ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಪೂರ್ವಬಾವಿ ಸಭೆ
ರಬಕವಿ-ಬನಹಟ್ಟಿ,ಅ25: ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆಯನ್ನು ಸೆ. 5 ರಂದು ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಎಸ್‍ಆರ್‍ಎ ಪದವಿ ಪೂರ್ವ ಶಾಲೆಯ ಸಭಾಭವನದಲ್ಲಿ ವಿಜ್ರಂಭಣೆಯಿಂದ ಆಚರಿಸಲು ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಶಾಸಕ ಸಿದ್ದು ಸವದಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ನೂತನ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಪ್ರತ್ಯೇಕವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಆ ವೇಳೆ ಸರಕಾರ ವಿಧಿಸುವ ಮಾರ್ಗದರ್ಶನದಂತೆ ಶಿಕ್ಷಕ ದಿನಾಚರಣೆ ಆಚರಿಸಲು ಸಭೆ ತೀರ್ಮಾನಿಸಿದ್ದು, ಶಿಕ್ಷಕರ ಸೇವೆ ಅಮೂಲ್ಯವಾದದು, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಮಾತ್ರ ಪ್ರಮುಖವಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ವರ್ಷಕ್ಕೆ ಒಮ್ಮೆ ಪ್ರಾಮಾಣಿಕ ಸೇವೆಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ನಾವು ಮೊದಲನೆ ಸಲ ಸಂತೋಷದಿಂದ, ಭಕ್ತಿ ಪೂರ್ವಕವಾಗಿ ಶಿಕ್ಷಕರನ್ನು ನೆನೆಯಲು ಸುಅವಕಾಶವಾಗಿದೆ. ಆದ್ದರಿಂದ ನಾವು ಅಭಿಮಾನದಿಂದ ಈ ಕಾರ್ಯಕ್ರಮವನ್ನು ಮಾಡುತ್ತೇವೆ. ಆ ನಿಟ್ಟಿನಲ್ಲಿ ಏನೇನು ಮಾಡಬೇಕು ಎಂಬುದರ ಬಗ್ಗೆ ಪೂರ್ವಬಾವಿ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.
ದೇಶ ಅಭಿವೃದ್ಧಿ ಹೊಂದಲು ಶಿಕ್ಷಣದ ಕೊಡುಗೆ ಬಹಳಷ್ಟಿದ್ದು, ಬರುವ ದಿನಮಾನಗಳಲ್ಲಿ ಶಿಕ್ಷಣಕ್ಕೆ ಶ್ರೇಷ್ಠ ಸ್ಥಾನ ತಂದುಕೊಟ್ಟಂತಹ ರಾಧಾಕೃಷ್ಣ ಅವರ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಎಂಬ ದೃಷ್ಠಿಯಲ್ಲಿ ಆಲೋಚನೆಗಳಿದ್ದು ಸೂಕ್ತ ಜಾಗೆ ಸಿಕ್ಕಲ್ಲಿ ಕೆಲಸ ಮಾಡುತ್ತೇವೆ. ಮತ್ತು ತಾಲೂಕು ಶಿಕ್ಷಕರ ಭವನ ನಿರ್ಮಾಣಕ್ಕೆ ಸಾಧ್ಯವಾದಷ್ಟು ಬೇಗನೆ ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸಂಜೀವ ಹಿಪ್ಪರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನ್ಯಾಮಗೌಡ, ಶ್ರೀಶೈಲ ಬುರ್ಲಿ, ಪ್ರಶಾಂತ ಹೊಸಮನಿ, ಬಸವರಾಜ ಹನಗಂಡಿ, ಬಿ. ಡಿ. ನೇಮಗೌಡ, ಶಿವು ಯಾದವಾಡ, ಎಂ. ಎಸ್. ಗಡೆನ್ನವರ, ಸಿ. ಜಿ. ಕಡಕೋಳ, ಅನೀಲ ಕಡ್ಲಿ, ಎಸ್. ಎಂ. ಡಾಂಗೆ ಸೇರಿದಂತೆ ಅನೇಕರು ಇದ್ದರು.
Social Plugin