ರಬಕವಿ-ಬನಹಟ್ಟಿ: ಏಳು ಜನರಿಗೆ ಕೊರೊನಾ ರಬಕವಿ-ಬನಹಟ್ಟಿ,ಅ17: ರಬಕವಿ-ಬನಹಟ್ಟಿ ನಗರಾದ್ಯಂತ ಕೊರೊನಾ ಸೋಂಕಿತರು ಅಲ್ಲಲ್ಲಿ ಮುಂದುವರೆದಿದ್ದು, ಸೋಮವಾರ ಮತ್ತೆ ಏಳು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿಂದು ರ್ಯಾಪಿಡ್ ಕಿಟ್‍ಗಳ ಮೂಲಕ 81 ಜನರ ಪರೀಕ್ಷೆ ಮಾಡಲಾಗಿ ಅದರಲ್ಲಿ ಏಳು ಜನರಿಗೆ ಸೋಂಕು ದೃಢಪಟ್ಟಿದೆ. ಮತ್ತೆ ಮಾರುಕಟ್ಟೆಯಲ್ಲಿಲ್ಲ ನಿಯಂತ್ರಣ: ಬನಹಟ್ಟಿಯ ಕಾಯಿಪಲ್ಲೆ ಸಂತೆ ಹಾಗು ಮಾರುಕಟ್ಟೆಯಲ್ಲಿ ಮಾಸ್ಕ್ ಇಲ್ಲದೆ ತೀವ್ರ ನಿರ್ಲಕ್ಷ್ಯದಿಂದ ಸಂಚಾರ ನಡೆಸುತ್ತಿರುವ ಕಾರಣ ಕೊರೊನಾ ನಿಯಂತ್ರಣಕ್ಕೆ ಕಂಟಕವಾಗುವಲ್ಲಿ ಕಾರಣವಾಗುತ್ತಿದೆ. ಜನತೆ ನಿಯಮಾನುಸಾರ ಹಾಗು ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನಡೆಯಬೇಕೆಂದು ಕಂದಾಯ ಹಾಗು ನಗರಸಭೆ ಅಧಿಕಾರಿಗಳು ಮನವಿ ಮಾಡುತ್ತಿದ್ದರೂ ಯಾವದೇ ಪ್ರಯೋಜನವಾಗುತ್ತಿಲ್ಲ.
Social Plugin