್ಲಿ ಗಣಪತಿ ನೀಡುವಲ್ಲಿ ಕಾರಣವಾಗುತ್ತಿದೆ. ಲಾಭ ಹೋಗಲಿ ಹೂಡಿಕೆ ಮಾಡಿದ ಹಣವೂ ಕೈ ಸೇರುವದೋ ಇಲ್ಲವೋ ಎಂಬ ಚಿಂತಾಕ್ರಾಂತದಲ್ಲಿದ್ದೇವೆನ್ನುತ್ತಾರೆ ಗಣಪತಿ ಮೂರ್ತಿ ಮಾರಾಟಗಾರ ದಿಲೀಪ ಬಕರೆ.