ಜ್ಞಾನ ಅಮೂಲ್ಯವಾದ ಸಂಪತ್ತು.
* ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ
ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಎಸ್‍ಆರ್‍ಎ ಪ್ರೌಢ ಶಾಲೆಯಲ್ಲಿ ಇನ್ಫೋಸಿಸ್ ಫೌಂಡೇಶನ ಬೆಂಗಳೂರು ಇವರ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಡ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
* ಸಮಾಜ ನಮ್ಮ ವ್ಯಕ್ತಿತ್ವವನ್ನು ಕೊಂಡಾಡುವಂತೆ ಜೀವನ ರೂಪಿಸಿಕೊಳ್ಳಿ
ರಬಕವಿ-ಬನಹಟ್ಟಿ,ಅ31: ಜ್ಞಾನವೆಂಬುದು ಅಮೂಲ್ಯವಾದ ಸಂಪತ್ತು. ಅದು ನಿಮ್ಮ ಹತ್ತಿರ ಬರುವಂತೆ ಮಾಡಿಕೊಳ್ಳಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದ ಜನತಾ ಶಿಕ್ಷಣ ಸಂಘದ ಎಸ್‍ಆರ್‍ಎ ಪ್ರೌಢ ಶಾಲೆಯಲ್ಲಿ ಇನ್ಫೋಸಿಸ್ ಫೌಂಡೇಶನ ಬೆಂಗಳೂರು ಇವರ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಡ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ 50 ಸಾವಿರ ಕಲಿಕಾ ಪ್ರೋತ್ಸಾಹ ಧನ ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಲ್ಲಿ ಹಣವಿದ್ದವರು ಬಹಳಷ್ಟು ಜನ ಇದ್ದಾರೆ ಆದರೆ ಅದನ್ನು ಕೊಡುವ ಮನೋಭಾವ ಉಳ್ಳವರು ಬಹಳಷ್ಟು ಕಡಿಮೆ. ಸುಧಾಮೂರ್ತಿಯವರದು ಯಾವಾಗಲು ಕೊಡುವ ಕೈ. ಅವರ ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಸದೃಢವಿದವರು ಇಲ್ಲದವರಿಗೆ ನೀಡಬೇಕು. ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ, ಕಷ್ಟಪಟ್ಟು ಅಭ್ಯಾಸ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳಾಗಿ, ಜೀವನದಲ್ಲಿ ಒಂದು ಉದ್ಧಾತ್ತವಾದ ಗುರಿ ಇಟ್ಟುಕೊಳ್ಳಿ ಅದನ್ನು ಛಲದಿಂದ ಬೆನ್ನು ಹತ್ತಿ ಜೀವನವನ್ನು ಸುಂದರವಾಗಿಸಿಕೊಳ್ಳಿ. ಸಮಾಜ ನಮ್ಮ ವ್ಯಕ್ತಿತ್ವವನ್ನು ಕೊಂಡಾಡುವಂತೆ ಜೀವನ ರೂಪಿಸಿಕೊಳ್ಳಬೇಕು ಎಂದು ಸವದಿ ಹೇಳಿದರು.
ಇನ್ಫೋಸಿಸ್ ಪರವಾಗಿ ನಾರಾಯಣ ಕುಲಕರ್ಣಿ ಮಾತನಾಡಿ, ಮಕ್ಕಳು ನಾಡಿನ ಆಸ್ತಿ ಅವರ ರಕ್ಷಣೆ ನಮ್ಮ ಕರ್ತವ್ಯ. ನಿಮ್ಮ ಪ್ರತಿಭೆಗೆ ಇನ್ಫೋಸಿಸ್‍ನ ಸುಧಾಮೂರ್ತಿ ಅಮ್ಮನವರು ಆರ್ಥಿಕ ಬಲ ನೀಡುತ್ತಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮತ್ತಷ್ಟು ಪ್ರತಿಭಾವಂತರಾಗಿ ಹೊರಹೊಮ್ಮಿ ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಕುರಿ ಹಾಗೂ ದಾನಮ್ಮ ಹನಗಂಡಿ ಅವರನ್ನು ಸನ್ಮಾನಿಸಲಾಯಿತು.
ಬಿ. ಎಂ. ಜಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಎಂ. ಜಿ. ಬಾಣಕಾರ, ಎನ್. ಆರ್. ಕುಲಕರ್ಣಿ, ಶ್ರೀನಿವಾಸ ಅಪರಂಜಿ, ಎಸ್. ಬಿ. ಬುರ್ಲಿ, ಎಂ. ಎಂ. ಹೊಂಬರಡಿ, ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಎಚ್. ಬಿ. ನದಾಫ್, ಬಿ. ಜೆ. ಜೋರಾಪೂರ, ಎಂ. ಪಿ. ದುಪದಾಳ, ಎಚ್. ವಾಯ್. ಆಲಮೇಲ, ಎಂ. ಬಿ. ಶೆಟ್ಟಿ, ಎಂ. ಎಸ್. ಕಲಕಂಬ, ಬಿ. ಎಸ್. ಬಳ್ಳೂರ ಸೇರಿದಂತೆ ಅನೇಕರು ಇದ್ದರು.
Social Plugin