ರಬಕವಿ-ಬನಹಟ್ಟಿ ಸಮೀಪ ಕೃಷ್ಣೆಯು ತನ್ನ ಒಡಲೊಳಗೆ ಹರಿಯುತ್ತಿರುವದು.
`ಮಹಾ’ ಮಳೆ ಶಾಂತ: ಕೃಷ್ಣೆಯೂ ಇಳಿಮುಖ
ರಬಕವಿ-ಬನಹಟ್ಟಿ,ಅ26: ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿರುವದರಿಂದ ರಾಜ್ಯದ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕೃಷ್ಣೆಯ ನದಿ ಪಾತ್ರವೂ ಇಳಿಮುಖವಾಗಿದೆ.
ಈಚೆಗೆ ಕೆಲ ಕೆಳ ಸೇತುವೆಗಳು, ನದಿ ತಟದ ಪ್ರದೇಶಗಳು ಜಲಾವೃತಗೊಂಡಿದ್ದವು. ಇದೀಗ ಬಹುತೇಕ ರಸ್ತೆಎಗಳು ಸಂಚಾರಕ್ಕೆ ಮುಕ್ತವಾಗಿವೆ.
ಮಹಾರಾಷ್ಟ್ರದಿಂದ 1.18 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆಗೊಳಿಸುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ಯಾವದೇ ರೀತಿ ನೀರು ಹಿಡಿದಿಟ್ಟುಕೊಳ್ಳದೆ ಬಂದಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ.
Social Plugin