ಓದುಗ ಮಿತ್ರರೇ ಈ "ಸ್ವರೂಪ ಸಂದರ್ಶನ" ತೇರದಾಳ ಪಟ್ಟಣದಲ್ಲಿ ಪ್ರಾರಂಭವಾಗಿ ಜನರಿಗೆ ಹತ್ತಿರವಾಗಿರುವುದು ತಮಗೆಲ್ಲ ತಿಳಿದೆ ಇದೆ.ಆದರೆ ಈ ಸ್ವರೂಪ ಸಂದರ್ಶನ ವರ್ಷಕ್ಕೂ ಮುಂಚೆ ಬೆಂಗಳೂರಿನಲ್ಲಿ ಪ್ರಾರಂಭಗೊಂಡು ವಿಶೇಷ ಸಂದರ್ಶನ ಹಾಗೂ ವಿಶೇಷ ಲೇಖನಗಳನ್ನು ಮಾತ್ರ ಓದುಗರಿಗೆ ತಲುಪಿಸುತ್ತಿತ್ತು. ಈಗ ತೇರದಾಳ ಪಟ್ಟಣದಲ್ಲಿ ಎಲ್ಲ ಜನರಿಗೆ ಹತ್ತಿರವಾಗಲೂ ಕಾರಣಗಳು ಅನೇಕ ಅದರಲ್ಲಿ ಪ್ರಮುಖವೆಂದರೆ ನಾವು ಈ ಹಿಂದೆ "ಕ್ರಾಂತಿಯೋಗಿ ಮಹಾದೇವರು" ಚಲನಚಿತ್ರ ಮಾಡಿದ್ದೇವು. ಆಗ ಬೆಂಗಳೂರಿನ ಮಾಧ್ಯಮ ಮಿತ್ರರು ನಮಗೆ ಅಭೂತ ಪೂರ್ವ ಬೆಂಬಲ ನೀಡಿ ಪ್ರಚಾರವನ್ನು ನೀಡಿದ್ದರು. ಅದೇ ಪ್ರಕಾರ ನಮ್ಮ ಭಾಗದಲ್ಲಿ ನನಗೆ ಸ್ವಲ್ಪ ಪತ್ರಿಕಾ ಮಿತ್ರರ ಪರಿಚಯ ಕಡಿಮೆ, ಆದರೂ ಹಳೆಯ ನನ್ನ ಸ್ನೇಹಿತ ಪತ್ರಿಕಾ ಮಿತ್ರ ಈ ಭಾಗದ ಜನಜನಿತವಾದ ಪತ್ರಕರ್ತ ಮಲ್ಲು ತುಂಗಳ ಅವರ ಸಹಕಾರದಿಂದ ನನಗೆ ಆ ಸಿನೇಮಗೇ ಪ್ರಚಾರ ಹಾಗೂ ಬೆಂಬಲ ಸಿಕ್ಕಿತು. ಮಿತ್ರರೇ ನನಗೆ ಕೆಲಸ ಮಾಡುವುದು ಗೊತ್ತು ನಿಯತ್ತಿನಿಂದ ಕೆಲಸ ಮಾಡುತ್ತೇನೆ, ಸಮಾಜದ ಒಳಿತಿಗಾಗಿ ಸಂದೇಶವನ್ನು ನೀಡುವ ಕೆಲಸ ಮಾಡುತ್ತಲೇ ಇರುತ್ತೇನೆ. ಆದರೇ ಈ ಮಧ್ಯ ಅಸಲಿ ವಿಷಯ ನನಗೆ ಗೊತ್ತಾಯಿತು. ಅದೇನೆಂದರೆ ನಿಮಗೆ ಮೊದಲೇ ಹೇಳಿದ ಹಾಗೆ ಈ ಭಾಗದ ಪತ್ರಿಕಾ ಮಿತ್ರ "ಮಲ್ಲು ತುಂಗಳ" ಅವರ ಸಹಕಾರ ನನಗೆ ಸಿಕ್ಕ ವಿಷಯ ತೇರದಾಳದ ಕೆಲ ಸ್ವಾರ್ಥಿ ಪತ್ರಕರ್ತರು ಒಳಗೊಳಗೆ ನನ್ನನ್ನು ವಿರೋಧಿಸಲು ಪ್ರಾರಂಭಿಸಿದರು. ಆದರೂ ನನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೊರಟು ಶ್ರೀಅಲ್ಲಮಪ್ರಭು ದೇವರ ಸಾಕ್ಷ್ಯಚಿತ್ರವನ್ನು ಪ್ರಾರಂಭಿಸಿದೆ. ವಾಡಿಕೆಯಂತೆ ಸಿನೇಮಾ ಆಗಲಿ, ಸಾಕ್ಷ್ಯಚಿತ್ರಗಳಾಗಲಿ ಮಾಡಿದಾಗ ಮಾಧ್ಯಮದವರಿಗೆ ತಿಳಿಸುವುದು ನಮ್ಮ ಕೆಲಸ. ಅದೇ ಪ್ರಕಾರ ಇದು ತೇರದಾಳದಲ್ಲಿ ಸಾಕ್ಷ್ಯಚಿತ್ರ ಮಾಡಿರುವುದರಿಂದ ಈ ತೇರದಾಳದ ಮಾಧ್ಯಮದವರ ಮನೆಮನೆಗೆ ಸ್ವತಃ ನಾನೇ ಹೋಗಿ ಕರೆದು ಬಂದೆ ಎಂತಹ ವಿಚಿತ್ರ ನೋಡಿ ಒಬ್ಬನೇ ಒಬ್ಬ ಮಾಧ್ಯಮದವರು ತಿರುಗಿಯು ನೋಡಲಿಲ್ಲ. ಆದರೇ "ಶ್ರೀ ಅಲ್ಲಮಪ್ರಭುವಿನ ಲೀಲೆ" ನೋಡಿ ಆ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿದ್ದು ತಾಲೂಕಾ ಹೋರಾಟ ಸಮೀತಿಯಿಂದ ನಡೆದ ಅದ್ದೂರಿ ಅಭಿನಂದನಾ ಕಾರ್ಯಕ್ರಮದಲ್ಲಿ ಎಲ್ಲ ಮಠಾಧೀಶರ ಆಶೀರ್ವಾದದೊಂದಿಗೆ ಅದ್ದೂರಿಯಾಗಿಯೇ ಬಿಡುಗಡೆಯಾಯಿತು. ಆ ಸಂದರ್ಭದಲ್ಲಿಯೇ ನನಗೆ ಇಲ್ಲಿಯ ಹಲವು ಸತ್ಯ ಸಂಗತಿಗಳು ತಿಳಿದವು. ಅವುಗಳನ್ನು ಈಗ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಈ ಅದ್ದೂರಿ ಸಮಾರಂಭದ ಲೇಖನಗಳು ಎಲ್ಲ ಪತ್ರಿಕೆಗಳಲ್ಲಿ ಬಂದವು, ಆದರೇ ಹಲವು ಪತ್ರಿಕೆಗಳ ಲೇಖನದಲ್ಲಿ "ಶ್ರೀ ಅಲ್ಲಮಪ್ರಭುದೇವರ ಸಾಕ್ಷ್ಯಚಿತ್ರದ" ಕುರಿತು ಬರೆದಿದ್ದರು, ಇನ್ನು ಹಲವು ಪತ್ರಿಕೆಗಳಲ್ಲಿ ಬಹುಶಃ ಅವರು ಕಣ್ಣುಮುಚ್ಚಿ ಕುಳಿತಿರುವಂತೆ ಸಾಕ್ಷ್ಯಚಿತ್ರದ ಬಗ್ಗೆ ಯಾವುದೇ ವಿಷಯ ಮೂಡಿ ಬರಲೇ ಇಲ್ಲ. ತಾವು ಸಹ ಅಂದಿನ ಪತ್ರಿಕೆಗಳನ್ನು ಈಗಲೂ ಗಮನಿಸಬಹುದು. ನನಗೆ ಬೇಜಾರಾದ ವಿಷಯವೇನೆಂದರೆ ಈ ವಿರೋಧಿಸುವ ಜನ ನನ್ನನ್ನು ವೈಯಕ್ತಿಕವಾಗಿ ವಿರೋಧಿಸಲಿ, ಆದರೇ ಇದು "ಶ್ರೀ ಅಲ್ಲಮಪ್ರಭು ದೇವರ ಸಾಕ್ಷ್ಯಚಿತ್ರ", ಆ ಸಾಕ್ಷ್ಯಚಿತ್ರದ ಬಗ್ಗೆ ಜನರಿಗೆ ಮುಟ್ಟಿಸುವುದು ಮಾಧ್ಯಮದವರ ಕರ್ತವ್ಯ, ಆಗಲೇ ಒಂದು ವಿಷಯ ನನಗೆ ತಿಳಿಯಿತು ಇಲ್ಲಿ ಮಾಧ್ಯಮದವರ ಎರಡು ಗುಂಪುಗಳಿವೆ ಎಂದು. ಈ ಎರಡು ಗುಂಪುಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಸೂಕ್ಷ್ಮವಾಗಿ ಗಮನಿಸಿದರೇ ಹಿಂದಿನ ಅನುಭವ ಹಾಗೂ ಇಂದಿನ ಅನುಭವದಿಂದ ಸರಿ ತಪ್ಪುಗಳು ಕಾಣಿಸಿದವು. ಹೀಗೆಯೇ ಮುಂದೆ ಸಾಗಿದರೆ ಸಾಕ್ಷ್ಯಚಿತ್ರವು ಲೋಕಾರ್ಪಣೆಯಾಗಿ ಜಗತ್ತಿನಲ್ಲಡೆ ಹಬ್ಬಿತು. ಕೆಲವು ತಿಂಗಳುಗಳ ನಂತರ ಈ ಕೊರೊನ ಮಹಾಮಾರಿ ಹಬ್ಬುವಿಕೆಯನ್ನು ತಡೆಯಲು ದೇಶದಲ್ಲೆಡೆ ಲಾಕ್‍ಡೌನ್ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ನಮ್ಮ ಚಿತ್ರರಂಗದ ಕೆಲಸಗಳು ನಿಂತು ಹೋದವು. ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಹೇಗೂ ವರ್ಷದ ಹಿಂದೆ ಪ್ರಾರಂಭಿಸಿದ ಯೂಟ್ಯೂಬ್ ಚಾನಲ್ ಹಾಗೂ ನ್ಯೂಸ್ ವೆಬ್ ಪೋರ್ಟಲ್‍ಗೆ ಸ್ಥಳಿಯ ಇನ್ನೊಂದು ಗುಂಪಿನ ಮಾಧ್ಯಮದ ಸ್ನೇಹಿತರ ಸಹಕಾರದಿಂದ ಜನರಿಗೆ ಪ್ರತಿನಿತ್ಯವು ಕೊರೊನಾ ಕುರಿತು ಜಾಗೃತಿಯನ್ನು ಹಾಗೂ ಸುದ್ದಿಗಳನ್ನು ನೀಡುತ್ತಾ ಬಂದೇವು. ಈಗ ಈ ವಿಷಯ ಪ್ರಸ್ಥಾಪಿಸಲು ಕಾರಣ ಮತ್ತೇ ನಾನು ಇನ್ನು ಮುಂದೆ ವಿಶೇಷ ಸುದ್ದಿ ಹಾಗೂ ಸಂದರ್ಶನಗಳನ್ನು ನೀಡಲು ಗಮನ ಹರಿಸುತ್ತಿದ್ದೇನೆ. ಜೊತೆಗೆ ಒಂದು ಪಾಕ್ಷಿಕ ಹಾಗೂ ಮಾಸ ಪತ್ರಿಕೆ, ಹೊಸ ಚಲನಚಿತ್ರದ ಕೆಲಸಗಳು ಪ್ರಾರಂಭವಾಗಿರುವುದರಿಂದ ಮತ್ತೇ ನಾನು ವಿಶೇಷ ಸುದ್ದಿ ಸಂದರ್ಶನಗಳನ್ನು ಮಾತ್ರ ನೀಡಬೇಕೆಂದಿದ್ದೇನೆ. ಅಲ್ಲದೆ ವಿಶೇಷ ಘಟನೆಗಳಿದ್ದರೆ ಆ ಸುದ್ದಿಗಳನ್ನು ತಮಗೆ ತಲುಪಿಸುತ್ತೇನೆ. ಈ ಮಧ್ಯ ಇಲ್ಲಿಯ ಇನ್ನೊಂದು ಗುಂಪಿನ ಪತ್ರಕರ್ತರು ಸ್ವಲ್ಪ ಬುದ್ಧಿ ಕಲಿತ್ತಿದ್ದಾರೆ ಅನಿಸುತ್ತಿದೆ.ಈಗ ಸ್ವಲ್ಪ ಶ್ರೀ ಅಲ್ಲಮಪ್ರಭು ದೇವರ ಕುರಿತಾಗಲಿ ಮತ್ತು ಊರಿನ ವಿಷಯಗಳನ್ನು ಅವರು ಸಹ ಓದುಗರಿಗೆ ಅಂದೆ ಸುದ್ದಿಯನ್ನು ತಲುಪಿಸುವ ಕಾರ್ಯ ಆರಂಬಿಸಿದ್ದಾರೆ. ( ತಾವು ಹಿಂದೆ ಹಾಗು ಈಗಿನ ವ್ಯತ್ಯಾಸ ಗಮನಿಸಬಹುದು ) ಪೈಪೋಟಿಗೋ ಅಥವಾ ನನ್ನ ಮೇಲಿನ ಪ್ರೀತಿಗೋ ಈಗ ಸಧ್ಯ ಕೆಲಸವಂತೂ ಮಾಡುತ್ತಿದ್ದಾರೆ. ಅವರು ಹೀಗೆಯೇ ಕೆಲಸವನ್ನು ಮುಂದು ವರೆಸಿಕೊಂಡು ಹೋಗಲಿ ಜನರಿಗೆ ಯಾವುದೇ ಪಕ್ಷಪಾತ ಮಾಡದೇ ಸಮಾಜಕ್ಕೆ ಒಳ್ಳೆಯ ಸುದ್ದಿ ಬಿತ್ತರಿಸುವ ಕೆಲಸವಾಗಲಿ ಎಂಬುದೆ ನಮ್ಮಯ ಆಶಯ. ಒಂದು ವೇಳೆ ಅವರು ಮತ್ತೇ ಹಳೆಯ ಚಾಳಿಗೆ ಹೋದರೆ ಮತ್ತೇ ನಿಮ್ಮ ಸ್ವರೂಪ ಸಂದರ್ಶನ ಇದ್ಧೇ ಇದೆ ಅಲ್ಲದೆ ಇನ್ನೊಂದು ಪತ್ರಕರ್ತರ ಗುಂಪು ನನ್ನಜೊತೆ ಇದ್ದೇ ಇರುತ್ತಾರೆ. ಅಲ್ಲದೆ ಎಲ್ಲ ಜಿಲ್ಲೆ,ರಾಜ್ಯ ಮಟ್ಟದ ಮಾಧ್ಯಮ ಮಿತ್ರರ ಸಹಕಾರ ಕೂಡ ಇದೆ, ಇದಕ್ಕಿಂತ ಹೆಚ್ಚಿನ ಸಹಕಾರ ತಮ್ಮೆಲ್ಲರದು ಇದೇ, ಮುಂದೆಯೂ ಇರುತ್ತದೆ ಎಂದು ಕೊಂಡಿದ್ದೇನೆ. ಸದಾ ನಿಮ್ಮ ಸೇವೆಯಲ್ಲಿ ಸ್ವರೂಪ ಸಂದರ್ಶನ ಧನ್ಯವಾದಗಳು......
(ವಿ.ಸೂ: ನಮ್ಮ ವ್ಯಾಪ್ತಿಯಲ್ಲಿ ಸಮಾಜ ಸುಧಾರಣೆ ನಮ್ಮ ಕೆಲಸ ಸಮಾಜ ಕಂಠಕರು ಯಾರೇ ಇದ್ದರೂ ಅದನ್ನು ಜನರ ಮುಂದಿಡುವುದೇ ನಮ್ಮ ಉದ್ದೇಶ ಇಲ್ಲಿ ಯಾವ ಗುಂಪು ಅಥವಾ ಪಕ್ಷಪಾತ ಇಲ್ಲದೇ ಇಲ್ಲಿ ಎಲ್ಲ ವಿಷಯವನ್ನು ತಮ್ಮ ಮುಂದೆ ಹಂಚಿಕೊಂಡಿದ್ದೇನೆ. ವಿಶೇಷವಾಗಿ ತೇರದಾಳದ ರೂಢಿ ಭಾಷೆಯಲ್ಲಿ ಯಾರಿಗಾದರೂ ಸೊಕ್ಕು ಬಂದರೆ ಹಿರಿಯರು ಒಂದು ಮಾತನ್ನು ಹೇಳುತ್ತಿರುತ್ತಾರೆ " ಇದು ಪ್ರಭುದೇವರ ಪಂಡರಿ, ಇಲ್ಲಿ ಅನ್ಯಾಯ ನಡೆಯಲ್ಲ. ನಾ ಎಂದು ಮೆರೆದವನು ಬಹಳ ದಿನ ಉಳಿಯಲ್ಲ")
Social Plugin