ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆಯ ರಬಕವಿ-ಬನಹಟ್ಟಿ ತಾಲೂಕು ಘಟಕ ಮನವಿ ಅರ್ಪಿಸಿತು.
ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಲು ಒತ್ತಾಯ
ರಬಕವಿ-ಬನಹಟ್ಟಿ,ಅ17: ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆಯ ರಬಕವಿ-ಬನಹಟ್ಟಿ ತಾಲೂಕು ಘಟಕ ಇಂದು ಸೋಮವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿ ಉಪತಹಶೀಲ್ದಾರ ಎಸ್.ಎಲ್ ಕಾಗಿಯವರ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯ ಸಂಗ್ರಾಮದ ನೇತಾರ ಶ್ರೀ ಬಾಲಗಂಗಾಧರ ತಿಲಕರು ಇಡೀ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಶ್ರೀಗಣೇಶನನ್ನು ಸಾರ್ವಜನಿಕಗೊಳಿಸಿ ಜಾತಿ,ಪ್ರಾಂತ,ಭಾಷೆ,ಪಕ್ಷ ಮರೆತು ಏಕತೆಯ ಸೂತ್ರದಲ್ಲಿ ಪೆÇೀಣಿಸಿದರು. 125 ವರ್ಷಗಳಿಂದ ಈ ಸಂಪ್ರದಾಯ ಮೂಲೆ ಮೂಲೆಗಳಲ್ಲಿ ಪಸರಿಸಿ ದೇಶ, ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾದರೆ, ಕಲಾವಿದರಿಗೆ, ಪ್ರತಿಭೆಗಳಿಗೆ, ಸಂಸ್ಕøತಿಗೆ ವೇದಿಕೆಯಾಗಿದೆ.
ಇಂತಹ ಸಾರ್ವಜನಿಕ ಉತ್ಸವವನ್ನು ಈ ವರ್ಷ ತಮ್ಮ ಸರ್ಕಾರ ಕೋವಿಡ್19 ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಅತ್ಯಂತ ನೋವಿನ, ಖಂಡನೀಯ ಸಂಗತಿಯಾಗಿದೆ. ದೇಶದ ಜನತೆ ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ ಅನ್ನುವುದು ತಮಗೆ ಗೊತ್ತಿದ್ದೂ ಕೇವಲ ಕೋವಿಡ್ ನೆಪಕ್ಕೆ 125 ವರ್ಷಗಳ ಪರಂಪರೆ, ಧಾರ್ಮಿಕ ಭಾವನೆ, ಶೃದ್ಧೆ,ಏಕತೆ ಘಾಸಿಗೊಳಿಸುವುದು ಸರ್ಕಾರಕ್ಕೆ ಶೋಭೆಯಲ್ಲ. ತಾವು ತಕ್ಷಣವೇ ಸುತ್ತೋಲೆ ಹೊರಡಿಸಿ ಸಾರ್ವಜನಿಕ ಗಣಪತಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತೇವೆ.
ದೇಶದ ತುರ್ತುಪರಿಸ್ಥಿತಿಯಲ್ಲಿಯೂ ಸಾರ್ವಜನಿಕ ಗಣಪತಿಗೆ ವಿಘ್ನವಿರಲಿಲ್ಲ.ಈಗ್ಯಾಕೆ ನಿಬರ್ಂಧ?, ಪಕ್ಕದ ಮಹಾರಾಷ್ಟ್ರ ಹೆಚ್ಚು ಕೋವಿಡ್ ಬಾಧಿತವಿದ್ದರೂ ಅನುಮತಿ ನೀಡಿದ್ದು ನಮ್ಮ ರಾಜ್ಯಕ್ಕೆ ಯಾಕೆ ನೀವು ನೀಡುತ್ತಿಲ್ಲ? , ಬಾರ್,ಮಾಲ್,ಸಾರಿಗೆ,ದೇವಸ್ಥಾನ, ಮಸಿದೆ,ಚರ್ಚ್,ಜಿಮ್ ತೆರದು ಗಣೇಶೋತ್ಸವಕ್ಕೆ ಮಾತ್ರ ಯಾಕೆ ನಿಬರ್ಂಧ?, ಉತ್ಸವದ ಮೇಲೆ ಅವಲಂಬಿಸಿ ಈಗಾಗಲೇ ಕೋಟ್ಯಂತರ ರೂ ಗಳನ್ನು ಬಂಡವಾಳ ಹಾಕಿ ವಿಗ್ರಹಗಳನ್ನು ತಯಾರಿಸಿದ ಕಲಾವಿದರ ಪರಿಸ್ಥಿತಿ?, ಇಂತಹ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಉತ್ಸವಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ಸಂಘಟನೆ ತಿಳಿಸಿದೆ.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರದೀಪ ದೇಶಪಾಂಡೆ, ಪ್ರದಾನ ಕಾರ್ಯದರ್ಶಿ ಸತೀಶ ರೇವಣಿ, ರವೀಂದ್ರ ಕಾಮಗೊಂಡ್ ನಂದು ಗಾಯಕವಾಡ್, ವಿನಾಯಕ್ ರಜಪೂತ್ ಮತ್ತು ಕಾರ್ಯಕರ್ತರು ಇದ್ದರು.
ಜಾಹಿರಾತು...
Social Plugin